ಇಂದೋರ್​:ಲಾಕ್​ಡೌನ್​ ಸಮಯದಲ್ಲಿ, ರೆಡ್​ ಝೋನ್ ಅಥವಾ ಸೀಲ್​ ಡೌನ್​ ಆದ ಪ್ರದೇಶದ ನಿವಾಸಿಗಳಾಗಿದ್ದರೆ ಅವರ ಕಷ್ಟವನ್ನಂತೂ ದೇವರೇ ಬಲ್ಲ ಎನ್ನುವಂತಾಗಿದೆ. ಅಗತ್ಯ ಸೇವೆಗಳಿರಲಿ, ವೈದ್ಯಕೀಯ ನೆರವು ಕೂಡ ಮರಿಚೀಕೆಯಾಗುತ್ತದೆ ಎನ್ನುವುದಕ್ಕೆ ಮಧ್ಯಪ್ರದೇಶದ ಎರಡು ಘಟನೆಗಳೇ ಸಾಕ್ಷಿಯಾಗಿವೆ.
ಇಂದೋರ್​ ಹಾಗೂ ಖಾಂಡ್ವಾ ಜಿಲ್ಲೆಯಲ್ಲಿನ ಎರಡು ಘಟನೆಗಳು ಥೇಟ್​ ತ್ರೀ ಈಡಿಯಟ್​ ಚಿತ್ರದ ಸನ್ನಿವೇಶವನ್ನೇ ನೆನಪಿಸುತ್ತವೆ. ಚಿತ್ರದಲ್ಲಿ ಆಂಬುಲೆನ್ಸ್​ ಸಿಗದಿದ್ದಾಗ ಆಮೀರ್​ಖಾನ್​ ಹಾಗೂ ಕರೀನಾ ಕಪೂರ್​ ಸ್ಕೂಟರ್​ನಲ್ಲಿ ಮುಕುಂದ್​ ಭಟ್​ನನ್ನು (ರಸ್ತೋಗಿ) ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಥೇಟ್​ ಅದೇ ಮಾದರಿಯಲ್ಲಿ ಇಂದೋರ್​ನ ಬಾಡ್​ವಾಲಿ ಚೌಕಿ ನಿವಾಸಿ ಪಾಂಡು ಚಂದಾನೆ(60) ಎಂಬುವರನ್ನು ಸಂಬಂಧಿಕರು ಆಂಬುಲೆನ್ಸ್​ ಸಿಗದ ಕಾರಣ ಸ್ಕೂಟರ್​ನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆದರೆ, ಚಿತ್ರದ ಸನ್ನಿವೇಶದಂತೆ ಇಲ್ಲಿ ಸುಖಾಂತ್ಯವಾಗಲಿಲ್ಲ ಎನ್ನುವುದು ದುರಂತ.
ಬಾಡವಾಲಿ ಚೌಕಿ ಪ್ರಸ್ತುತ ಕಂಟೈನ್​ಮೆಂಟ್​ ಝೋನ್​ ಆಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪಾಂಡು ಅವರನ್ನು ಹಿಂದಿನ ದಿನವಷ್ಟೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಕೆಲ ಔಷಧ ನೀಡಿ ಮನೆಗೆ ಕಳುಹಿಸಿದ್ದರು. ಮರುದಿನ ಅನಾರೋಗ್ಯ ಉಲ್ಬಣಿಸಿದಾಗ ಮನೆಯವರು ಆಂಬುಲೆನ್ಸ್​ಗೆ ಕರೆಮಾಡಿದ್ದಾರೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಂಬುಲೆನ್ಸ್​ ಸೌಲಭ್ಯ ನಿರಾಕರಿಸಲಾಗಿದೆ. ಕೊನೆಗೆ ಸರ್ಕಾರಿ ಎಂವೈ ಆಸ್ಪತ್ರೆಗೆ ಸ್ಕೂಟರ್​ನಲ್ಲಿಯೇ ಕರೆದೊಯ್ದರೂ ಪ್ರಯೋಜನವಾಗಿಲ್ಲ.
ಆದರೆ, ಇದನ್ನು ನಿರಾಕರಿಸಿರುವ ಇಂದೋರ್​ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಪ್ರವೀನ್​ ಜಡಿಯಾ, ರೋಗಿಯನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ರೋಗಿ ಮೃತಪಟ್ಟಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ ಮೃತನ ಕುಟುಂಬಸ್ಥರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಇನ್ನೊಂದು ಘಟನೆಯಲ್ಲಿ ಖಾಂಡ್ವಾ ಜಿಲ್ಲೆಯ ಖಡಕ್​ಪುರದಲ್ಲೂ ಆಂಬುಲೆನ್ಸ್​ ಸಿಗದೆ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಶೇಕ್​ ಹಮೀದ್​ (65) ಅವರನ್ನು ಸ್ಕೂಟರ್​ನಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಿಕೊಳ್ಳಲಾಗಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಖಡಕ್​ಪುರ ಕೂಡ ಕರೊನಾ ಪೀಡಿತ ಪ್ರದೇಶವಾಗಿದೆ.
ಮಧ್ಯಪ್ರದೇಶದಲ್ಲಿ ಈವರೆಗೆ 900ಕ್ಕೂ ಅಧಿಕ ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 53 ಜನರು ಮೃತಪಟ್ಟಿದ್ದಾರೆ. ಅದರಲ್ಲೂ ಇಂದೋರ್​ವೊಂದರಲ್ಲಿಯೇ 200ಕ್ಕೂ ಅಧಿಕ ಕೋವಿಡ್​-19 ಪೀಡಿತರಿದ್ದಾರೆ. ಈ ಎರಡು ಘಟನೆಗಳು ರಾಜ್ಯದಲ್ಲಿ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿವೆ. ಆಪರೇಷನ್​ ಕಮಲದ ಬಳಿಕ ಕಮಲ್​ನಾಥ ನೇತೃತ್ವದ ಕಾಂಗ್ರೆಸ್​ ಸರ್ಕಾರ ಪತನವಾಗಿ ಶಿವರಾಜ್​ಸಿಂಗ್​ ಚೌಹಾಣ್​ ಸಿಎಂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಸದ್ಯಕ್ಕಿಲ್ಲ ಮದ್ಯ ಮಾರಾಟ ಆದರೆ, ಜನ ಗೂಗಲ್​ನಲ್ಲಿ ಹುಡುಕ್ತಿರೋದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
