ಮುಂಬೈ:ಕಲಾವಿದರ ಸಮಾಗಮದಲ್ಲಿ ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್​ಎಂಎಸಿಸಿ) ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ಭಾರತದ ಮೆಟ್​ ಗಾಲಾ ಎಂದು ಕರೆಯಲ್ಪಡುವ ಕಾರ್ಯಕ್ರಮಕ್ಕೆ ಜಗತ್ತಿನ ಮೂಲೆ ಮೂಲೆಗಳಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ಅದ್ಧೂರಿ ಕಾರ್ಯಕ್ರಮ ಮಾರ್ಚ್ 31 ಮತ್ತು ಏಪ್ರಿಲ್​ 1ರಂದು ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಸಂಬಂಧಿಸಿದ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅವುಗಳಲ್ಲಿ ಒಂದು ಫೋಟೋ ಮಾತ್ರ ವಿಶೇಷವಾಗಿ ಜನರ ಗಮನ ಸೆಳೆದಿದೆ. ಆ ಫೋಟೋ ಯಾವುದೆಂದರೆ, ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬ ಊಟೋಪಚಾರ ಮಾಡಿರುವ ಫೋಟೋ.
ಇದನ್ನೂ ಓದಿ:ರಫ್ತು ಹೆಚ್ಚಳದ ಗುರಿ: ಭಾರತದ ಹೊಸ ವಿದೇಶ ವ್ಯಾಪಾರ ನೀತಿ ಅನಾವರಣ
Middle class me: waiting for guests to leave so i can eat leftover snacks & sweets.
Ambani's offering sweets to guests:pic.twitter.com/oCJ1qMlR3q
— Shubh (@kadaipaneeeer)April 2, 2023

ಅತಿಥಿಗಳಿಗೆ ಭೂರಿ ಭೋಜನ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಎಲ್ಲರಿಗೂ ಬೆಳ್ಳಿ ತಟ್ಟೆಯಲ್ಲಿ ಉಣ ಬಡಿಸಲಾಯಿತು. ರೋಟಿ, ದಾಲ್​, ಪಾಲಕ್​ ಪನ್ನೀರ್​, ಕರ್ರಿ, ಹಲ್ವಾ, ಸಿಹಿತಿಂಡಿ, ಅಪ್ಪಳ ಮತ್ತು ಲಾಡು ಮುಂತಾದ ಭಾರತೀಯ ಆಹಾರದ ಜತೆಗೆ ಒಂದು ಗ್ಲಾಸ್​ ವೈನ್​ ಕೂಡ ಅತಿಥಿಗಳಿಗೆ ನೀಡಲಾಯಿತು.
ಇದೀಗ ಊಟದ ಮೆನುವಿನಲ್ಲಿದ್ದ ಒಂದು ಖಾದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಉತ್ತರ ಭಾರತದ ಜನಪ್ರಿಯ ಸಿಹಿ ಖಾದ್ಯವಾದ ದೌಲತ್​ ಕಿ ಚಾತ್ ಜೊತೆಗೆ 500 ರೂ. ಗರಿ ಗರಿಯಾದ ನೋಟುಗಳನ್ನು ಸಹ ಬಡಿಸಲಾಗಿದೆ. 500 ರೂ. ನೋಟುಗಳು ಊಟದ ತಟ್ಟೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದರೆ, ಅಸಲಿಯತ್ತು ಏನೆಂದರೆ, ಈ ನೋಟುಗಳು ನಕಲಿ ನೋಟುಗಳಾಗಿವೆ.
ಇದನ್ನೂ ಓದಿ:ಸಿಐಎಸ್‌ಎಫ್ ಯೋಧ ಆತ್ಮಹತ್ಯೆ  ಹದಡಿ ಗ್ರಾಮಕ್ಕೆ ಪಾರ್ಥಿವ ಶರೀರ
NMACC ಯ ಭವ್ಯ ಉದ್ಘಾಟನಾ ಸಮಾರಂಭವು ಎರಡು ದಿನಗಳ ಸುದೀರ್ಘ ಕಾರ್ಯಕ್ರಮವಾಗಿತ್ತು. ನೀತಾ ಅಂಬಾನಿಯವರ ಕನಸಿನ ಯೋಜನೆ ಎಂದು ಬಣ್ಣಿಸಲಾದ NMACC ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಾಲಿವುಡ್ ತಾರೆಯರಾದ ಟಾಮ್ ಹಾಲೆಂಡ್, ಝೆಂಡಾಯಾ, ಗಿಗಿ ಹಡಿದ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸಿದ್ಧಾರ್ಥ್ ಮಲ್ಹೋತ್ರಾ, ಗೌರಿ ಖಾನ್, ಕಿಯಾರಾ ಅಡ್ವಾಣಿ, ಕರಣ್ ಜೋಹರ್, ಕರೀನಾ ಕಪೂರ್, ಐಶ್ವರ್ಯಾ ರೈ, ಕಾಜೋಲ್, ರಣವೀರ್ ಸಿಂಗ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಉದ್ಘಾಟನಾ ಸಮಾರಂಭದಲ್ಲಿ ಪೂರ್ಣವಾಗಿ ಹಾಜರಿದ್ದರು.(ಏಜೆನ್ಸೀಸ್​)
ನಮ್ಮ ಅಜ್ಜಿಯಂದಿರ ಬ್ಯೂಟಿ; ಸೀಕ್ರೆಟ್ಸ್ ಇಲ್ಲಿದೆ ನೋಡಿ

ಜಗಕೆ ಬೆಳಕಾದ ಭಗವಾನ್ ಮಹಾವೀರ: ಇಂದು ಜಯಂತಿ

ವಿಶ್ವಾಸಾರ್ಹತೆಯ ಸವಾಲು: ಪ್ರಮುಖ ತನಿಖಾ ಸಂಸ್ಥೆಗೆ ವಜ್ರ ಮಹೋತ್ಸವ ಸಂಭ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
