ನವದೆಹಲಿ:ಮಹತ್ವದ ತೀರ್ಪೆಂದರಲ್ಲಿ ಅವಿವಾಹಿತ ಮಹಿಳೆಗೆ ಜನಿಸಿದ ವ್ಯಕ್ತಿ ಆತನ ಜೈವಿಕ ತಂದೆಯಿಂದ ಎಲ್ಲಾ ಕಾನೂನು ಪ್ರಯೋಜನಗಳಿಗೆ ಅರ್ಹನಾಗಿದ್ದಾನೆ ಎಂದು ಛತ್ತೀಸ್​ಗಢ ಹೈಕೋರ್ಟ್ ಘೊಷಿಸಿದೆ.
ಸೂರಜ್​ಪುರ ಜಿಲ್ಲೆಯ ಯುವಕನೊಬ್ಬ ತನ್ನ ತಂದೆಯಿಂದ ಜೀವನಾಂಶ ಮತ್ತು ಆಸ್ತಿಯಲ್ಲಿ ಪಾಲು ಕೇಳಿದ್ದ. ಕೌಟುಂಬಿಕ ನ್ಯಾಯಾಲಯವು ಆತನ ಮನವಿಯನ್ನು ವಜಾಗೊಳಿಸಿದ್ದರಿಂದ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದ. ಕೌಟುಂಬಿಕ ನ್ಯಾಯಾಲಯದ ಆದೇಶ ತಳ್ಳಿಹಾಕಿದ ಹೈಕೋರ್ಟ್, ಕೆಳ ನ್ಯಾಯಾಲಯದ ತೀರ್ಪು ನೆಲದ ಕಾನೂನಿಗೆ ಅನುಗುಣವಾಗಿಲ್ಲ ಎಂದು ತೀರ್ಪು ನೀಡಿದೆ. ಯುವಕನ ಜೈವಿಕ ತಂದೆ ಮತ್ತು ತಾಯಿ ನೆರೆಹೊರೆಯವರಾಗಿದ್ದರು ಮತ್ತು ಸಂಬಂಧ ಹೊಂದಿದ್ದರಿಂದ ಆಕೆ ಗರ್ಭಿಣಿಯಾಗಿದ್ದಳು. ತಂದೆ ಗರ್ಭಪಾತಕ್ಕೆ ಒತ್ತಾಯಿಸಿದರೂ ತಾಯಿ ನಿರಾಕರಿಸಿ, ಅತ್ಯಾಚಾರದ ದೂರು ದಾಖಲಿಸಿದರು. 1995ರಲ್ಲಿ ಈ ಯುವಕನಿಗೆ ಜನ್ಮ ನೀಡಿದ್ದ ತಾಯಿ, ಆತನನ್ನು ಒಬ್ಬಂಟಿಯಾಗಿದ್ದುಕೊಂಡೇ ಬೆಳೆಸಿದ್ದಳು. ಯಾವುದೇ ಆದಾಯದ ಮೂಲವಿಲ್ಲದೆ ಮತ್ತು ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿರುವ ತಾಯಿ, ಯುವಕನ ಜೊತೆಗೆ ಸೂರಜ್​ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಸೆಕ್ಷನ್ 125 ಸಿಆರ್​ಪಿಸಿ ಅಡಿಯಲ್ಲಿ ತಂದೆಯಿಂದ ಜೀವನಾಂಶ ಕೋರಿದ್ದರು. ತಂದೆಯ ಹೆಸರನ್ನು ಸೂಚಿಸುವ ಅಧಿಕೃತ ಮತ್ತು ಸರ್ಕಾರೇತರ ದಾಖಲೆಗಳಿದ್ದರೂ ಪಿತೃತ್ವವನ್ನು ತಂದೆ ನಿರಾಕರಿಸಿದ್ದರು.
