ಸೆಕ್ಯೂರಿಟಿ ಫೀಚರ್ಸ್ ವಿವರ
1ಅತ್ಯುತ್ತಮ ಮುದ್ರಣ ಗುಣಮಟ್ಟ ಮತ್ತು ಲ್ಯಾಮಿನೇಶನ್​
2ಆಧಾರ್ ಪಿವಿಸಿ ಕಾರ್ಡ್​ ಹೆಚ್ಚು ಕಾಲ ಬಾಳ್ವಿಕೆ ಬರುವಂಥದ್ದು ಮತ್ತು ಕೊಂಡೊಯ್ಯಲು ಸುಲಭವಾದುದು3ಹೋಲೋಗ್ರಾಮ್​, ಗುಯ್ಲೊಚೆ ಪ್ಯಾಟರ್ನ್​, ಘೋಸ್ಟ್​ ಇಮೇಜ್​ ಮತ್ತು ಮೈಕ್ರೋ ಟೆಕ್ಸ್ಟ್4
ಇನ್​ಸ್ಟಂಟ್ ಆಫ್​ಲೈನ್ ವೆರಿಫಿಕೇಶನ್​ಗೆ ಸಹಕಾರಿ ಕ್ಯೂಆರ್ ಕೋಡ್5
ವಿತರಿಸಲ್ಪಟ್ಟ ದಿನಾಂಕ ಮತ್ತು ಮುದ್ರಣ ದಿನಾಂಕ
6
ಎಂಬೋಸ್ ಮಾಡಿರುವ ಆಧಾರ್ ಲೋಗೋ
ನವದೆಹಲಿ:ಹೊಚ್ಚ ಹೊಸ ಅವತಾರದಲ್ಲಿ ಆಧಾರ್ ಕಾರ್ಡ್ ಬರ್ತಾ ಇದೆ. ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್​ ಇದಾಗಿದ್ದು, ಸೆಕ್ಯೂರಿಟಿ ಫೀಚರ್ಸ್​ ಕೂಡ ಹೊಂದಿದೆ. ಎಟಿಎಂ/ಡೆಬಿಟ್​/ಕ್ರೆಡಿಟ್​ ಕಾರ್ಡ್​​ಗಳಂತೆ ಆಧಾರ್ ಕಾರ್ಡ್ ಅನ್ನೂ ವ್ಯಾಲೆಟ್​ನಲ್ಲಿ ಇಟ್ಟುಕೊಂಡು ತಿರುಗಾಡಬಹುದು ಎಂದು ಯೂನಿಕ್ ಐಡೆಂಟಿಫಿಕೇಶನ್​ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಹೇಳಿದೆ.
ಆಧಾರ್ ಪಿವಿಸಿ ಕಾರ್ಡ್ ಎಲ್ಲ ಹವಾಮಾನಗಳಲ್ಲೂ ಸುರಕ್ಷಿತವಾಗಿರುವಂಥದ್ದು. ನೀರಿನಲ್ಲಿ ಬಿದ್ದರೂ ಹಾಳಾಗಲ್ಲ. ಚಾಲನಾ ಪರವಾನಗಿ, ಎಟಿಎಂ ಕಾರ್ಡ್​ಗಳನ್ನು ಜೇಬಿನಲ್ಲಿಟ್ಟುಕೊಂಡು ಹೋಗುವಂತೆ ಇದನ್ನೂ ಕೊಂಡೊಯ್ಯಬಹುದು. ಕ್ಷಿಪ್ರ ಪರಿಶೀಲನೆಗೆ ಇದೇ ಕಾರ್ಡನ್ನೂ ಬಳಸಬಹುದಾಗಿದೆ. ಇದರಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಸಾಕು ಪರಿಶೀಲನೆ ಕೆಲವೇ ಸೆಕೆಂಡ್​ಗಳಲ್ಲಿ ಮುಗಿದು ಹೋಗುತ್ತದೆ.
ಇದನ್ನೂ ಓದಿ:ರಿಪಬ್ಲಿಕ್ ಟಿವಿ ಅರ್ನಬ್​ಗೆ ಇನ್ನೊಂದು ಸಂಕಷ್ಟ- ಸುಶಾಂತ್​ ಸಿಂಗ್​ ಸ್ನೇಹಿತನಿಂದ ₹200 ಕೋಟಿ ಮಾನನಷ್ಟ ನೋಟಿಸ್​!
ಈ ವಿಷಯವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿರುವ ಯುಐಡಿಎಐ, ಆಧಾರ್ ಕಾರ್ಡ್ ಎಂಬುದು ಹೊಸ ಸೇವೆಯಾಗಿದೆ. ಸಾಂಕೇತಿಕವಾದ ಶುಲ್ಕ ಭರಿಸಿದರೆ ಭಾರತ ಮೂಲೆ ಮೂಲೆಗೂ ಅಗತ್ಯ ಇರುವವರಿಗೆ ಈ ಕಾರ್ಡನ್ನು ತಲುಪಿಸುತ್ತೇವೆ. ಈ ಆಧಾರ್ ಕಾರ್ಡ್​ಗಾಗಿ ನೋಂದಾಯಿತ ಮೊಬೈಲ್​ ನಂಬರ್​ ಬಳಸಬೇಕು. ಅಕಸ್ಮಾತ್ ಇಲ್ಲದೇ ಹೋದರೆ, ಪರ್ಯಾಯ ನಂಬರ್ ದಾಖಲಿಸಿ ಒಟಿಪಿ ಕೊಡಬೇಕು. ಇದಕ್ಕಾಗಿ ಆನ್​ಲೈನ್ ಬೇಡಿಕೆಯ ಫಾರಂ ಅನ್ನು ರಚಿಸಲಾಗಿದ್ದು, ಅದನ್ನು ಭರ್ತಿ ಮಾಡಬೇಕು ಎಂದು ಹೇಳಿದೆ..ಇದನ್ನೂ ಓದಿ:ಯಾರೂ ಇಂಥ ತಪ್ಪು ಮಾಡದಿರಿ: ಎನ್​ಸಿಪಿ ಮುಖಂಡ ಕಾರಿನಲ್ಲೇ ಸುಟ್ಟುಕರಕಲಾಗೋದಕ್ಕೆ ಇದುವೇ ಕಾರಣ!

#AadhaarInYourWalletLoaded with the latest security features, your Aadhaar is now more durable, convenient to carry, instantly verifiable offline. To order your Aadhaar PVC online, clickhttps://t.co/TVsl6Xh1cXpic.twitter.com/79gfxaUga7— Aadhaar (@UIDAI)October 12, 2020
#AadhaarInYourWalletLoaded with the latest security features, your Aadhaar is now more durable, convenient to carry, instantly verifiable offline. To order your Aadhaar PVC online, clickhttps://t.co/TVsl6Xh1cXpic.twitter.com/79gfxaUga7

ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + seven =
Remember me
