ನವದೆಹಲಿ:ಭಾರತದ ಬೃಹತ್ ಲಸಿಕೆ ಅಭಿಯಾನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಅಭಿಯಾನದ ಮೊದಲ ದಿನವೇ ಸುಮಾರು 81 ಲಕ್ಷ ಮಂದಿಗೆ ಲಸಿಕೆ ಹಾಕಿಸಲಾಗಿದೆ. ಕೋವಿಡ್​-19 ಲಸಿಕೀಕರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ವಿಧಿಸಿ ಇಂದು ಅಭಿಯಾನವನ್ನು ಆರಂಭಿಸಿದ ಭಾರತ, ಪ್ರಥಮ ದಿನವೇ 80,95,314 ಮಂದಿಗೆ ಲಸಿಕೆ ಹಾಕಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕರೊನಾ ಲಸಿಕೆ ನೀಡಲಾಗುವುದು ಎಂದು ಜೂ. 7ರಂದು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅದನ್ನು ಆರಂಭಿಸಿ ಯಶಸ್ವಿ ಕೂಡ ಆಗಿದ್ದಾರೆ. ಸಕಲ ಸಿದ್ಧತೆಗಳೊಂದಿಗೆ ತೀರಾ ವ್ಯವಸ್ಥಿತವಾಗಿ ಲಸಿಕೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ದೇಶದ ಅಷ್ಟೂ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ತಲುಪಿಸಿ, ಜನರಿಗೆ ಒದಗಿಸಿದೆ. ಪ್ರಧಾನಿಯವರ ಕರೆಗೆ ಜನರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರಿಂದ ಬೃಹತ್ ಲಸಿಕೆ ಅಭಿಯಾನ ಭರ್ಜರಿ ಆರಂಭವನ್ನೇ ದಾಖಲಿಸಿದೆ.
ಇದನ್ನೂ ಓದಿ:ಜೊಮ್ಯಾಟೋ ಡೆಲಿವರಿ ಯುವಕನಿಗೆ ಬೈಕ್ ಕೊಡುಗೆಯಾಗಿ ಕೊಟ್ಟ ಗ್ರಾಹಕರು; ಕಾರಣ ತಿಳಿದರೆ ಅಯ್ಯೋ ಅನಿಸುತ್ತೆ!
ಇನ್ನು ದೇಶದಲ್ಲಿ ಅತಿಹೆಚ್ಚು ಲಸಿಕೆ ಕೊಡಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಹಿರಿಮೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಲಸಿಕೆ ಅಭಿಯಾನದ ಮೊದಲ ದಿನವೇ 10,67,734 ಮಂದಿಗೆ ಲಸಿಕೆ ಹಾಕಿಸಲಾಗಿದೆ. 15,42,632 ಮಂದಿಗೆ ಒಂದೇ ದಿನದಲ್ಲಿ ಲಸಿಕೆ ಹಾಕಿಸುವ ಮೂಲಕ ಮಧ್ಯಪ್ರದೇಶ ಈ ಬೃಹತ್ ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.
ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?
ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
