ಭೋಪಾಲ್​:ಪಾರಿನ್​ ರಿಟರ್ನ್​ ವಿದ್ಯಾರ್ಥಿಗಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅವರಿಗೆ ಸಿಗುವ ಗೌರವ ಬೇರೆ ವಿದ್ಯಾರ್ಥಿಗಳಿಗೆ ಸಿಗುವುದು ಕಷ್ಟ. ಆದರೆ ಇಲ್ಲೊಬ್ಬ ಫಾರಿನ್​ ರಿಟರ್ನ್​ ವಿದ್ಯಾರ್ಥಿ ಮಾತ್ರ ತೀರಾ ಹೀನಾಯ ಸ್ಥಿತಿಯಲ್ಲಿದ್ದಾನೆ. ಎಲ್ಲವನ್ನೂ ಕಳೆದುಕೊಂಡ ಆತ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಇದೀಗ ಆತನನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ:ಹೆಂಡತಿಯನ್ನು ಮನೆ ತುಂಬಿಸುವ ಬದಲು ಕ್ವಾರಂಟೈನ್​ ಕೇಂದ್ರಕ್ಕೋದ ವರ! ಕರೊನಾ ಇದ್ದಿದ್ದು ಗೊತ್ತಿದ್ದರೂ ಮುಂಜಾಗ್ರತೆ ವಹಿಸದ ವಧು
ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಸುಮಾರು 90 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ರಸ್ತೆ ಬದಿ ಭಿಕ್ಷೆ ಬೇಡುತ್ತ ಕುಳಿತಿದ್ದ. ಆತನನ್ನು ಒಂದು ಸ್ವಯಂ ಸೇವಕ ಸಂಸ್ಥೆಯವರು ಮಾತನಾಡಿಸಿದ್ದಾರೆ. ಆಗ ವೃದ್ಧ ಇಂಗ್ಲೀಷ್​ನಲ್ಲೇ ಅವರಿಗೆ ಉತ್ತರ ನೀಡಿದ್ದಾನೆ. ಅದೂ ಕೂಡ ಮಾಮೂಲಿ ಇಂಗ್ಲಿಷ್​ ಅಲ್ಲದೆ ಫಾರಿನ್​ ಶೈಲಿಯಲ್ಲೇ ಮಾತನಾಡಿದ ಆತನನ್ನು ಕಂಡು ಅನುಮಾನ ಬಂದ ಸಂಸ್ಥೆಯವರು ಆತನ ಮೂಲ ಪತ್ತೆಗೆ ಮುಂದಾಗಿದ್ದಾರೆ.
ಈಗ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧನ ಹೆಸರು ಸುರೇಂದ್ರ ವಸಿಷ್ಠ. 1969ರಲ್ಲಿ ಐಐಟಿ ಖಾನ್ಪುರದಿಂದ ಮೆಕಾನಿಕಲ್​ ಇಂಜಿನಿಯರಿಂಗ್​ ಪದವಿ ಪಡೆದ ಆತ ನಂತರ 1972ರಲ್ಲಿ ಲಂಡನ್​ನಲ್ಲಿ ಎಲ್​ಎಲ್​ಎಂ ಪದವಿ ಪಡೆದಿದ್ದಾನೆ. ಈತನ ತಂದೆ ಜೆಸಿ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಮಾಹಿತಿ ದೊರೆತಿದೆ. ಆದರೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿರುವ ಈತ ಬೀದಿಗೆ ಬಂದಿದ್ದು ಹೇಗೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಸಂಸ್ಥೆಯವರು ಸುರೇಂದ್ರನನ್ನು ರಕ್ಷಿಸಿದ್ದು, ಚಿಕಿತ್ಸೆ ನೀಡಿಸುತ್ತಿದ್ದಾರೆ. ಈತನ ಕುಟುಂಬಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಜನವರಿಯೊಳಗೆ ಆತ್ಮ ನಿರ್ಭರ್ ವಿಶೇಷ ಯೋಜನೆಯಡಿ ಸಾಲದ ನೆರವು ಸಿಕ್ಕಿರಬೇಕು; ಜಿಪಂ ಸಿಇಒ ಪಿ.ಶಿವಶಂಕರ್ ಸೂಚನೆ
ಕೆಲ ವಾರಗಳ ಹಿಂದೆ ಇದೇ ಸಂಸ್ಥೆಯವರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರನ್ನು ರಕ್ಷಿಸಿದ್ದರು. ಆ ವ್ಯಕ್ತಿ ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

https://www.vijayavani.net/bride-leaves-from-marriage-hall/
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × 1 =
Remember me
