ನವದೆಹಲಿ:ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಕುಟುಂಬ ಇತ್ತೀಚೆಗಷ್ಟೇ ತಮ್ಮ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆಯನ್ನು 5,454 ಕೋಟಿ ರೂ. ಖರ್ಚು ಮಾಡಿ ಬಹಳ ಅದ್ಧೂರಿಯಾಗಿ ನೆರವೇರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಇಡೀ ದೇಶವೇ ಈ ವಿವಾಹ ಸಮಾರಂಭವನ್ನು ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಿತು. ಇದೀಗ ಅಂಬಾನಿ ಕುಟುಂಬಕ್ಕೆ ಸಂಬಂಧಿಸಿದ ಮತ್ತೊಂದು ಆಶ್ಚರ್ಯಕರ ಸಂಗತಿ ವರದಿಯಾಗಿದೆ. ಅದೇನೆಂದರೆ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಶೇ.10 ರಷ್ಟು ಆಸ್ತಿಯನ್ನು ಅಂಬಾನಿ ಕುಟುಂಬವೇ ಹೊಂದಿದೆ.
ಹೌದು, 2024ರ ಬಾರ್ಕ್ಲೇಸ್ ಪ್ರೈವೇಟ್​ ಕ್ಲೈಂಟ್ಸ್​ ಹುರುನ್​ ಇಂಡಿಯಾ ಮೋಸ್ಟ್ ವ್ಯಾಲ್ಯೂಯೇಬಲ್​ ಫ್ಯಾಮಿಲಿ ಬಿಸಿನೆಸ್​ ಲೀಸ್ಟ್​ನಲ್ಲಿ ಅಂಬಾನಿ ಕುಟಂಬ ಮೊದಲ ಸ್ಥಾನವನ್ನು ಪಡೆದಿದೆ. ಬರೋಬ್ಬರಿ 309 ಬಿಲಿಯನ್​ ಡಾಲರ್​ (25.75 ಲಕ್ಷ ಕೋಟಿ ರೂಪಾಯಿ) ಆಸ್ತಿಯನ್ನು ಹೊಂದಿರುವ ಮುಕೇಶ್​ ಅಂಬಾನಿ ಕುಟುಂಬ ದೇಶದ ಜಿಡಿಪಿಯ ಶೇ. 10 ರಷ್ಟು ಸಂಪತ್ತನ್ನು ತನ್ನ ಖಜಾನೆಯಲ್ಲಿ ತುಂಬಿಕೊಂಡಿದೆ.
ಈ ಲೀಸ್ಟ್​ನಲ್ಲಿ ನೀರಜ್​ ಬಜಾಬ್​ ನೇತೃತ್ವದ ಬಜಾಜ್​ ಕುಟುಂಬ 7,12,700 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕುಮಾರ್​ ಮಂಗಳಂ ಅವರ ಬಿರ್ಲಾ ಕುಟುಂಬ 5,38,500 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, 15,44,500 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವ ಗೌತಮ್​ ಅದಾನಿ ನೇತೃತ್ವದ ಸಂಘಟಿತ ಕಂಪನಿ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿಲ್ಲ. ಏಕೆಂದರೆ, ಮೊದಲ ತಲೆಮಾರಿನ ಕುಟುಂಬ ವ್ಯವಹಾರದ ಸ್ಥಿತಿಯಿಂದಾಗಿ ಅದಾನಿ ಕಂಪನಿ ಸ್ಥಾನ ಪಡೆದಿಲ್ಲ.
ಹುರುನ್ ವರದಿಯ ಪ್ರಕಾರ, ಅದರ ಪಟ್ಟಿಯು ಕುಟುಂಬದ ವಂಶಸ್ಥರು ಬಿಜಿನೆಸ್​ಗಾಗಿ ಸಕ್ರಿಯವಾಗಿ ಕೊಡುಗೆ ನೀಡುತ್ತಾ ಬಂದಿರುವ ಕೌಟುಂಬಿಕ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಅಲ್ಲದೆ, ಕುಟುಂಬ ಮಾಲೀಕತ್ವದ ಉದ್ಯಮಗಳ ಒಟ್ಟಾರೆ ಮೌಲ್ಯವನ್ನು ಇದು ನಿರ್ಣಯಿಸುತ್ತದೆ.
