ನವದೆಹಲಿ: ಡಿ. 4ರಿಂದ ಡಿ. 22ರ ತನಕ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ಸರ್ವಪಕ್ಷಗಳ ಸಭೆ ನಡೆಸಿದೆ. ನಿರೀಕ್ಷೆಯಂತೆ, ಪ್ರಶ್ನೆಗಾಗಿ ಕಾಸು ಪ್ರಕರಣ ಈ ಸಭೆಯಲ್ಲೂ ಸದ್ದು ಮಾಡಿದೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯ ಎಥಿಕ್ಸ್ ಸಮಿತಿ ವರದಿ ಸೋರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿ ಸಂಸದರು ವಾಗ್ದಾಳಿ ನಡೆಸಿದ್ದು, ಮುಂದಿನ ಅಧಿವೇಶನ ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬ ಸುಳಿವು ಸಿಕ್ಕಿದೆ.
‘ಲೋಕಸಭೆಯಲ್ಲಿ ಚರ್ಚೆಯಾಗುವ ಮುನ್ನ ಈ ವರದಿಯನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿರುವುದು ಅಕ್ಷಮ್ಯ. ಸಂಸದೀಯ ಸಮಿತಿಗಳ ವರದಿಗಳನ್ನು ಸದನದಲ್ಲಿ ಮಂಡನೆ ಮಾಡುವವರೆಗೆ ಸಾರ್ವಜನಿಕಗೊಳಿಸಬಾರದು. ಆದರೆ, ಎಥಿಕ್ಸ್ ಸಮಿತಿಯ ಇತ್ತೀಚಿನ ವರದಿ ಈಗಾಗಲೇ ಬಹಿರಂಗವಾಗಿದೆ. ಮಾಧ್ಯಮಗಳಲ್ಲಿ ನಮ್ಮ ಪಕ್ಷಕ್ಕೆ ಸೇರಿದ ಓರ್ವ ಸದಸ್ಯರು ಶೀಘ್ರದಲ್ಲೇ ಉಚ್ಛಾಟನೆ ಗೊಳ್ಳಲಿದ್ದಾರೆ ಎಂಬುದಾಗಿ ವರದಿಯಾಗುತ್ತಿದೆ. ಮೊದಲು ಸದನದಲ್ಲಿ ಚರ್ಚೆಯಾಗಬೇಕು. ನಂತರವಷ್ಟೇ ಸದನ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ’ ಎಂದು ಟಿಎಂಸಿ ಸಂಸದರಾದ ಡೆರೆಕ್ ಓ ಬ್ರಿಯಾನ್ ಮತ್ತು ಸುದೀಪ್ ಬಂಡೋಪಾಧ್ಯಾಯ ಸರ್ವಪಕ್ಷ ಸಭೆಯಲ್ಲಿ ಹೇಳಿದರು.
ಇದೇ ವೇಳೆ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪೊ›ಸೀಜರ್ ಕೋಡ್ (ಸಿಆರ್​ಪಿಸಿ) ಮತ್ತು ಸಾಕ್ಷ್ಯಾಧಾರಗಳ ಕಾಯ್ದೆಗಳನ್ನು ಬದಲಿಸುವ ಉದ್ದೇಶ ಮೂರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಬಾರದು. ಏಕೆಂದರೆ, ಜಾರಿಯಾದಲ್ಲಿ ಅದರಿಂದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸದ್ಯ ಸಂಸತ್ತಿನಲ್ಲಿ 37 ಮಸೂದೆಗಳು ಬಾಕಿ ಉಳಿದಿದ್ದು, ಅವುಗಳಲ್ಲಿ 12 ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಮತ್ತಿತರರು ಹಾಜರಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನ ಡಿ. 4ರಿಂದ ಆರಂಭವಾಗಲಿದೆ.
ಜಾತಿಗಣತಿಗೆ ಬಿಎಸ್​ಪಿ ಒತ್ತಾಯ:ಸರ್ವಪಕ್ಷ ಸಭೆಯಲ್ಲಿ ಜಾತಿಗಣತಿ ಪರ ಧ್ವನಿ ಎತ್ತಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ನಡೆದರೆ ಮಾತ್ರ ನಿಜವಾದ ಪರಿಹಾರ ಸಾಧ್ಯ. ದೇಶದ ಎಲ್ಲೆಡೆಯಿಂದ ಇದಕ್ಕೆ ಬೇಡಿಕೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣದ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ತಿಳಿಸಿದ್ದಾರೆ.
ರಚನಾತ್ಮಕ ಚರ್ಚೆಗಳ ವಾತಾವರಣವಿರಬೇಕು ಎಂಬುದಾಗಿ ವಿಪಕ್ಷಗಳಲ್ಲಿ ವಿನಂತಿಸಿದ್ದೇವೆ. ಯಾವುದೇ ಚರ್ಚೆ, ನಿಯಮ, ಕಾರ್ಯವಿಧಾನ ವನ್ನು ಅನುಸರಿಸಬೇಕು.
| ಪ್ರಲ್ಹಾದ್ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
