ವಾರ್ಷಿಕ ಅಮರನಾಥ ಯಾತ್ರೆ ಜುಲೈ 21ರಂದು ಆರಂಭವಾಗಲಿದೆ. ಯಾತ್ರೆ ಅವಧಿಯನ್ನು ಕೋವಿಡ್-19 ಹಿನ್ನೆಲೆಯಲ್ಲಿ 15 ದಿನಗಳಿಗೆ ಕಡಿತ ಮಾಡಲಾಗಿದ್ದು, ಭಕ್ತರ ಸಂಖ್ಯೆ ಮೇಲೆ ಕೂಡ ಮಿತಿ ಹೇರಲಾಗಿದೆ. ಕರೊನಾ ಸಂಬಂಧಿತ ಇನ್ನೂ ಹಲವು ನಿರ್ಬಂಧಗಳನ್ನೂ ಪಾಲಿಸಲಾಗುತ್ತದೆ ಎಂದು ಅಮರನಾಥ ದೇವಾಲಯ ಮಂಡಳಿ (ಎಸ್​ಎಎಸ್​ಬಿ) ಅಧಿಕಾರಿಗಳು ಪ್ರಕಟಿಸಿದ್ದಾರೆ. ಅಮರನಾಥ ಯಾತ್ರೆ ಸುಗಮವಾಗಿ ನಡೆಸುವ ಸಲುವಾಗಿ ಅನಂತನಾಗ್ ಜಿಲ್ಲಾಧಿಕಾರಿ ಕುಲದೀಪ್ ಕುಮಾರ್ ಸಿದ್ಧ ಅಧಿಕಾರಿಗಳ ಸರಣಿ ಸಭೆಗಳನ್ನು ನಡೆಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್​ರ ಸಲಹೆಗಾರರು ಕೂಡ ಸಭೆ ನಡೆಸಿ ಸಿದ್ಧತೆ ಪರಿಶೀಲಿಸಿದ್ದಾರೆ.
ಆರತಿ ನೇರ ಪ್ರಸಾರ:ಸಾಧುಗಳು ಹೊರತು ಪಡಿಸಿ ಉಳಿದವರು ಕಡ್ಡಾಯವಾಗಿ ಆನ್​ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಯಾತ್ರೆಯ ಎಲ್ಲ 15 ದಿನ ಆರತಿಯ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ಮಂಡಳಿ ನಿರ್ಧರಿಸಿದೆ.
ಹೆಲಿಕಾಪ್ಟರ್ ಬಳಕೆ:ಸ್ಥಳೀಯ ಕಾರ್ವಿುಕರು ಸಿಗದಿರುವುರಿಂದ, ಮೂಲ ಶಿಬಿರದಿಂದ ಗುಹಾಲಯದ ವರೆಗಿನ ರಸ್ತೆ ನಿರ್ವಹಣೆ ಕಷ್ಟವಾಗಿರುವುದರಿಂದ 2020ರ ಯಾತ್ರೆಯನ್ನು ಹೆಲಿಕಾಪ್ಟರ್ ಮೂಲಕ ನಡೆಸಲಾಗುತ್ತದೆ. ಹೀಗಾಗಿ ಯಾತ್ರಿಗಳ ಪ್ರಯಾಣಕ್ಕೆ ಗಂಡರ್​ಬಾಲ್ ಜಿಲ್ಲೆಯ ಬಲ್ಟಾಲ್ ಮೂಲ ಶಿಬಿರದಿಂದ ಗುಹಾಲಯದ ವರೆಗೆ ಹೆಲಿಕಾಪ್ಟರ್​ಗಳನ್ನು ಬಳಸಲಾಗುತ್ತದೆ. ಯಾತ್ರೆಯ ಮಾರ್ಗದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ಉತ್ತರ ಕಾಶ್ಮೀರದ ಬಲ್ಟಾಲ್ ಮಾರ್ಗದ ಮೂಲಕ ಮಾತ್ರವೇ ಈ ಬಾರಿ ಯಾತ್ರೆ ಕೈಗೊಳ್ಳಲಾಗುತ್ತದೆ. ಸಾಂಪ್ರದಾಯಿಕ ಫಲ್ಗಾಮ್ ಮಾರ್ಗದ ಮೂಲಕ ಯಾತ್ರೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎಲ್ಲಿದೆ?
ಕೋವಿಡ್ ನಿರ್ಬಂಧಗಳು
ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈ ಬಾರಿ ಯಾತ್ರಿಗಳಿಗೆ ಹಲವು ನಿರ್ಬಂಧ ವಿಧಿಸಲಾಗಿದೆ.
* ಯಾತ್ರಿಗಳ ಸಂಖ್ಯೆಯನ್ನು 5000ಕ್ಕೆ ಸೀಮಿತಗೊಳಿಸಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಿದ್ದರು.
* ಸಾಧುಗಳನ್ನು ಹೊರತುಪಡಿಸಿ ಉಳಿದಂತೆ 55 ವರ್ಷ ಮೇಲ್ಪಟ್ಟ ಭಕ್ತರಿಗೆ ಯಾತ್ರೆ ಹೋಗಲು ಅವಕಾಶವಿಲ್ಲ.
* ಯಾತ್ರಿಗಳು ಕೋವಿಡ್ ನೆಗೆಟಿವ್ ವರದಿ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.
* ಪ್ರಮಾಣಪತ್ರ ಇದ್ದರೂ ಜಮ್ಮು- ಕಾಶ್ಮೀರ ಪ್ರವೇಶಿಸಿದ ಕೂಡಲೇ ಭಕ್ತರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