ಈ ಪಟ್ಟಿಯಲ್ಲಿರುವ ಭಾರತದ ಅಗ್ರ ಹತ್ತು ವ್ಯಾಪಾರ ಕುಟುಂಬಗಳು ಒಟ್ಟಾರೆಯಾಗಿ 60,09,100 ಕೋಟಿ ಮೌಲ್ಯವನ್ನು ಹೊಂದಿವೆ. ಈ ಒಂದು ಅಂಕಿ-ಅಂಶ ಭಾರತದ ವ್ಯಾಪಾರ ವಲಯದಲ್ಲಿ ಕುಟುಂಬ ನೇತೃತ್ವದ ಉದ್ಯಮಗಳ ಗಮನಾರ್ಹ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ. 2024ರ ಬಾರ್ಕ್ಲೇಸ್ ಪ್ರೈವೇಟ್​ ಕ್ಲೈಂಟ್ಸ್​ ಹುರುನ್ ಇಂಡಿಯಾ ಮೋಸ್ಟ್​ ವ್ಯಾಲ್ಯೂಯೇಬಲ್​ ಫ್ಯಾಮಿಲಿ ಬಿಜಿನೆಸ್​ ಒಟ್ಟು ಮೌಲ್ಯವು 130 ಲಕ್ಷ ಕೋಟಿ ರೂ. ಆಗಿದೆ. ಈ ಅಂಕಿ ಅಂಶವು ಯುಎಇ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳ ಜಿಡಿಪಿಯನ್ನು ಸಹ ಮೀರಿಸುತ್ತದೆ. ಗಮನಾರ್ಹ ಸಂಗತಿ ಏನೆಂದರೆ, ಈ ಪಟ್ಟಿಯಲ್ಲಿ ಒಟ್ಟು 46 ಲಕ್ಷ ಕೋಟಿ ರೂ. ಮೌಲ್ಯವನ್ನು ಹೊಂದಿರುವ ಅಗ್ರ ಮೂರು ಕುಟುಂಬಗಳು ಸಿಂಗಾಪುರದ ಜಿಡಿಪಿಗೆ ಹೋಲಿಸಬಹುದಾದ ಅಂಕಿ ಅಂಶವನ್ನು ಹೊಂದಿವೆ.
ಹತ್ತು ಮೋಸ್ಟ್​ ವ್ಯಾಲ್ಯೂಯೇಬಲ್ ಫ್ಯಾಮಿಲಿ ಬಿಜಿನೆಸ್​ ಪಟ್ಟಿ ಈ ಕೆಳಕಂಡಂತಿದೆ1. ಅಂಬಾನಿ ಕುಟುಂಬ2. ಬಜಾಜ್​ ಕುಟುಂಬ3. ಕುಮಾರ್​ ಮಂಗಳಂ ಬಿರ್ಲಾ ಕುಟುಂಬ4. ಜಿಂದಾಲ್​ ಕುಟುಂಬ5. ನದಾರ್​ ಕುಟುಂಬ6. ಮಹೀಂದ್ರಾ ಕುಟುಂಬ7. ದನಿ ಕುಟುಂಬ, ಚೋಕ್ಸಿ ಕುಟುಂಬ ಮತ್ತು ವಕಿಲ್​ ಕುಟುಂಬ8. ಪ್ರೇಮ್​ಜಿ ಕುಟುಂಬ9. ರಾಜೀವ್​ ಸಿಂಗ್​ ಕುಟುಂಬ10. ಮುರುಗಪ್ಪ ಕುಟುಂಬ
ಪ್ಲೀಸ್​ ನನ್ನನ್ನು ಮದ್ವೆಯಾಗಿ! ಕಾಲಿಗೆ ಬಿದ್ದು ಬೇಡಿಕೊಂಡ ಅಭಿಮಾನಿಗೆ ಸಮಂತಾ ಕೊಟ್ಟ ಉತ್ತರ ವೈರಲ್​

ಶೋಭಿತಾ ತುಂಬಾ…ಭಾವಿ ಸೊಸೆ ಬಗ್ಗೆ 6 ವರ್ಷದ ಹಿಂದೆ ನಾಗಾರ್ಜುನ​ ನೀಡಿದ್ದ ಬೋಲ್ಡ್​ ಹೇಳಿಕೆ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
