ತಿರುಪತಿ:ಆದಿಪುರುಷ್ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದ್ದು.​ ಚಿತ್ರತಂಡವು ಭಾರತೀಯ ಸಿನಿ ಇತಿಹಾಸದಲ್ಲಿ ಅತಿದೊಡ್ಡ ಪ್ರೀ ರಿಲೀಸ್​ ಇವೆಂಟ್​​ಗಾಗಿ ಅಯೋಧ್ಯೆ ಸೆಟ್​​ನ್ನು ಮರುನಿರ್ಮಾಣ ಮಾಡಿ ಬೃಹತ್​ ವೇದಿಕೆಯನ್ನು ನಿರ್ಮಿಸಿದೆ.
ಇದನ್ನೂ ಓದಿ:ಗಂಡನನ್ನು ತೊರೆದು ಕಿರುತೆರೆ ನಿರ್ದೇಶಕಿ ಜತೆ ಲಿವಿಂಗ್​ ಟುಗೆದರ್​! ದುಷ್ಕೃತ್ಯ ಎಸಗಿ ಸಿಕ್ಕಬಿದ್ದ ಜೋಡಿ
ಇಂದು ಸಂಜೆ ಆರು ಗಂಟೆಯಿಂದ ಮೆಗಾ ಪ್ರೀ ರಿಲೀಸ್​ ಇವೆಂಟ್​​ ಶುರುವಾಗಲಿದ್ದು, ಚಿನ್ನ ಜೀಯರ್​​ ಸ್ವಾಮಿಗಳಿಗೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಈ ಕಾರ್ಯಕ್ರಮ ಶ್ರೀ ವೆಂಕಟೇಶ್ವರ ವಿವಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 100ಕ್ಕೂ ಅಧಿಕ ನೃತ್ಯಗಾರರು ಹಾಗೂ ಗಾಯಕರು ಮನರಂಜನೆ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಇನ್ನು, ಸಿನಿಮಾ ರಂಗದ ಹಲವು ಸೂಪರ್​ಸ್ಟಾರ್​ಗಳು ಈ ಇವೆಂಟ್​ನಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಕ್ರೀಡಾಂಗಣದ ಸುತ್ತಲೂ ರಾಮನ ಅವತಾರದ ಪ್ರಭಾಸ್​ ಬೃಹತ್​ ಕಟೌಟ್​​ಗಳು ರಾರಾಜಿಸುತ್ತಿದ್ದು, ಈ ಇವೆಂಟ್​ ಕಣ್ತುಂಬಿಕೊಳ್ಳಲು 1.5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರುವ ನಿರೀಕ್ಷಿಯಿದೆ.
ಜೂನ್​ 16ರಂದು ತೆರೆಗೆ ಅಪ್ಪಳಿಸಲಿರುವ ಆದಿಪುರುಷ್​ ಸಿನಿಮಾ ಓಂ ರಾವತ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಪ್ರಭಾಸ್​​, ಸೈಫ್​ ಅಲಿ ಖಾನ್​ ಹಾಗೂ ಕೃತಿ ಸನೂನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಾಮಾಯಣದ ಕಥೆಯನ್ನು ಆಧರಿಸಿದ್ದು, 3ಡಿ ವರ್ಷನ್​​ನಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
