ಭೋಪಾಲ್‌: ರಾಜ್ಯದಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಓಪನ್ ಏರ್ ಬಾರ್​ಗಳಲ್ಲಿ ಮದ್ಯ ಮಾರಾಟವನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನೂತನ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಓಪನ್ ಏರ್ ಬಾರ್​ಗಳನ್ನು ಮುಚ್ಚಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಅಂಗಡಿ ಅಥವಾ ಕೌಂಟರ್‌ಗಳಲ್ಲಿ ಮಾತ್ರ ಮಧ್ಯ ಮಾರಾಟ ಮಾಡಬಹುದು.
ಇದನ್ನೂ ಓದಿ:ಉದ್ಘಾಟನೆ ದಿನವೇ ಮೈಸೂರು – ಬೆಂಗಳೂರು ನೂತನ ಎಕ್ಸಪ್ರೆಸ್​​ ಹೈವೇನಲ್ಲಿ ಭೀಕರ ಅಪಘಾತ
ಏಪ್ರಿಲ್ 1 ರಿಂದ ಎಲ್ಲಾ ಓಪನ್ ಏರ್ ಬಾರ್​ಗಳನ್ನು ಮುಚ್ಚಲಾಗುವುದು. ಮದ್ಯವನ್ನು ಅಂಗಡಿ ಕೌಂಟರ್​ಗಳಲ್ಲಿ ಮಾತ್ರ ಖರೀದಿಸಬಹುದು. ಮದ್ಯ ಸೇವಿಸಲು ಬಯಸುತ್ತಾರೋ ಅವರ ಮನೆಗೆ ತೆಗೆದುಕೊಂಡು ಹೋಗಲಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಪರವಾನಗಿಯನ್ನು ರದ್ದುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಪುಟ ನಿರ್ಧರಿಸಿದೆ ಎನ್ನವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ಪ್ರಾಣ ಬಿಟ್ಟ ಯುವಕ!
2010ರಿಂದ ರಾಜ್ಯದಲ್ಲಿ ಯಾವುದೇ ಹೊಸ ಮದ್ಯದಂಗಡಿ ಮುಚ್ಚಿಲ್ಲ. ಜನರು ಮದ್ಯಪಾನ ಮಾಡುವುದನ್ನು ನಿರುತ್ಸಾಹಗೊಳಿಸಲು ನಾವು ಈ ವರ್ಷ ಹೊಸ ಮದ್ಯ ನೀತಿಯನ್ನು ಪರಿಚಯಿಸಿದ್ದೇವೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಹಿಂದೆ ಹೇಳಿದ್ದರು.
ದೆಹಲಿ ಶಾಸಕರ ಸಂಬಳ ಹೆಚ್ಚಳ; ಯಾರಿಗೆ ಎಷ್ಟು ವೇತನ? ಇಲ್ಲಿದೆ ಸಂಪೂರ್ಣ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
