ಜೈಪುರ:ಚಾಲಕನ ನಿಯಂತ್ರಣ ಕಳೆದುಕೊಂಡ ಆಂಬ್ಯುಲೆನ್ಸ್ ಒಂದು​ ಅಡ್ಡಾದಿಡ್ಡಿಯಾಗಿ ಚಲಿಸಿ, ಇನ್ನೇನು ಕಂದಕಕ್ಕೆ ಬೀಳುವಷ್ಟರಲ್ಲಿ, ಪವಾಡಸದೃಶ ರೀತಿಯಲ್ಲಿ ಅಲ್ಲಿನ ರಕ್ಷಣಾಗೋಡೆಯಲ್ಲೇ ಸಿಲುಕಿದ ಸಿನಿಮೀಯ ಘಟನೆ ರಾಜಸ್ಥಾನದ ಕರಣ್​ಪುರ ಕಣಿವೆಯಲ್ಲಿರುವ ರಸ್ತೆಯಲ್ಲಿ ನಡೆದಿದೆ.
ಕಂದಕದ ಸುತ್ತ ನಿರ್ಮಿಸಲಾಗಿರುವ ರಕ್ಷಣಾ ಗೋಡೆಗೆ ಡಿಕ್ಕಿ ಹೊಡೆದಿರುವ ಆಂಬ್ಯುಲೆನ್ಸ್​​, ಇನ್ನೇನು ಕೆಳಗೆ ಬೀಳಬೇಕಿತ್ತು. ಆದರೆ, ಅದೃಷ್ಟವಶಾತ್​ ಅಲ್ಲಿಯೇ ಜೋತು ಬಿದ್ದಿತು. ವಾಹನದ ಮುಂಭಾಗದ ಎರಡೂ ಚಕ್ರಗಳು ನೇತಾಡುತ್ತಿದ್ದರೆ, ವಾಹನದ ಮುಕ್ಕಾಲು ಭಾಗ ರಸ್ತೆಯ ಮೇಲಿತ್ತು. ಕೊನೆಗೆ ವಾಹನ ಕಂದಕಕ್ಕೆ ಬೀಳದಂತೆ ರಕ್ಷಣೆ ಮಾಡಲಾಯಿತು.
ಇದನ್ನೂ ಓದಿ:ಮದುವೆಯಾಗಿ ನಾಲ್ಕು ತಿಂಗಳಾಗಿವೆ, ವಿಚ್ಛೇದನಕ್ಕೆ ಕೇಸು ಹಾಕಬಹುದೇ?
ಆಂಬ್ಯುಲೆನ್ಸ್ ಒಳಗೆ ಚಾಲಕ ಮತ್ತು ಕಾಂಪೌಂಡರ್​ ಇದ್ದರು.​ ಬ್ಯಾಲೆನ್ಸ್​ ತಪ್ಪಿ ಕಂದಕಕ್ಕೆ ಬೀಳುವ ಭಯದಲ್ಲಿದ್ದ ಇಬ್ಬರು ತಮ್ಮ ಸೀಟಿನಿಂದ ಸ್ವಲ್ಪವೂ ಕದಲದ ಸ್ಥಿತಿಯಲ್ಲಿದ್ದರು. ಘಟನೆ ನಡೆದ ಹಲವು ಗಂಟೆಗಳವರೆಗೂ ಇಬ್ಬರೂ ಸ್ವಲ್ಪವೂ ಕದಲದೆ ಕುಳಿತಿದ್ದರು.
ಅಂತಿಮವಾಗಿ, ವಾಹನವನ್ನು ಗಮನಿಸಿದ ಸ್ಥಳೀಯರು ಸಕಾಲಕ್ಕೆ ನೆರವಿಗೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಪವಾಡವೆಂಬಂತೆ ಬದುಕುಳಿದಿದ್ದಾರೆ. ಇಬ್ಬರಿಗೂ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. (ಏಜೆನ್ಸೀಸ್​)
ಕರ್ನಾಟಕ ಮಾದರಿ, ಅಭಿವೃದ್ಧಿ ರಹದಾರಿ: ಐದು ವರ್ಷಗಳ ನೀಲಿನಕ್ಷೆ ಮುಂದಿಟ್ಟ ರಾಜ್ಯಪಾಲ ಗೆಹಲೋತ್; 16ನೇ ವಿಧಾನಸಭೆಗೆ ವಿಧ್ಯುಕ್ತ ಚಾಲನೆ

ಹಳೇ ಕೇಸ್​ಗೆ ಮರುಜೀವ: ಬಿಜೆಪಿ ಸರ್ಕಾರದ ಹಲವು ಹಗರಣ ತನಿಖೆಗೆ ಎಸ್​ಐಟಿ ರಚನೆ; ಬಿಟ್​ಕಾಯಿನ್ ಜಾಲ ಭೇದಿಸಲು ಎಡಿಜಿಪಿ ಮನೀಶ್ ತಂಡ

ಯಾವಾಗಲೂ ಅಗತ್ಯ ಮಾನಸಿಕ ಆರೋಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
