ನವದೆಹಲಿ:ಏನಾದರೂ ಕೊಂಡುಕೊಳ್ಳಬೇಕೆಂದರೆ ಅದಕ್ಕೆ ಆಫರ್ ಸಿಗಲಿ ಎಂದು ಕಾಯುವವರು ಸಾಕಷ್ಟು ಜನರಿದ್ದಾರೆ. ಅದರಲ್ಲೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡುಕೊಳ್ಳಬೇಕೆಂದರೆ ಆಫರ್ ಬೇಕೇ ಬೇಕು ಎನ್ನುವುವರು ಹಲವರು. ಅಂತವರಿಗೆ ಇಂದು ಅಮೇಜಾನ್ ಭರ್ಜರಿ ಉಡುಗೊರೆಯನ್ನೇ ಕೊಟ್ಟಿತ್ತು. 96 ಸಾವಿರ ರೂಪಾಯಿ ಬೆಲೆಯ ಎಸಿಗೆ ಬರೋಬ್ಬರಿ ಶೇ. 94 ರಿಯಾಯಿತಿ ನೀಡಲಾಗಿದ್ದು ಕೇವಲ 5,900 ರೂಪಾಯಿಗೆ ಮಾರಾಟ ಮಾಡಲಾಗಿತ್ತು.
ಇದು ಆಶ್ಚರ್ಯವೆನಿಸಿದರೂ ಸತ್ಯವೇ. ಥೋಶಿಬಾ ಸಂಸ್ಥೆಯ ಎಸಿಗಳು ಅಮೇಜಾನ್​ನಲ್ಲಿ ಲಭ್ಯವಿದೆ. ಅದರಲ್ಲಿ 1.8 ಟನ್ 5 ಸ್ಟಾರ್ ಎಸಿ ಕೂಡ ಒಂದು. ಅದರ ಬೆಲೆ ಸುಮಾರು 96 ಸಾವಿರ. ಅಮೇಜಾನ್ ಮಾಮೂಲು ದಿನಗಳಲ್ಲಿ ಅದನ್ನು ರಿಯಾಯಿತಿ ಕೊಟ್ಟು 90 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತದೆ. ಆದರೆ ಇಂದು ವಿಶೇಷ ಎನ್ನುವಂತೆ ಶೇ. 94 ರಿಯಾಯಿತಿ ಕೊಟ್ಟು 5,900 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ತಿಂಗಳಿಗೆ 270 ರೂಪಾಯಿ ಕಟ್ಟುವ ಇಎಂಐ ಆಯ್ಕೆಯನ್ನೂ ಕೊಡಲಾಗಿತ್ತು.
ಸ್ವಲ್ಪ ಸಮಯದರಲ್ಲಿ ಎಚ್ಚೆತ್ತುಕೊಂಡ ಸಂಸ್ಥೆ ಬೆಲೆಯನ್ನು 59,490 ರೂಪಾಯಿಗೆ ಏರಿಸಿದೆ. ಶೇ. 20 ರಿಯಾಯಿತಿ ದರವನ್ನು ನೀಡಲಾಗಿದೆ. ತಿಂಗಳಿಗೆ 2,800 ಕಟ್ಟುವ ಇಎಂಐ ಆಪ್ಶನ್ ಕೂಡ ಕೊಡಲಾಗಿದೆ. ಅಲ್ಲಿಗೆ ಶೇ.94 ರಿಯಾಯಿತಿ ಕೆಲ ತಾಂತ್ರಿಕ ದೋಷದಿಂದ ಉಂಟಾಗಿದ್ದು ಎನ್ನುವುದು ಸ್ಪಷ್ಟವಾಗಿದೆ. ಅದೇನೇ ಇರಲಿ, ಈ ಎಡವಟ್ಟಿನ ಸಮಯದಲ್ಲಿ ಎಸಿ ಕೊಂಡವರು ಮಾತ್ರ ಅದೃಷ್ಟವಂತರೇ ಸರಿ. (ಏಜೆನ್ಸೀಸ್)
ರಾಜ್ಯದಲ್ಲಿ ಮುಂದಿನ ಐದು ದಿನ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಕಿರಣ್​ಗೆ ಡಿವೋರ್ಸ್ ನೀಡಿದ ಅಮೀರ್​ಗೆ ಫಾತೀಮಾ 3ನೇ ಹೆಂಡತಿ!? ಟ್ರೆಂಡಿಂಗ್​ನಲ್ಲಿ ದಂಗಲ್ ನಟಿ

ವೇದಿಕೆಯ ಮೇಲೇ ವನಿತಾಗೆ ಅವಮಾನಿಸಿದ ರಮ್ಯಾ ಕೃಷ್ಣ!? ಡ್ಯಾನ್ಸ್ ಶೋನಿಂದ ಹೊರಬಂದ ನಟಿ ಹೇಳಿದ್ದೇನು?

ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 20 =
Remember me
