ವಿಜಯಪುರ:ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಅಪರೂಪಕ್ಕೆಂಬಂತೆ ಇಲ್ಲೊಂದು ಪ್ರಕರಣದ ಹಿಂದೆ ಬರೋಬ್ಬರಿ ಒಂದೂವರೆ ಸಾವಿರ ಪೊಲೀಸರು ಬೆನ್ನುಬಿದ್ದಿದ್ದಾರೆ.
ಹೌದು.. ಈ ಅಪರಾಧ ಪ್ರಕರಣದ ಪತ್ತೆಗಾಗಿ ಒಬ್ಬರು ಎಸ್​ಪಿ, ಇನ್ನೊಬ್ಬರು ಹೆಚ್ಚುವರಿ ಎಸ್​ಪಿ, ಅವರೊಂದಿಗೆ 37 ಇನ್​ಸ್ಪೆಕ್ಟರ್​ಗಳು ನೇತೃತ್ವದ ಹತ್ತಕ್ಕೂ ಅಧಿಕ ತಂಡಗಳ ರಚನೆಯಾಗಿದ್ದು, ಒಟ್ಟು ಒಂದೂವರೆ ಸಾವಿರ ಪೊಲೀಸರು ಇದೊಂದೇ ಪ್ರಕರಣದ ತನಿಖಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಂದಹಾಗೆ ಇದು ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ. ಈ ಪ್ರಕರಣದ ತನಿಖೆಗಾಗಿ ವಿಜಯಪುರ ಜಿಲ್ಲೆಯ 1500 ಪೊಲೀಸರನ್ನು ನಿಯೋಜಿಸಲಾಗಿದೆ.
ಘಟನೆ ನಡೆದ ಸ್ಥಳದ ಸುತ್ತಲೂ 3 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಭೀಮಾತೀರದ ಚಡಚಣ, ಕೆರೂರ, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ಪೊಲೀಸರ ತಂಡ 24×7 ಗಸ್ತಿನಲ್ಲಿದೆ. ಅಲ್ಲದೆ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ಬಳಿಕ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಬಾಂಬ್ ಪತ್ತೆ ನಿಷ್ಕ್ರಿಯದಳ ಪರಿಶೀಲನೆಯನ್ನೂ ನಡೆಸಿದೆ.
ಭೀಕರ ದಾಳಿ ವೇಳೆ 18 ರೌಂಡ್​ಗಳಲ್ಲಿ ಫೈರಿಂಗ್ ನಡೆದಿದ್ದು, ಈ ವರೆಗೆ ಸ್ಥಳದಲ್ಲಿ 15 ಬುಲೆಟ್ ಕ್ಯಾಪ್ ಹಾಗೂ 3 ಜೀವಂತ ಗುಂಡು, 10ಕ್ಕೂ ಅಧಿಕ ಪೆಟ್ರೋಲ್ ಬಾಂಬ್, ಹೊಸದಾಗಿ ರೆಡಿ ಮಾಡಿಸಿದ್ದ ತಲವಾರ್‌ಗಳು ಪತ್ತೆ ಆಗಿವೆ.
ಈ ದಾಳಿಗೆ ಬಿಹಾರದ ಮುಂಗರ್ ಜಿಲ್ಲೆಯ ಕಂಟ್ರಿಮೇಡ್ ಪಿಸ್ತೂಲ್ ಬಳಕೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ದಾಳಿಯಲ್ಲಿ ಮಹಾದೇವ ಬೈರಗೊಂಡ ಕಡೆಯ ಇಬ್ಬರು ಸಾವಿಗೀಡಾಗಿದ್ದರು. ಅಟ್ಯಾಕ್ ಮಾಡಿದವರು ಮಹಾರಾಷ್ಟ್ರದ ಪೂನಾ, ನಾಂದೆಡ್, ಯು.ಪಿ, ಬಿಹಾರ ಕಡೆಗೆ ಪರಾರಿಯಾಗಿರುವ ಸಾಧ್ಯತೆ ಇದ್ದು, ಎಲ್ಲ ನಿಟ್ಟಿನಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
