ನವದೆಹಲಿ:ಬ್ಯಾಂಕ್​ಗಳು ವಾರಕ್ಕೆ ಐದು ದಿನ ಕಾರ್ಯ ನಿರ್ವಹಿಸಿ ವಾರಾಂತ್ಯದ ಎರಡು ದಿನ ಬಿಡುವ ಪಡೆಯುವ ಸಾಧ್ಯತೆ ಇದೆ. ಈ ಕುರಿತ ಜುಲೈ 28ಕ್ಕೆ ನಡೆಯುವ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮೂಲಗಳು ಹೇಳಿವೆ. ವಾರಕ್ಕೆ ಐದು ದಿನ ಮಾತ್ರ ಬ್ಯಾಂಕ್ ಕಾರ್ಯನಿರ್ವಹಣೆ ಜಾರಿ ಯಾದರೆ, ಸೋಮವಾರ ದಿಂದ ಶುಕ್ರವಾರದವರೆಗೆ ಬೆಳಗ್ಗೆ 9.45ರಿಂದ ಸಂಜೆ 5.30ರವರೆಗೆ ಬ್ಯಾಂಕ್​ಗಳು ಕಾರ್ಯನಿರ್ವಹಿಸಬೇಕಾಗುತ್ತದೆ.
ಹಾಲಿ ಇರುವ ಕೆಲಸದ ಅವಧಿಗಿಂತ 40 ನಿಮಿಷ ಹೆಚ್ಚಾಗಲಿದೆ. ಪ್ರಸ್ತುತ ಬ್ಯಾಂಕ್​ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು 4ನೇ ಶನಿವಾರ ಹಾಗೂ ಎಲ್ಲ ಭಾನುವಾರಗಳು ರಜೆ ಇರುತ್ತವೆ. ಇದರೊಟ್ಟಿಗೆ ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಹಬ್ಬಹರಿ ದಿನ ರಜೆಗಳು ಇದೆ. ವಾರಾಂತ್ಯದ ಎರಡೂ ದಿನ ರಜೆ ಘೋಷಣೆಯಾದರೆ ಎಲ್ಲ ಶನಿವಾರಗಳೂ ಬ್ಯಾಂಕ್ ಮುಚ್ಚಿರಲಿದೆ.
ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆ ಕಳೆದ ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ ವಾರಕ್ಕೆ 5 ದಿನ ಕಾರ್ಯನಿರ್ವಹಣೆ ಪ್ರಸ್ತಾವವನ್ನು ಭಾರತೀಯ ಬ್ಯಾಂಕ್ ಅಸೋಷಿಯೇಷನ್ (ಐಬಿಎ) ಮುಂದೆ ಇರಿಸಿತ್ತು. ಈ ವಿಷಯ ಜುಲೈ 28ರ ಸಭೆಯಲ್ಲಿ ಅಂತಿಮವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
