ನವದೆಹಲಿ:ವಿಶ್ವ ಯೋಗ ದಿನವಾದ ಇಂದು ಭಾರತದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಒಂದೇ ದಿನದಲ್ಲಿ 75 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಿಸಿದ್ದು, ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.
ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ಅಭಿಯಾನ ನೀಡಲು ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಘೋಷಿಸಿದಂತೆಯೇ ಇಂದು ಬೃಹತ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಅಭಿಯಾನದ ಮೊದಲ ದಿನವೇ ದೊಡ್ಡ ಮಟ್ಟದಲ್ಲಿ ಲಸಿಕೆ ಹಾಕಿಸುವ ಗುರಿ ಇರಿಸಿಕೊಂಡಿರುವ ಭಾರತ ಸರ್ಕಾರ, ಲಸಿಕೆ ಹಾಕಲೆಂದೇ 1 ಲಕ್ಷಕ್ಕೂ ಅಧಿಕ ವ್ಯಾಕ್ಸಿನೇಟರ್​ಗಳನ್ನು ನಿಯೋಜಿಸಿದೆ. ಒಟ್ಟಿನಲ್ಲಿ ಇಂದು ಸಂಜೆ 5 ಗಂಟೆವರೆಗೆ 75 ಲಕ್ಷ ಜನರಿಗೆ ಲಸಿಕೆ ಹಾಕಿಸಲಾಗಿದೆ. ಅದರಲ್ಲೂ ದೇಶದಲ್ಲಿ ನಡೆಯುತ್ತಿರುವ ಲಸಿಕೆ ಹಾಕಿಸುವ ಪ್ರಕ್ರಿಯೆಯ ಉತ್ತುಂಗದ ಅವಧಿಯಲ್ಲಿ ಒಮ್ಮೆಯಂತೂ ಒಂದು ಸೆಕೆಂಡ್​ನಲ್ಲಿ 30,000 ಲಸಿಕೆಯನ್ನು ಹಾಕಿದಂತಾಗಿದೆ ಎಂದು ಸರ್ಕಾರದ ಅಧಿಕೃತ ಮೂಲ ತಿಳಿಸಿದೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಮತ್ತೊಂದೆಡೆ ಸರ್ಕಾರದ ಈ ಬೃಹತ್ ಲಸಿಕೆ ಅಭಿಯಾನದ ಯಶಸ್ಸಿನ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ 5 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನ್ಯೂಜಿಲೆಂಡ್​ನ ಜನಸಂಖ್ಯೆಯ ಒಂದೂವರೆ ಪಟ್ಟು ಮಂದಿಗೆ ಭಾರತದಲ್ಲಿ ಲಸಿಕೆ ಹಾಕಿಸಲಾಗಿದೆ. ಇನ್ನೂ ನಾಲ್ಕು ಗಂಟೆ ಅವಧಿ ಉಳಿದಿದ್ದು, ಈ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Almost 7.5 million vaccine doses given today and counting!!!1 lakh Vaccinators logged in, 30000 per sec peak Vaccination.#LargestVaccineDrive#Unite2FightCorona
— Aarogya Setu (@SetuAarogya)June 21, 2021

At 5 pm India under PM@narendramodivaccinated 1.5 times New Zealand population . Time for some Dhimmies to take rest for sometime . And still 4 more hours to go . Jai Ho .
— B L Santhosh (@blsanthosh)June 21, 2021

ಸಗಣಿಯನ್ನೂ ಬಿಡದ ಕಳ್ಳರು; 800 ಕೆ.ಜಿ. ಗೋಮಯ ಕಳವು, ಪೊಲೀಸರಿಗೆ ದೂರು..

ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
