ಮುಂಬೈ:ಭಾರತ ಹಿಂದೂ ರಾಷ್ಟ್ರವಾಗಿದ್ದು, ಎಲ್ಲಾ ಭಾರತೀಯರು ಹಿಂದೂಗಳನ್ನು ಪ್ರತಿನಿಧಿಸುತ್ತಾರೆ. ಹಿಂದೂಗಳೆಲ್ಲಾ ಭಾರತೀಯರನ್ನು ಪ್ರತಿನಿಧಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.
ಮುಂಬೈನಲ್ಲಿ ದೈನಿಕ್​ ತರುಣ್​ ಭಾರತ್​ ಪತ್ರಿಕೆಯ ಮಧುಕರ್​ ಭವನವನ್ನು ಉದ್ಘಾಟಿಸಿ ಮಾತನಾಡಿದ ಮೋಹನ್​ ಭಾಗವತ್​ ನಮ್ಮ ಸಿದ್ದಾಂತಕ್ಕೆ ವಿಶ್ವದಾದ್ಯಂತ ಹೆಚ್ಚ್ಚಿನ ಬೇಡಿಕೆ ಇದೆ ಎಂದಿದ್ದಾರೆ.
ಭಾರತ ಹಿಂದೂ ರಾಷ್ಟ್ರ ಮತ್ತು ಈ ವಿಚಾರ ಸತ್ಯ. ಸೈದ್ಧಾಂತಿಕವಾಗಿ ಎಲ್ಲಾ ಭಾರತೀಯರು ಹಿಂದೂಗಳು ಮತ್ತು ಹಿಂದೂಗಳೆಂದರೆ ಎಲ್ಲಾ ಭಾರತೀಯರು. ಇಂದು ಭಾರತದಲ್ಲಿರುವವರು ಹಿಂದೂ ಭೂಮಿ ಮತ್ತು ಸಂಸ್ಕೃತಿಗೆ ಸಂಬಂಧಿಸಿದವರು. ಇವುಗಳನ್ನೂ ಹೊರತುಪಡಿಸಿ ಬೇರೇನು ಇಲ್ಲ.
ಇದನ್ನೂ ಓದಿ:ಗಣೇಶ ಚತುರ್ಥಿ 2023; ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿಗೆ ಅವಕಾಶ: ತುಷಾರ್​ ಗಿರಿನಾಥ್​
ಕೆಲವರು ಈ ವಿಚಾರಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಈ ಮನಸ್ಥಿತಿಯನ್ನು ಅಳವಡಿಸಿಕೊಂಡಿಲ್ಲ. ಆದರೆ, ಅವರಿಗೆ ಈ ವಿಚಾರ ಸಂಪೂರ್ಣವಾಗಿ ಅರ್ಥವಾಗಿದೆ. ಇಷ್ಟಾದರೂ ತಮ್ಮ ಹವ್ಯಾಸ ಹಾಗೂ ಸ್ವಾರ್ಥದಿಂದಾಗಿ ಈ ವಿಚಾರವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರಂತೂ ಈ ವಿಚಾರವನ್ನು ಅರ್ಥವನ್ನೂ ಮಾಡಿಕೊಂಡಿಲ್ಲ, ಬದಲಾಗಿ ಮರೆತೂ ಹೋಗಿದ್ದಾರೆ.
ನಾವೆಲ್ಲರೂ ಈ ವಿಚಾರವನ್ನು ಅರ್ಥ ಮಾಡಿಕೊಂಡಿದ್ದೇವೆ. ಕೆಲವರು ಈ ವಿಚಾರವನ್ನು ಒಪ್ಪಿಕೊಂಡಿದ್ಧಾರೆ. ಇನ್ನು ಕೆಲವರು ಒಪ್ಪಿಕೊಂಡಿಲ್ಲ. ನಮ್ಮ ಸಿದ್ದಾಂತಕ್ಕೆ ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯಿದ್ದು, ಇದಕ್ಕೆ ಪರ್ಯಾಯವಾಗಿ ಬೇರೊಂದಿಲ್ಲ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಕಾರ್ಯಕ್ರಮ ಒಂದರಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
