ನವದೆಹಲಿ:ಅವಶ್ಯಕತೆಯೇ ಎಲ್ಲ ಆವಿಷ್ಕಾರಗಳ ತಾಯಿ ಎಂಬ ಮಾತಿದೆ. ಅಂತೆಯೇ, ರೈಲು ಹಳಿಗಳನ್ನು ನಿರ್ವಹಿಸುವ, ದುರಸ್ತಿಗೊಳಿಸುವ ಟ್ರ್ಯಾಕ್​ಮೆನ್​ಗಳ ಕಷ್ಟಕ್ಕೆ ನೆರವಾಗುವ ಉದ್ದೇಶವೇ ಈ ಸಂಶೋಧನೆಗೆ ಕಾರಣವಾಗಿದೆ.
ಇದೊಂದು ಅತ್ಯಂತ ಸರಳ, ಮಿತವ್ಯಯದ ಈ ಆವಿಷ್ಕಾರ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಘಿದೆ. ಮಹೀಂದ್ರಾ ಗ್ರೂಪ್​ ಮುಖ್ಯಸ್ಥ ಆನಂದ ಮಹೀಂದ್ರಾ ರೈಲ್ವೆ ಸಿವಿಲ್​ ಇಂಜಿನಿಯರ್​ನ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ;ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?
ರೈಲ್ವೇ ಟ್ರ್ಯಾಕ್​ಮೆನ್​ಗಳು ಮೈಲುಗಟ್ಟಲೇ ನಡೆದು, ಹಳಿಗಳ ದುರಸ್ತಿ ಮಾಡಬೇಕು. ಅವುಗಳ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಹಾಗೂ ಅಪಾಯ ಎದುರಾದಲ್ಲಿ ಮುನ್ಸೂಚನೆ ನೀಡಬೇಕು. ಇವರಿಗೆ ನೆರವಾಗಲೆಂದೇ ರೈಲ್ವೆ ಸಿವಿಲ್​ ಇಂಜಿನಿಯರ್​ ಪಂಕಜ್​ ಸೋಯಿನ್​ ರೈಲ್​ ಬೈಸಿಕಲ್​ ತಯಾರಿಸಿದ್ದಾರೆ.
ಸಾಮಾನ್ಯ ಬೈಸಿಕಲ್​ಅನ್ನೇ ಮಾರ್ಪಡಿಸಿ ಹಳಿಗಳ ಮೇಲೆ ಚಲಿಸುವಂತೆ ಮಾಡಿದ್ದಾರೆ. ಇದು 20 ಕೆಜಿ ಭಾರವಿದ್ದು, ಇಬ್ಬರನ್ನು ಹೊತ್ತೊಯ್ಯಬಲ್ಲುದು. ಗಂಟೆಗೆ 15 ಕಿ.ಮಿ. ವೇಗದಲ್ಲಿ ಹಳಿಗಳ ಮೇಲೆ ಸಾಗಬಲ್ಲುದು. ರೈಲು ಎದುರಾದರೆ ಸುಲಭವಾಗಿ ಹಳಿಯಿಂದ ಎತ್ತಿ ಪಕ್ಕಕ್ಕೆ ನಿಲ್ಲಿಸಬಹುದು.
ಇದನ್ನೂ ಓದಿ;15ನೇ ವರ್ಷಕ್ಕೆ ಮದುವೆ, ಎರಡೂವರೆ ವರ್ಷದ ಮಗುವಿನ ತಾಯಿಯೀಗ ಪಿಯು ಪರೀಕ್ಷೆಯಲ್ಲಿ ಅಗ್ರ ಸಾಧಕಿ
ಇದಕ್ಕಾಗಿ ರೈಲ್​ ಕಾರ್ಟಗಳ ಹಳೆಯ ಗಾಲಿಯನ್ನೆ ಬಳಸಲಾಗಿದೆ. ಒಟ್ಟು ಐದು ಸಾವಿರ ರೂ. ವೆಚ್ಚವಾಗಿರುವುದಾಗಿ ಪಂಕಜ್​ ಹೇಳುತ್ತಾರೆ. ಜತೆಗೆ ಇದನ್ನು ಬಿಚ್ಚಿ ಎಲ್ಲೆಂದರಲ್ಲಿಗೆ ಸಾಗಿಸಬಹುದು.ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ…
https://www.facebook.com/VVani4U/videos/307450787356076/?v=307450787356076
ಯಾರಿಗೆ ಸಿಗುತ್ತೆ? ಯಾರಿಗೆ ಇಲ್ಲ? ಶ್ರೀಮಂತ ದೇಶಗಳಿಂದ ಮುಂಗಡ ಖರೀದಿ; 100 ಕೋಟಿ ಡೋಸ್​ಗೆ ಹಣ ಪಾವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
