ಪೌರಾಣಿಕ, ಚಾರಿತ್ರಿಕವಾಗಿ ಸಂಬಂಧ ಹೊಂದಿರುವ ಲಂಕಾ ಬಗ್ಗೆ ಭಾರತ ಸಹಾನುಭೂತಿ ಹೊಂದಿದೆ. ತೈಲ ಖರೀದಿಸಲು ದುಡ್ಡಿಲ್ಲದ ದ್ವೀಪರಾಷ್ಟ್ರಕ್ಕೆ ಪೆಟ್ರೋಲ್, ಡೀಸೆಲ್ ಪೂರೈಕೆಯನ್ನು ಉದಾರಿಯಾಗಿ ನೀಡಿದೆ. ಇದರ ಬಾಬ್ತು 3.80 ಶತಕೋಟಿ ಡಾಲರ್ (30 ಸಾವಿರ ಕೋಟಿ ರೂಪಾಯಿ). ಇಷ್ಟಲ್ಲದೆ ಟ್ರಿಂಕೋಮಲಿ ಬಂದರಿನಲ್ಲಿರುವ ಸುಮಾರು 100 ತೈಲಾಗಾರಗಳ ಪುನಶ್ಚೇತನಕ್ಕೂ ಭಾರತ ಸಹಾಯ ಮಾಡುತ್ತಿದೆ. ಜತೆಗೆ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಉಚಿತವಾಗಿ ಪೂರೈಕೆ ಮಾಡಿದೆ. ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಈವರೆಗೆ ದೊಡ್ಡ ಮಟ್ಟದಲ್ಲಿ ಕಾಣಿಸಿಲ್ಲ. ನಿರಾಶ್ರಿತರಾಗಿ ಬಂದವರಿಗೆ ನೂರಾರು ಮಂದಿಗೆ ತಮಿಳುನಾಡಿನ ಶಿಬಿರಗಳಲ್ಲಿ ತಾತ್ಕಾಲಿಕವಾಗಿ ವಸತಿ ಕಲ್ಪಿಸಲಾಗಿದೆ. 1960, 1983 ಮತ್ತು 2009ರಲ್ಲಿ ಲಕ್ಷಾಂತರ ಜನರು ಭಾರತಕ್ಕೆ ವಲಸೆ ಬಂದಿದ್ದರು.
ಒನ್ ಬೆಲ್ಟ್ ಇನಿಷಿಯೇಟಿವ್ ಯೋಜನೆಯಲ್ಲಿ ಶ್ರೀಲಂಕಾವನ್ನು ಸೇರಿಸಿಕೊಂಡಿರುವ ಚೀನಾ, ಉಪಕಾರ ಮಾಡುವ ನೆಪದಲ್ಲಿ ಲಂಕಾದ ಆರ್ಥಿಕತೆಯನ್ನು ನುಂಗಿನೊಣೆದಿದೆ. ಚೀನಾಕ್ಕೆ 8 ಬಿಲಿಯನ್ ಡಾಲರ್ (63 ಸಾವಿರ ಕೋಟಿ ರೂ. ಭಾರತದ ಕರೆನ್ಸಿ) ಸಾಲವನ್ನು ಲಂಕಾ ಮರುಪಾವತಿ ಮಾಡಬೇಕಿದೆ. ಲಂಕಾದ ಎರಡನೇ ಅತಿ ದೊಡ್ಡ ಬಂದರಾಗಿರುವ ಹಂಬಂತೋಟವನ್ನು ಅಭಿವೃದ್ಧಿ ಪಡಿಸುವ ನೆಪದಲ್ಲಿ ಅದನ್ನು ಚೀನಾ ಗಿರವಿ ಇರಿಸಿಕೊಂಡಿದೆ. ಲಂಕಾ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಸಮಯದಲ್ಲೂ ಸಾಲದಿಂದ ವಿನಾಯಿತಿ ನೀಡಲು ಒಪ್ಪದ ಚೀನಾ ಕಠೋರ ನೀತಿಯನ್ನು ಅನುಸರಿಸಿದೆ. ಸ್ವಾವಲಂಬಿಯಾಗಲು ಪ್ರಯತ್ನಿಸಿ ನೆರವು ನೀಡುತ್ತೇವೆ ಎಂದು 76 ಮಿಲಿಯನ್ ಡಾಲರ್ (600 ಕೋಟಿ ರೂ. ಭಾರತದ ಕರೆನ್ಸಿ) ಸಾಲವನ್ನು ದುರ್ದಾನ ಎನ್ನುವಂತೆ ನೀಡಿದೆ. ಇದು ಕಾಳಜಿಯಿಂದ ನೀಡಿದ್ದಲ್ಲ, ಜಾಗತಿಕ ಸಮುದಾಯದ ಮುಂದೆ ಮುಖಉಳಿಸಿಕೊಳ್ಳುವ ಪ್ರಯತ್ನವಷ್ಟೆ.
