ಲಖನೌ:ದೇಶದಾದ್ಯಂತ ಕರೊನಾ ಸೋಂಕಿನ ಅಬ್ಬರ ಹೆಚ್ಚಿದ್ದು, ಸೋಂಕಿತರಿಗೆ ಆ್ಯಂಬುಲೆನ್ಸ್​ ಸೇವೆ ಕಲ್ಪಿಸುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಹೀಗಿರುವಾಗ ಯುವಕರ ಗುಂಪೊಂದು ಆ್ಯಂಬುಲೆನ್ಸ್​ ಅನ್ನು ದುರ್ಬಳಕೆ ಮಾಡಿಕೊಂಡು ಸಿಕ್ಕಿಹಾಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ವಾರಾಣಸಿಯ ರಾಮನಗರ ಏರಿಯಾದಲ್ಲಿ ನಿರ್ಜನ ಪ್ರದೇಶವೊಂದರಲ್ಲಿ ಆ್ಯಂಬುಲೆನ್ಸ್​ ನಿಂತಿತ್ತು. ಸುಮಾರು ಗಂಟೆಗಳಾದರೂ ಆ್ಯಂಬುಲೆನ್ಸ್​ ಅಲ್ಲಿಯೇ ನಿಂತಿದ್ದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ್ಯಂಬುಲೆನ್ಸ್ ಬಳಿ ಹೋಗಿ ನೋಡಿದಾಗ ಅವರಿಗೆ ಶಾಕ್​ ಆಗಿದೆ.
ಮೂವರು ಯುವಕರು ಮತ್ತು ಓರ್ವ ಯುವತಿ ಆ್ಯಂಬುಲೆನ್ಸ್​ನೊಳಗೆ ಮಜಾ ಮಾಡುತ್ತಾ ಕುಳಿತಿದ್ದಾಗಿ ಹೇಳಲಾಗಿದೆ. ತಕ್ಷಣ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಆ್ಯಂಬುಲೆನ್ಸ್​ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿರುವ ಆ್ಯಂಬುಲೆನ್ಸ್ ಆಗಿದ್ದು, ಅದನ್ನು ಯುವಕನೋರ್ವನಿಗೆ ಆಸ್ಪತ್ರೆ ಬಾಡಿಗೆಗೆ ಕೊಟ್ಟಿದ್ದಾಗಿ ಹೇಳಲಾಗಿದೆ. ಈ ಹಿಂದೆಯೂ ಈ ರೀತಿಯ ದೂರು ಕೇಳಿಬಂದಿತ್ತು ಎನ್ನಲಾಗಿದೆ. (ಏಜೆನ್ಸೀಸ್)
ಸ್ವಕ್ಷೇತ್ರಕ್ಕೆ ಪಿಪಿಇ ಕಿಟ್​, ಮಾಸ್ಕ್​ & ಆ್ಯಂಬುಲೆನ್ಸ್​ ಕಳುಹಿಸಿಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ನರ್ಸ್​ ಕೆನ್ನೆಗೆ ಹೊಡೆದ ವೈರಲ್​ ವಿಡಿಯೋದಲ್ಲಿದ್ದ ಡಾಕ್ಟರ್​ ಶವ ಪತ್ತೆ! ಕುಟುಂಬದವರು ಹಾಗೆ ಮಾಡಿದ್ದಾದರೂ ಏಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
