ಚಂಡೀಗಢ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಕಿಚ್ಚು ದಿನೇದಿನೆ ಹೆಚ್ಚಾಗುತ್ತಲೇ ಇದೆ. ಪಂಜಾಬ್​ನಲ್ಲಂತೂ ಹೋರಾಟದ ಕಿಚ್ಚು ಹೆಚ್ಚೇ ಇದೆ. ಮುಖ್ಯಮಂತ್ರಿ ಅಮರೇಂದರ್​ ಸಿಂಗ್​ ಅವರ ಸರ್ಕಾರವೂ ಹೋರಾಟಕ್ಕೆ ಸಾಥ್​ ನೀಡಿದ್ದು, ಇದೀಗ ಮೊದಲನೇ ಬಾರಿಗೆ ರೈತ ಹೋರಾಟಗಾರರ ವಿರುದ್ಧ ಸಿಎಂ ಮುನಿಸಿಕೊಂಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ:ಮದ್ವೆಯಾದ ಎರಡೇ ತಿಂಗಳಿಗೆ 51 ವರ್ಷದ ಪತ್ನಿಗೆ ಸಾವಿನ ದಾರಿ ತೋರಿದ 29ರ ಪತಿ: ಕೊಲೆ ಹಿಂದೆ ಭಯಾನಕ ಸಂಚು!
ಕೃಷಿ ಕಾಯ್ದೆಗಳಿಂದ ರೈತರ ಬದಲಾಗಿ ಬಂಡವಾಳಶಾಹಿಗಳಿಗೆ ಸಹಾಯವಾಗಲಿದೆ ಎಂದು ರೈತರು ದೂರುತ್ತಿದ್ದಾರೆ. ಮುಕೇಶ್​ ಅಂಬಾನಿಯಂತಹ ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಈ ಕಾಯ್ದೆಗಳು ಲಾಭ ಮಾಡಿಕೊಡಲಿವೆ ಎಂದು ದೂರಲಾಗುತ್ತಿದೆ. ಅದೇ ಹಿನ್ನೆಲೆಯಲ್ಲಿ ಮುಕೇಶ್​ ಅಂಬಾನಿ ಮತ್ತು ಅವರ ಸಂಸ್ಥೆಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವ ರೈತ ಹೋರಾಟಗಾರರು, ಜಿಯೋ ಸಿಮ್​ ತ್ಯಜಿಸುವುದರ ಜತೆಗೆ ಜಿಯೋ ಮೊಬೈಲ್​ ಟವರ್​ಗಳಿಗೂ ಹಾನಿ ಮಾಡಲಾರಂಭಿಸಿದ್ದಾರೆ.
ಪಂಜಾಬ್​ ರಾಜ್ಯವೊಂದರಲ್ಲಿ 21,306 ಟವರ್​ಗಳಿವೆ. ಅದರಲ್ಲಿ 1,561 ಟವರ್​ಗಳನ್ನು ರೈತರು ಹಾಳು ಮಾಡಿದ್ದಾರೆ. ಅಲ್ಲಿನ ಕೇಬಲ್​ಗಳನ್ನು ಕಟ್​ ಮಾಡಿ, ಜನರೇಟರ್​ಗಳನ್ನು ಕದ್ದು ಟವರ್​ ಕೆಲಸ ಮಾಡದಂತೆ ಮಾಡಲಾಗಿದೆ. ಆದರೆ ಇದರಿಂದಾಗಿ ರಾಜ್ಯದ ಜನತೆಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸಾರ್ವಜನಿಕ ಆಸ್ಥಿಯನ್ನು ಹಾನಿ ಮಾಡುತ್ತಿರುವುದನ್ನು ತಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಅಮರೇಂದರ್​ ಸಿಂಗ್​ ಹೇಳಿದ್ದಾರೆ. ಈ ರೀತಿ ಕೆಲಸ ಮಾಡುತ್ತಿರುವ ಹೋರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?
ರಾಜ್ಯದಲ್ಲಿ ಈವರೆಗೆ ಹಾಳು ಮಾಡಲಾದ ಟವರ್​ಗಳಲ್ಲಿ 433 ಟವರ್​ಗಳನ್ನು ಸರಿಪಡಿಸಲಾಗಿದೆ. ಟವರ್​ ಹಾಳು ಮಾಡಿದ್ದರಿಂದಾಗಿ ಬ್ಯಾಂಕಿಗ್​ ಸೇವೆ, ವರ್ಕ್​ ಫ್ರಂ ಹೋಂ ನಲ್ಲಿದ್ದವರು ಮತ್ತು ಆನ್​ಲೈನ್​ ತರಗತಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ಪಂಜಾಬ್​ನಲ್ಲಿ 1,561 ಮೊಬೈಲ್​ ಟವರ್​ಗಳನ್ನು ಹಾಳುಗೆಡವಿದ ರೈತ ಹೋರಾಟಗಾರರುpic.twitter.com/3bewmpfzQq
— Vijayavani (@VVani4U)December 29, 2020

ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + six =
Remember me