ಸರ್ಕಾರ ತಕ್ಷಣ ಏನು ಮಾಡಬೇಕು?:ಹಣವಿಲ್ಲದೆ ಪರದಾಡುತ್ತಿರುವ ಕಾರಣ ಶೀಘ್ರ ನೆರವು ನೀಡುವಂತೆ ಸಿಲೋನ್ ಸರ್ಕಾರ ಐಎಂಎಫ್​ಗೆ ಮತ್ತೆ ಮನವಿ ಮಾಡಬೇಕಿದೆ. ಆದರೆ, ರಾಜಕೀಯ ಅಸ್ಥಿರತೆ ಇರುವ ಕಾರಣ ಈ ಪ್ರಯತ್ನ ಮುಂದಕ್ಕೆ ಹೋಗಲಿದೆ. ಏಷ್ಯಾ ಉಪಖಂಡದ ವಿಶೇಷವಾಗಿ ಭಾರತ, ಚೀನಾಗಳಿಂದ ಹೆಚ್ಚಿನ ನೆರವನ್ನು ಪಡೆಯಲು ಸರ್ಕಾರ ಪ್ರಯತ್ನಿಸಬೇಕಿದೆ. ಅಮೆರಿಕ, ಜಪಾನ್, ಆಸ್ಟ್ರೇಲಿಯಾಗಳು ಕೆಲವು ಲಕ್ಷ ಡಾಲರ್​ಗಳ ನೆರವನ್ನು ಈಗಾಗಲೇ ನೀಡಿವೆ.
ಮುಂದೇನು?:ಪ್ರತಿಭಟನಾಕಾರರ ಬಿಗಿಪಟ್ಟಿಗೆ ಕಡೆಗೂ ಮಣಿದಿರುವ ಅಧ್ಯಕ್ಷ ಗೋತಬಯ ರಾಜಪಕ್ಸ ಬುಧವಾರ (ಜುಲೈ 13) ರಾಜೀನಾಮೆ ನೀಡುವುದಾಗಿ ಅಜ್ಞಾತ ಸ್ಥಳದಿಂದಲೇ ಹೇಳಿದ್ದಾರೆ. ಸರ್ವಪಕ್ಷಗಳ ಮಧ್ಯಂತರ ಸರ್ಕಾರಕ್ಕೆ ಸಮ್ಮತಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ರನಿಲ ವಿಕ್ರಮಸಿಂಘ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿ ಅನುಪಸ್ಥಿತಿಯಲ್ಲಿ ಸಂಸತ್​ನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು. ಸಂಸದರು ಶೀಘ್ರದಲ್ಲೇ ಸಭೆ ಸೇರಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎನ್ನುತ್ತದೆ ಲಂಕಾ ಸಂವಿಧಾನ.
ಜನರ ಮೇಲಾಗುತ್ತಿರುವ ದುಷ್ಪರಿಣಾಮ:ಲಂಕಾದಲ್ಲಿನ ಬೆಲೆ ಏರಿಕೆ ಪರಿಣಾಮ ಜನರು ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಆಗುತ್ತಿಲ್ಲ. 10ರಲ್ಲಿ 9 ಕುಟುಂಬಗಳು ಒಪ್ಪೊತ್ತಿನ ಊಟ ಬಿಟ್ಟಿವೆ ಅಥವಾ ಕಡಿಮೆ ಮಾಡಿವೆ ಎಂದು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮ ತಿಳಿಸಿದೆ. 30 ಲಕ್ಷ ಮಂದಿಗಷ್ಟೆ ತುರ್ತು ಮಾನವೀಯ ನೆರವು ಲಭ್ಯವಾಗುತ್ತಿದೆ. ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗಲು ಬಯಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ನೌಕರರಿಗೆ ಮೂರು ತಿಂಗಳವರೆಗೆ ಹೆಚ್ಚುವರಿ ರಜೆ ನೀಡಿ ಆಹಾರ ಬೆಳೆದುಕೊಳ್ಳುವಂತೆ ಸೂಚಿಸಲಾಗಿದೆ.
50 ಸಾವಿರ ಡಾಲರ್ ಪತ್ತೆ:ಅಧ್ಯಕ್ಷರ ಅರಮನೆಯಲ್ಲಿ ಗರಿಗರಿ ನೋಟುಗಳು ದೊರಕಿದ್ದು, ಇದರ ಮೊತ್ತ 50 ಸಾವಿರ ಡಾಲರ್ (ಸುಮಾರು 40 ಲಕ್ಷ ರೂಪಾಯಿ). ಈ ಹಣವನ್ನು ಸೋಮವಾರ ಕೋರ್ಟ್​ಗೆ ಜಮೆ ಮಾಡುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಸದ್ಯ ಈ ಹಣ ಪೊಲೀಸರ ವಶದಲ್ಲಿದೆ. ಅಧ್ಯಕ್ಷರ ಅರಮನೆಯಲ್ಲಿ ಸೂಟ್​ಕೇಸ್ ತುಂಬ ದಾಖಲಾತಿಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.
