ನವದೆಹಲಿ:ಕಳೆದ ನಾಲ್ಕೈದು ತಿಂಗಳಿಂದ ಯಥಾಸ್ಥಿತಿಯಲ್ಲಿದ್ದ ತೈಲ ದರ ಮತ್ತು ಮತ್ತು ಗೃಹ ಬಳಕೆಯ ಅಡುಗೆ ಅನಿಲದ (ಎಲ್​ಪಿಜಿ) ಬೆಲೆ ಏರಿಕೆ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್​ಗೆ ತಲಾ 80 ಪೈಸೆ ಏರಿಕೆಯಾದರೆ, ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 96.21 ರೂ. ಮತ್ತು ಡೀಸೆಲ್ 87.47 ರೂ. ಮುಟ್ಟಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 949.50 ರೂ. ತಲುಪಿದೆ. ಅ.6ರ ನಂತರ ಎಲ್​ಪಿಜಿ ಬೆಲೆ ಏರಿದೆ. ನವೆಂಬರ್ ಮೊದಲ ವಾರದಲ್ಲಿ ತೈಲದ ಚಿಲ್ಲರೆ ಮಾರಾಟ ಬೆಲೆಗಳಲ್ಲಿ ಏರಿಕೆಯಾಗಿತ್ತು. ಅಂದಿನಿಂದ ಬಹುತೇಕ ಮೆಟ್ರೋ ನಗರಗಳಲ್ಲಿ 137 ದಿನಗಳ ಕಾಲ ಬೆಲೆ ಪರಿಷ್ಕರಣೆ ಆಗಿರಲಿಲ್ಲ.
ತಟ್ಟೆ ಬಡಿಯಿರಿ ಎಂದ ರಾಹುಲ್:ಇಂಧನ ಹಾಗೂ ಎಲ್​ಪಿಜಿ ಬೆಲೆಯೇರಿಕೆ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ತಟ್ಟೆ ಬಡಿಯಿರಿ’ (ಥಾಲಿ ಬಜಾವೋ) ಎಂದು ಹೇಳಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಹೇರಲಾಗಿದ್ದ ‘ಲಾಕ್​ಡೌನ್’ ತೆರವು ಮಾಡಲಾಗಿದೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಇಂಧನಗಳ ಬೆಲೆಯೇರಿಸುವ ಮೂಲಕ ನರೇಂದ್ರ ಮೋದಿ ಸರ್ಕಾರ ಬಡವರನ್ನು ಲೂಟಿ ಮಾಡಿ 10,000 ಕೋಟಿ ರೂಪಾಯಿ ಸಂಗ್ರಹಿಸಲಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿಪಕ್ಷ ಸಭಾತ್ಯಾಗ:ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಖಂಡಿಸಿ ವಿಪಕ್ಷ ಸದಸ್ಯರು ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು. ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಕಲಾಪ ಬಹಿಷ್ಕರಿಸಿ ಹೊರನಡೆದರು. ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ, ಇಂಧನ ದರ ಏರಿಕೆ ವಿಚಾರ ಪ್ರಸ್ತಾಪಿಸಿದ್ದರು. ಟಿಎಂಸಿ, ಎನ್​ಸಿಪಿ, ಡಿಎಂಕೆ, ಎಡ ಪಕ್ಷ ಸದಸ್ಯರು ಕೂಡ ಸರ್ಕಾರದ ವಿರುದ್ಧ ಘೋಷಣೆ ಕೂಗಿ ದರ ಇಳಿಸುವಂತೆ ಆಗ್ರಹಿಸಿದರು. ಸ್ಪೀಕರ್ ಈ ವಿಚಾರ ರ್ಚಚಿಸುವುದಕ್ಕೆ ಆಸ್ಪದ ನೀಡಲಿಲ್ಲ. ಇದನ್ನು ವಿರೋಧಿಸಿ ಎಲ್ಲರೂ ಸಭಾತ್ಯಾಗ ಮಾಡಿದರು. ರಾಜ್ಯಸಭೆಯಲ್ಲಿ ತೈಲ ದರ ಏರಿಕೆ ಖಂಡಿಸಿ ವಿರೋಧ ಪಕ್ಷಗಳು ಗದ್ದಲ ಮಾಡಿದ ಕಾರಣ ಎರಡು ಸಾರಿ ಕಲಾಪ ಮುಂದೂಡಿಕೆ ಆಗಿತ್ತು.
ಕಚ್ಚಾ ತೈಲ ದರ ಹೆಚ್ಚಳ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಚ್ಚಾ ತೈಲ ಬ್ಯಾರೆಲ್ ದರ ಶೇ. 1.45 ಏರಿಕೆಯಾಗಿ 117.30 ಡಾಲರ್ ಮುಟ್ಟಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್​ವಿುಡಿಯಟ್​ನಲ್ಲಿ ಶೇ. 1.33 ಹೆಚ್ಚಳವಾಗಿ ಪ್ರತಿ ಬ್ಯಾರೆಲ್ ಬೆಲೆ 113.61 ಡಾಲರ್ ತಲುಪಿದೆ.
ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

ಜೇಮ್ಸ್​ಗೆ ಎತ್ತಂಗಡಿ ಆತಂಕ!; ನಿರ್ಮಾಪಕರು ಏನೆಂದರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 11 =
Remember me
