ಈಲೂರು:ರೋಗವನ್ನು ಗುಣಪಡಿಸುವ ಶಕ್ತಿ ಒಬ್ಬ ವೈದ್ಯರಿಗಿದೆ.. ಆದರೆ, ಚಿಕಿತ್ಸೆಯ ಸಮಯದಲ್ಲಿ ಕೆಲವೊಮ್ಮೆ ತಪ್ಪುಗಳು ಸಂಭವಿಸಿದ ಅನೇಕ ಪ್ರಕರಣಗಳಿವೆ. ಆದರೆ ಇತ್ತೀಚೆಗಷ್ಟೇ ನಡೆದ ಘಟನೆ ಸಂಚಲನ ಮೂಡಿಸುತ್ತಿದ್ದು, ಗರ್ಭಿಣಿಗೆ ಆಪರೇಷನ್‌ ಮಾಡಿದ ವೈದ್ಯರು ಹೊಟ್ಟೆಯಲ್ಲಿಯೇ ಕತ್ತರಿಯನ್ನು ಬಿಟ್ಟು ಮರೆತು ಹೊಲಿಗೆ ಹಾಕಿದ್ದಾರೆ ಎಂಬ ಆರೋಪ ಆಂಧ್ರಪ್ರದೇಶದ ಈಲೂರಿನಲ್ಲಿ ಕೇಳಿ ಬಂದಿದೆ.
ಇದನ್ನೂ ಓದಿ:ಅಜ್ಞಾತ ಪ್ರದೇಶದಲ್ಲಿ ಸುಟ್ಟುಕರಕಲಾದ ಮೃತದೇಹ ಪತ್ತೆ: ಚಪ್ಪಲಿಯಿಂದ ಪ್ರಕರಣವನ್ನು ಬೇಧಿಸಿದ ಪೊಲೀಸ್​​ಏಲೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಾರದ ಹಿಂದೆ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆದಿದ್ದು, ಆಪರೇಷನ್ ಮುಗಿಸಿ ಹೊಲಿಗೆ ಹಾಕುವಾಗ ಹೊಟ್ಟೆಯಲ್ಲಿದ್ದ ಕತ್ತರಿ ತೆಗೆಯುವುದನ್ನೇ ಮರೆತಿದ್ದಾರೆ.ಆದರೆ, ಅಂದಿನಿಂದ ಸಂತ್ರಸ್ತೆಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಎರಡು ಮೂರು ದಿನಗಳ ಬಳಿಕ ಎಕ್ಸ್ ರೇ ತೆಗೆದಾಗ ಆಕೆಯ ಹೊಟ್ಟೆಯಲ್ಲಿ ಕತ್ತರಿ ಇರುವುದು ಬೆಳಕಿಗೆ ಬಂದಿದೆ. ಈ ಘಟನೆ ಬಹಿರಂಗವಾಗದಂತೆ ವೈದ್ಯರು ನೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಧುಮೇಹಕ್ಕೆ ಮದ್ದು ಈ ಹಣ್ಣು: ರೋಗಿಗಳಿಗೆ ನೀಡುವ ಅದ್ಭುತ ಪ್ರಯೋಜನಗಳು ಇಂತಿವೆ..
ನೌಕರನೊಬ್ಬ ಆಕೆ ಎಕ್ಸ್-ರೇ ಫೋಟೋವನ್ನು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯ ಅಧಿಕಾರಿಗಳು ನೌಕರನನ್ನು ಕರೆಸಿ ಛೀಮಾರಿ ಹಾಕಿ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಅಲ್ಲದೇ, ಸಂತ್ರಸ್ತೆಯ ಕೇಸ್ ಶೀಟ್, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ಮಾಹಿತಿಯನ್ನು ಆಸ್ಪತ್ರೆಯ ದಾಖಲೆಗಳಿಂದ ಅಳಿಸಿ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.ಆದರೆ ಆಸ್ಪತ್ರೆ ಆವರಣದ ಕ್ಷ-ಕಿರಣ ವಿಭಾಗದ ದಾಖಲೆಗಳಲ್ಲಿ ಸಂತ್ರಸ್ತೆಯ ಹೆಸರು, ದಿನಾಂಕ ಸೇರಿದಂತೆ ಹಲವು ವಿವರಗಳಿವೆ. ಎಕ್ಸ್-ರೇನಲ್ಲಿ ಕತ್ತರಿ ಸ್ಪಷ್ಟವಾಗಿ ಗೋಚರಿಸಿದ್ದು, ರಜೆಯಲ್ಲಿ ಇದ್ದಿದ್ದರಿಂದ ಕತ್ತರಿ ಮರೆತ ಘಟನೆ ಗಮನಕ್ಕೆ ಬಂದಿಲ್ಲ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