ಕುಟುಂಬ ನ್ಯಾಯಾಲಯವು ಆಸ್ತಿ ಹಕ್ಕುಗಳನ್ನು ನೀಡುವುದರ ವಿರುದ್ಧ ತೀರ್ಪು ನೀಡಿತು. ಇದು ವಿವಾಹದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ತಿಳಿಸಿತು. 2017ರ ಏಪ್ರಿಲ್​ನಲ್ಲಿ, ಯುವಕ ಅನಾರೋಗ್ಯಕ್ಕೆ ತುತ್ತಾಗಿ, ಆರ್ಥಿಕ ತೊಂದರೆಗಳನ್ನು ಎದುರಿಸಿದ. ತಮ್ಮ ಚಿಕಿತ್ಸೆಗೆ ಹಣಕಾಸಿನ ಸಹಾಯಕ್ಕಾಗಿ ತಮ್ಮ ಜೈವಿಕ ತಂದೆ ಸಂರ್ಪಸಿದರೂ ಪ್ರಯೋಜನವಾಗಲಿಲ್ಲ. ಮತ್ತೆ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆಸ್ತಿ ಹಕ್ಕನ್ನು ಕೋರಲಾಯಿತು. ಅದು ಮತ್ತೆ ವಜಾಗೊಂಡಿದ್ದರಿಂದ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಸಮಯದ ಮಿತಿ ಇಲ್ಲ ಎಂದ ಕೋರ್ಟ್ : ಪರಿಹಾರ ಪಡೆಯಲು ಯಾವುದೇ ಸಮಯದ ಮಿತಿ ಇಲ್ಲ ಎಂದು ಗಮನಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಹಕ್ಕುಗಳಿಂದ ವಂಚಿತರಾದ ಮಕ್ಕಳಿಗೆ ನ್ಯಾಯಾಲಯ ಯಾವಾಗಲೂ ಲಭ್ಯವಿರುತ್ತದೆ. ಕೌಟುಂಬಿಕ ನ್ಯಾಯಾಲಯದ ತೀರ್ಪು ದೋಷಪೂರಿತ ಮತ್ತು ಕಾನೂನುಬದ್ಧವಾಗಿಲ್ಲ ಎಂದು ಹೇಳಿತು. ಯುವಕನನ್ನು ಇಬ್ಬರು ಪೋಷಕರ ಕಾನೂನುಬದ್ಧ ಮಗ ಎಂದು ಘೊಷಿಸಿ, ತಂದೆ ನೀಡಬೇಕಾದ ಎಲ್ಲ ಪ್ರಯೋಜನಗಳಿಗೆ ಅರ್ಹನಾಗಿದ್ದಾನೆಂದು ಹೇಳಿತು.
ನವದೆಹಲಿ:ತಮ್ಮ 30 ವರ್ಷದ ಪುತ್ರ 11 ವರ್ಷಗಳಿಂದ ಕೋಮಾ ದಲ್ಲಿದ್ದು, ಚಿಕಿತ್ಸಾ ವೆಚ್ಚಗಳು ಹೆಚ್ಚುತ್ತಿವೆ. ಆತ ಚೇತರಿಸಿಕೊಳ್ಳುವ ಸಾಧ್ಯತೆಯೂ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸಾ ವೆಚ್ಚಗಳನ್ನು ಭರಿಸಲು ನಮಗೆ ಕಷ್ಟವಾಗುತ್ತಿದೆ. ಹೀಗಾಗಿ ಪುತ್ರನಿಗೆ ದಯಾಮರಣ ಕಲ್ಪಿಸಬೇಕು ಮತ್ತು ರೈಲ್ಸ್ ಟ್ಯೂಬ್ ಮೂಲಕ ಆತನಿಗೆ ಆಹಾರ ನೀಡಲಾಗುತ್ತಿದ್ದು, ಅದನ್ನು ಹಿಂಪಡೆದುಕೊಳ್ಳುವ ನಮ್ಮ ಮನವಿಯನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿ ಒಂದನ್ನು ರಚಿಸಬೇಕೆಂದು ಯುವಕನ ಹೆತ್ತವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಮೂಗಿನ ಮೂಲಕ ಹೊಟ್ಟೆಯೊಳಗೆ ಆಹಾರ ತಲುಪಿಸಲು ರೈಲ್ಸ್ ಟ್ಯೂಬ್​ನ್ನು ಬಳಸಲಾಗುತ್ತದೆ.
ರೈಲ್ಸ್ ಟ್ಯೂಬ್​ನ್ನು ತೆಗೆದುಹಾಕುವುದು ದಯಾಮರಣದ (ಪ್ಯಾಸಿವ್ ಯೂಥನಾಸಿಯಾ) ಭಾಗವಲ್ಲ. ರೈಲ್ಸ್ ಟ್ಯೂಬ್ ತೆಗೆದರೆ, ರೋಗಿಯು ಹಸಿವಿನಿಂದ ಸಾಯುತ್ತಾನೆ ಎಂದು ಹೆತ್ತವರಾದ ಅಶೋಕ್ ರಾಣಾ ಮತ್ತು ನಿರ್ಮಲಾ ದೇವಿಗೆ ತಿಳಿಸಿದ ನ್ಯಾಯಪೀಠ, ಯಾವುದಾದರೂ ಸಂಸ್ಥೆಯು ಈ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಬಹುದೇ ಎಂದು ಕಂಡುಕೊಳ್ಳಬಹುದು ಎಂದು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿತು.
ಗಣೇಶೋತ್ಸವ ಅನುಮತಿಗೆ ಏಕಗವಾಕ್ಷಿ ಕೇಂದ್ರ; ಪಿಒಪಿ ಗಣೇಶ ಮೂರ್ತಿಗೆ ನಿಷೇಧ; ತುಷಾರ್ ಗಿರಿ ನಾಥ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
