ನವದೆಹಲಿ:ಆಪರೇಷನ್ ಗಂಗಾ ಮೂಲಕ ಯೂಕ್ರೇನ್​ನಿಂದ ಭಾರತಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಪೂರ್ಣಗೊಳಿಸುವುದಕ್ಕೆ ಅನುಕೂಲ ಒದಗಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಸೋಮವಾರ ಸಂಸತ್​ಗೆ ತಿಳಿಸಿದರು. ಅವರು ಕಾಂಗ್ರೆಸ್ ಸದಸ್ಯ ಗೌರವ್ ಗೊಗೋಯ್ ಅವರ ಪ್ರಶ್ನೆಗೆ ಉತ್ತರಿಸಿದ್ದು, ವಿದ್ಯಾರ್ಥಿ ಗಳನ್ನು ಯೂಕ್ರೇನ್​ನಿಂದ ವಾಪಸ್ ಕರೆತರುವುದಕ್ಕೆ ನಿರ್ಧರಿಸಿದಾಗಲೇ ಅವರ ಕನಸುಗಳನ್ನು ಈಡೇರಿಸಲು ಅಗತ್ಯ ವಾತಾವರಣ ಒದಗಿಸುವ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ ಎಂದು ವಿವರಿಸಿದರು.
ಈ ಮಧ್ಯೆ, ಕರ್ನಾಟಕ ಸರ್ಕಾರ ಕೂಡ ಯೂಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವುದಾಗಿ ಹೇಳಿದೆ. ವೈದ್ಯ ವಿದ್ಯಾರ್ಥಿಗಳ ವ್ಯಾಸಂಗ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಾ. ಕೆ.ಸುಧಾಕರ್ ಭರವಸೆ ನೀಡಿದರು. ವಿಧಾನ ಪರಿಷತ್​ನಲ್ಲಿ ಜೆಡಿಎಸ್​ನ ಕೆ.ಟಿ. ಶ್ರೀಕಂಠೇಗೌಡ ಈ ವಿಷಯದತ್ತ ಗಮನಸೆಳೆದಾಗ ಉತ್ತರಿಸಿದ ಅವರು, ರಾಷ್ಟ್ರೀಯ ವೈದ್ಯಕೀಯ ಮಂಡಳಿಯೊಂದಿಗೆ ಕೇಂದ್ರ ಮಾತುಕತೆ ನಡೆಸಿದ್ದು, ರಾಜ್ಯದಲ್ಲೂ ಸಿಎಂ ಜತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸುವ ಮಾಗೋಪಾಯಗಳ ಚಿಂತನೆ ನಡೆದಿದೆ ಎಂದರು.
ನವೀನ್ ದೇಹ ತರಿಸಿಕೊಡಿ:ಪ್ರಶ್ನೋತ್ತರ ಕಲಾಪಕ್ಕೆ ಮುನ್ನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನವೀನ್ ಮೃತದೇಹ ತರಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ಮಗ ಜೀವಂತ ಬರಲಿಲ್ಲ, ಕನಿಷ್ಠಪಕ್ಷ ಹೆಣವನ್ನಾದರೂ ತರಿಸಿಕೊಟ್ಟು ಅಂತಿಮ ಕ್ರಿಯೆ ನೆರವೇರಿಸಲು ಅವಕಾಶಕೊಡಿ ಎಂದು ಮನವಿ ಮಾಡಿದ್ದಾರೆ ಎಂದರು. ಕಾಂಗ್ರೆಸ್​ನ ಸಲೀಂ ಅಹಮದ್, ಆದಷ್ಟು ಬೇಗ ಪಾರ್ಥಿವ ಶರೀರ ತರಿಸಬೇಕೆಂದು ಕೋರಿದರು.
ಅನುರಣಿಸಿದ ಮೋದಿ ಘೋಷಣೆ:ಸಂಸತ್ ಕಲಾಪಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವೇಶಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಮೇಜು ಬಡಿದು ಮೋದಿ, ಮೋದಿ ಘೋಷಣೆ ಕೂಗಲಾರಂಭಿಸಿದರು. ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಸಿಕ್ಕ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಮೋದಿ ಅವರನ್ನು ಸದಸ್ಯರು ಸ್ವಾಗತಿಸಿದ ಪರಿ ಇದು. ಎಂದಿನಂತೆ ಮೋದಿ ವಿನಯಪೂರ್ವಕವಾಗಿ ಎಲ್ಲರಿಗೂ ವಂದಿಸಿ ತಮ್ಮ ಆಸನದಲ್ಲಿ ಕುಳಿತರು.
50% ಏರಿದ್ದರೂ ಭಾರತದಲ್ಲಿ ಏರಿದ್ದು 5%:ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ದರ ಶೇಕಡ 50ಕ್ಕೂ ಹೆಚ್ಚು ಏರಿಕೆಯಾಗಿದೆ. ಆದರೆ ಭಾರತದಲ್ಲಿ ಇದು ಶೇಕಡ 5 ಮಾತ್ರ ಏರಿಕೆಯಾಗಿದೆ. ಅಮೆರಿಕ (50%), ಕೆನಡಾ(55%), ಫ್ರಾನ್ಸ್(58%), ಜರ್ಮನಿ(55%), ಬ್ರಿಟನ್(55%) ಮತ್ತು ಸ್ಪೇನ್ (55%)ಗಳಲ್ಲಿ ಏರಿದೆ ಎಂದು ಸಚಿವ ಪುರಿ ವಿವರಿಸಿದರು.
ದರ ಏರಿಕೆಯಿಂದ ಗ್ರಾಹಕರಿಗೆ ರಿಲೀಫ್:ಪೆಟ್ರೋಲ್, ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯ ಆತಂಕ ತಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸಂಸತ್​ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಭರವಸೆ ನೀಡಿದರು. ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯಾಪ್ತಿಗೆ ತರುವ ಪ್ರಶ್ನೆಗೆ ಉತ್ತರಿಸಿದ ಪುರಿ, ಈ ವಿಚಾರ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಈ ಬಗ್ಗೆ ರಾಜ್ಯಗಳಿಂದ ಒಲವು ವ್ಯಕ್ತವಾಗಿಲ್ಲ. ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದಲೇ ರಾಜ್ಯಗಳಿಗೆ ಹೆಚ್ಚಿನ ಆದಾಯ ಬರುತ್ತದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಒಂಬತ್ತು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಸಿಲ್ಲ ಎಂದು ಸಚಿವ ಪುರಿ ಸಂಸತ್​ಗೆ ತಿಳಿಸಿದರು. 2021ರ ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ ಪ್ರತಿ ಲೀಟರಿಗೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರಿಗೆ 10 ರೂಪಾಯಿ ಅಬಕಾರಿ ಸುಂಕ ಇಳಿಸಿತ್ತು.
ಹುಬ್ಬಳ್ಳಿಯಲ್ಲಿ ಅಪ್ಪು ಬೆಳಕು; ಪುನೀತ್ ಜನ್ಮದಿನಂದು ಬೃಹತ್ ನೇತ್ರದಾನ ವಾಗ್ದಾನ ಶಿಬಿರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
