ಗಾಂಧಿನಗರ:ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರಸ್ನೇಹಿ ಕ್ರಮವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಮಹತ್ವಾಕಾಂಕ್ಷೆಯ ‘ರಾಷ್ಟ್ರೀಯ ವಾಹನ ಗುಜರಿ ನೀತಿ’ ಶುಕ್ರವಾರ ಜಾರಿಗೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಿದ್ದಾರೆ.
ಹೊಸ ನೀತಿಯ ಪ್ರಕಾರ, ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಮೂರು ಬಾರಿ ಪರೀಕ್ಷೆಯಲ್ಲಿ ಫೇಲಾದ ಎಲ್ಲ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ. ವಾಹನ ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸುವವರಿಗೆ ಸರ್ಕಾರ ನೋಂದಣಿ ಶುಲ್ಕ, ರಸ್ತೆ ತೆರಿಗೆ ಇನ್ನಿತರ ವಿನಾಯಿತಿಗಳನ್ನು ನೀಡಲಿದೆ. ಈ ನೀತಿಯಿಂದ, ಹಳೆಯ ವಾಹನಗಳಿಂದ ಉಂಟಾಗುವ ಮಾಲಿನ್ಯ ನಿಯಂತ್ರಣವಾಗುವ ಜತೆಗೆ, ವಾಹನ ಉದ್ಯಮಕ್ಕೂ ಉತ್ತೇಜನ ಸಿಗಲಿದೆ.
ನೋಂದಣಿ ಶುಲ್ಕ ಮನ್ನಾ:ಹಳೆಯ ವಾಹನವನ್ನು ಗುಜರಿಗೆ ಕೊಟ್ಟವರಿಗೆ ಸರ್ಕಾರ ಪ್ರಮಾಣಪತ್ರ ನೀಡುತ್ತದೆ. ಹೊಸ ವಾಹನ ಖರೀದಿಸಿ ಅದನ್ನು ನೋಂದಣಿ ಮಾಡಿಸುವಾಗ ಈ ಪ್ರಮಾಣಪತ್ರ ಕೊಟ್ಟರೆ ನೋಂದಣಿ ಶುಲ್ಕ ಮನ್ನಾ ಆಗಲಿದೆ. ರಸ್ತೆ ತೆರಿಗೆಯಲ್ಲೂ ವಿನಾಯಿತಿ ಸಿಗಲಿದೆ. ಹೊಸ ನೀತಿಯಿಂದ ದೇಶದಲ್ಲಿ 10,000 ಕೋಟಿ ರೂಪಾಯಿ ಹೂಡಿಕೆ ಆಗಲಿದ್ದು, ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ. ಕಳೆದ ವರ್ಷ 23,000 ಕೋಟಿ ರೂಪಾಯಿ ಮೌಲ್ಯದ ಗುಜರಿ ಉಕ್ಕನ್ನು ಭಾರತ ಆಮದು ಮಾಡಿಕೊಂಡಿದೆ. ಹೊಸ ನೀತಿಯಿಂದಾಗಿ ನಮ್ಮ ದೇಶದಲ್ಲೇ ಸಾಕಷ್ಟು ಪ್ರಮಾಣದ ಗುಜರಿ ಉಕ್ಕು ವೈಜ್ಞಾನಿಕ ರೀತಿಯಲ್ಲೇ ಮರುಬಳಕೆಗೆ ಸಿಗಲಿದೆ. ಇದರೊಂದಿಗೆ ಆಮದು ವೆಚ್ಚವು ತಗ್ಗಲಿದೆ. ಕೈಗಾರಿಕೆಯ ಬೇಡಿಕೆಯೂ ಪೂರೈಸಲಿದೆ ಎಂದು ಪ್ರಧಾನಿ ಮೋದಿ ವರ್ಚುವಲ್ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಬಿಡಿಭಾಗಗಳ ಮರುಬಳಕೆ:ಹಳೆಯ ವಾಹನಗಳನ್ನು ಸ್ಕ್ರಾ್ಯಪ್​ಗೆ ಹಾಕಿದಾಗ ಅವುಗಳಿಂದ ಪ್ರತ್ಯೇಕಿಸಲಾಗುವ ಸ್ಟೀಲ್, ಪ್ಲಾಸ್ಟಿಕ್, ರಬ್ಬರ್, ಅಲ್ಯೂಮಿನಿಯಂ ಮತ್ತು ಇತರೆ ಬಿಡಿಭಾಗಗಳನ್ನು ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ಮರುಬಳಕೆ ಮಾಡಲಾಗುವುದು. ಇದರಿಂದ ಹೊಸ ವಾಹನಗಳ ಉತ್ಪಾದನೆಯ ವೆಚ್ಚ ಇಳಿಕೆಯಾಗಲಿದೆ. ಅದೇ ರೀತಿ, ವಾಹನಗಳಲ್ಲಿ ಹಸಿರು ಇಂಧನ, ವಿದ್ಯುತ್ ಬಳಕೆಗೆ ಸಂಬಂಧಿಸಿದ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೂ ಅವಕಾಶವಾಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಕಚ್ಚಾತೈಲ ಆಮದಿಗೆ ತಗಲುವ 10 ಲಕ್ಷ ಕೋಟಿ ರೂಪಾಯಿ ಕಡಿಮೆಯಾಗಲಿದೆ ಎಂಬ ಅಂದಾಜಿದೆ.
ದೇಶಾದ್ಯಂತ ಸ್ಕ್ರ್ಯಾಪಿಂಗ್ ಸೆಂಟರ್ ಸ್ಥಾಪನೆ:ಸ್ಕ್ರ್ಯಾಪಿಂಗ್ ನೀತಿ ಅನುಷ್ಠಾನಕ್ಕೆ ದೇಶಾದ್ಯಂತ ಸರ್ಕಾರದ ಕಡೆಯಿಂದ ಮಾತ್ರವಲ್ಲದೆ, ಪಿಪಿಪಿ ಮಾದರಿ, ಖಾಸಗಿ ಪಾಲುದಾರಿಕೆ, ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಸ್ಕ್ರ್ಯಾಪಿಂಗ್ ಸೆಂಟರ್​ಗಳನ್ನು ಸ್ಥಾಪಿಸಲಾಗುತ್ತದೆ. ಸ್ಕ್ರ್ಯಾಪ್ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಲಾಗುವುದು ಎಂಬ ಅಂಶವಿದೆ.
ಗುಜರಿ ನೀತಿ ಜಾರಿಯಿಂದ ವಾಹನ ಮಾರಾಟ ಹೆಚ್ಚಳವಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳ ಜಿಎಸ್​ಟಿ ಆದಾಯ 30,000 ಕೋಟಿ ರೂಪಾಯಿಯಿಂದ 40,000 ಕೋಟಿ ರೂಪಾಯಿ ತನಕ ಹೆಚ್ಚಳವಾಗಲಿದೆ. ಹಳೆಯ ವಾಹನ ಗುಜರಿಗೆ ಹಾಕಿದವರಿಗೆ ಹೊಸ ವಾಹನ ಖರೀದಿಸುವಾಗ ವಾಹನ ಉತ್ಪಾದಕರು ಶೇ. 5 ವಿನಾಯಿತಿ ಕೊಡಬೇಕು.
|ನಿತಿನ್ ಗಡ್ಕರಿಕೇಂದ್ರ ರಸ್ತೆ ಸಾರಿಗೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 6 =
Remember me
