ಮುಂಬೈ:ಈ ಹಿಂದೆ ಭಾರತ ತಂಡದ ಆಕ್ರಮಣಕಾರೀ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದ ಪ್ರವೀಣ್ ಕುಮಾರ್ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಹಿರಿಯ ಆಟಗಾರರ ಬಗ್ಗೆ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಇಡಿಗೆ ಸಿಕ್ತು 16ಲಕ್ಷ ರೂ.ನಗದು, ಮಹತ್ತರ ದಾಖಲೆ: ಕಾಂಗ್ರೆಸ್​ ಶಾಸಕ ನಂಜೇಗೌಡ ಲಾಕ್​ ಆಗುವರೇ?
ಪ್ರವೀಣ್ ತಮ್ಮ ಕುಡಿತದ ಚಟ, ಮೈದಾನದ ಹೊರಗಿನ ಅತಿರೇಕದ ವರ್ತನೆಯಿಂದಲೇ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ, ತಂಡದಲ್ಲಿ ನಾನು ಮಾತ್ರ ಮದ್ಯ ಸೇವಿಸುತ್ತಿದ್ದ ವ್ಯಕ್ತಿ ಅಲ್ಲ. ಎಲ್ಲರೂ ಕಂಠಪೂರ್ತಿ ಕುಡಿಯುತ್ತಿದ್ದರು. ಹೀಗಾಗಿ ಆಗ ನಾವೆಲ್ಲರೂ ಕುಡುಕರೇ ಆಗಿದ್ದೆವು ಎಂದು ಹೇಳಿದ್ದಾರೆ.
ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರು ಸೇರಿದಂತೆ ಎಲ್ಲರೂ ಮಧ್ಯ ಸೇವಿಸುತ್ತಿದ್ದೆವು. ಆದರೆ ಕೇವಲ ಪ್ರವೀಣ್ ಮದ್ಯಪಾನ ಮಾಡುತ್ತಾನೆ ಎನ್ನುವುದಷ್ಟೇ ಸುದ್ದಿಯಾಯಿತು. ನಾನು ಮದ್ಯಪಾನ ಮಾಡುವಾಗ ಹಾಗೆ ಮಾಡಬೇಡ ಎಂದು ಸೀನಿಯರ್ ಆಟಗಾರರು ಹೇಳುತ್ತಿದ್ದರು. ಆದರೆ ಯಾರೂ ಇದಕ್ಕೆ ಹೊರತಾಗಿರಲಿಲ್ಲ ಎಂದಿದ್ದಾರೆ.
ಹಾಗಿದ್ದರೆ ನಿಮಗೆ ಕುಡಿಯದಂತೆ ಸಲಹೆ ನೀಡುತ್ತಿದ್ದವರಲ್ಲಿ ಸಚಿನ್, ದ್ರಾವಿಡ್, ಗಂಗೂಲಿ, ಧೋನಿಯಂತಹ ಆಟಗಾರರಿದ್ದಾರಾ ಎಂಬ ಪ್ರಶ್ನೆಗೆ ಪ್ರವೀಣ್, ನಾನು ಯಾರ ಹೆಸರನ್ನೂ ಕ್ಯಾಮರಾ ಮುಂದೆ ಹೇಳಲು ಬಯಸಲ್ಲ ಎಂದಿದ್ದಾರೆ.
2018 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಭಾರತ ತಂಡದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್, ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪ್ರತಿಯೊಬ್ಬ ಆಟಗಾರನೂ ಮದ್ಯಪಾನ ಮಾಡುತ್ತಿದ್ದರು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದಂತೆ ಮತ್ತೊಮ್ಮೆ ಅತಿರೇಖದ ಹೇಳಿಕೆ ನೀಡಿ ಕ್ರೀಡಾಪ್ರಿಯರ ಗಮನ ಸೆಳೆದಿದ್ದಾರೆ.ಉತ್ತರ ಪ್ರದೇಶ ಮೂಲದ ಪ್ರವೀಣ್​ ಕುಮಾರ್ 2007 ರಲ್ಲಿ ತನ್ನ 21 ನೇ ವಯಸ್ಸಿನಲ್ಲಿ ಪಾಕಿಸ್ತಾನ ವಿರುದ್ಧದ ಒದಿಐನಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು.
ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಜತೆ ಇನ್ನೂ ಮೂವರು ಸಿಎಂಗಳು: ಚುನಾವಣೆಗೆ ಮುನ್ನ ಬಿಜೆಪಿಯ ಬಿಗ್ ಸ್ಟ್ರಾಟಜಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 9 =
Remember me
