ಬೆಂಗಳೂರು:ಕರ್ನಾಟಕದ ಈ ಬಾಲಕಿ ಅಮನ, ‘ಅತಿ ಕಿರಿಯ ಕವಯತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಷ್ಟೇ ಅಲ್ಲ, ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಿದ್ದಾಳೆ.
2008ರ ಜೂನ್​ 20ರಂದು ಜನಿಸಿರುವ ಅಮನ, ಬೆಂಗಳೂರಿನ ಬಿಷಪ್​ ಕಾಟನ್ ಗರ್ಲ್ಸ್​ ಸ್ಕೂಲ್​​ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, 61 ಕವನಗಳಿರುವ ‘ಇಕೋಸ್​ ಆಫ್​ ಸೌಲ್​ಫುಲ್​’ ಎಂಬ ಕವನಸಂಕಲನವನ್ನು ರಚಿಸಿದ್ದಾಳೆ. ಈ ಕವನ ಸಂಕಲನ 2020ರಲ್ಲಿ ಅಂದರೆ ಅಮನಗೆ 12 ವರ್ಷ, 5 ತಿಂಗಳು 10 ದಿನಗಳಾಗಿದ್ದಾಗ ಪ್ರಕಟಗೊಂಡಿದೆ. ಇದನ್ನು 2021ರ ಜುಲೈ 26ರಂದು ದಾಖಲೆ ಎಂದು ಖಚಿತ ಪಡಿಸಲಾಗಿದ್ದು, ಅಮನಳನ್ನು ‘ಅತಿಕಿರಿಯ ಕವಯತ್ರಿ’ ಎಂದು ಪರಿಗಣಿಸಿರುವುದಾಗಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ ತಿಳಿಸಿದೆ.

ಇನ್ನು ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ಈಕೆ ಕಿರಿಯ ವಯಸ್ಸಿನಲ್ಲೇ ಕವಿತೆ ಬರೆದ ಹಿನ್ನೆಲೆಯಲ್ಲಿ ‘ಗ್ರ್ಯಾಂಡ್​ ಮಾಸ್ಟರ್’​ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಈಕೆಯ ದಾಖಲೆಯನ್ನು 2021ರ ಜುಲೈ 27ರಂದು ಖಚಿತಪಡಿಸಿರುವುದಾಗಿ ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್ ತಿಳಿಸಿದೆ.
ಅಮನ ಇದುವರೆಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಒಟ್ಟು 275 ಕವನಗಳನ್ನು ರಚಿಸಿದ್ದು, ಸದ್ಯದಲ್ಲೇ ಎರಡನೇ ಕವನಸಂಕಲನ ಕೂಡ ಪ್ರಕಟಗೊಳ್ಳಲಿದೆ. ಈಕೆ ಕೆಎಸ್​ಆರ್​ಟಿಸಿಯ ಚೀಫ್​ ಪಬ್ಲಿಕ್ ರಿಲೇಷನ್​ ಆಫೀಸರ್ ಡಾ.ಟಿ.ಎಸ್​. ಲತಾ ಅವರ ಪುತ್ರಿ. ‘ಇಕೋಸ್​ ಆಫ್​ ಸೌಲ್​ಫುಲ್​’ ಕವನ ಸಂಕಲನವನ್ನು ಸಪ್ನಾ ಬುಕ್​ ಹೌಸ್ ಪ್ರಕಟಿಸಿದೆ.
ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 16 =
Remember me