ದೇಶದ ಹೊಸ ಅಧ್ಯಕ್ಷರ ಆಯ್ಕೆಯನ್ನು ಜುಲೈ 20ಕ್ಕೆ ನಡೆಸಲು ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ. ಜುಲೈ 15ರಂದು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಧಿಕೃತವಾಗಿ ಅಧ್ಯಕ್ಷರ ಆಯ್ಕೆ ದಿನಾಂಕವನ್ನು ಘೋಷಿಸಲಿದೆ. ಜುಲೈ 19ರ ವರೆಗೆ ನಾಮಪತ್ರ ಸಲ್ಲಿಸಬಹುದು.
|ಮಹಿಂದ ಯಾಪಾ ಅಬೇವರ್ಧನಸಂಸತ್ ಸ್ಪೀಕರ್
ಅಧ್ಯಕ್ಷರ ಅರಮನೆಯಲ್ಲಿ ಜನಜಂಗುಳಿ:ಅಧ್ಯಕ್ಷರ ನಿವಾಸಕ್ಕೆ ನುಗ್ಗಿರುವ ಜನರು ಗೋತಬಯ ರಾಜೀನಾಮೆ ನೀಡುವವರೆಗೂ ತೆರವು ಮಾಡುವುದಿಲ್ಲ ಎಂಬ ಪಟ್ಟನ್ನು ಮುಂದುವರಿಸಿದ್ದಾರೆ. ಅರಮನೆ ಆವರಣದಲ್ಲಿ ಅಡುಗೆ ಸಿದ್ಧಪಡಿಸಿ ಉಣ್ಣುತ್ತಿದ್ದಾರೆ. ಸೋಫಾಗಳಲ್ಲಿ ಕುಳಿತು ಫೋಟೋ, ಸೆಲ್ಪಿ ತೆಗೆದು ಕೊಳ್ಳುವುದು, ಈಜುಕೊಳದಲ್ಲಿ ಈಜಾಟ, ಜಿಮ್ೆ ನುಗ್ಗಿ ಕಸರತ್ತು ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.
ಸರ್ವಪಕ್ಷಗಳ ಸರ್ಕಾರ, ಮುನ್ನಡೆಸಲು ಸಿದ್ಧವೆಂದ ಎಸ್​ಜೆಬಿ:ಸರ್ವಪಕ್ಷಗಳು ಸೇರಿ ರಚಿಸಲಿರುವ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲು ಸಿದ್ಧ ಎಂದು ಪ್ರಮುಖ ವಿರೋಧ ಪಕ್ಷ ಎಸ್​ಜೆಬಿ ಹೇಳಿದೆ. ಆದರೆ, ಯಾವುದೇ ಪಕ್ಷ ವಿಶ್ವಾಸಘಾತ ಮಾಡಬಾರದು. ಹಾಗೇನಾದರೂ ಆದರೆ ಅದು ರಾಷ್ಟ್ರದ್ರೋಹವಾಗುತ್ತದೆ ಎಂದು ಎಚ್ಚರಿಸಿದೆ. ಹೊಸ ಸರ್ಕಾರ ರಚನೆಗೂ ಮುನ್ನ ವಿಕ್ರಮಸಿಂಘ ಅವರ ಸಂಪುಟ ರಾಜೀನಾಮೆ ನೀಡಿ, ಜವಾಬ್ದಾರಿಯನ್ನು ಹೊಸ ಸರ್ಕಾರಕ್ಕೆ ವಹಿಸಲಿದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.
ಈ ಮೊದಲು ಘೋಷಣೆ ಮಾಡಿರುವಂತೆ ಅಧ್ಯಕ್ಷ ಗೋತಬಯ ರಾಜಪಕ್ಸ ಜುಲೈ 13ರಂದು ರಾಜೀನಾಮೆ ನೀಡಲಿದ್ದಾರೆ. ಸರ್ವ ಪಕ್ಷಗಳ ಸರ್ಕಾರ ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ.
|ರನಿಲ ವಿಕ್ರಮಸಿಂಘಉಸ್ತುವಾರಿ ಪ್ರಧಾನಿ
ಸೇನೆ ಕಳಿಸಿಲ್ಲವೆಂದ ಭಾರತ:ನಾಗರಿಕ ದಂಗೆಯಂತಹ ಪರಿಸ್ಥಿತಿ ಎದುರಿಸುತ್ತಿರುವ ಲಂಕಾಕ್ಕೆ ಭಾರತ ಸೇನೆ ಕಳುಹಿಸಿದೆ ಎಂಬ ಸುದ್ದಿ ಸುಳ್ಳು ಎಂದು ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಸ್ಪಷ್ಟಪಡಿಸಿದೆ. ಶ್ರೀಲಂಕಾಕ್ಕೆ ಭಾರತದಿಂದ ಸೇನೆ ರವಾನೆ ಆಗಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಆದರೆ ಇದು ಊಹಾಪೋಹ ಎಂದು ಹೈಕಮಿಷನ್ ಟ್ವೀಟ್ ಮಾಡಿದೆ.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

ಕಿಚ್ಚ ಸುದೀಪ್​ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
