ಚೆನ್ನೈ:ಗಂಭೀರ ಸ್ಥಿತಿಯಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್​ ಅಪಘಾತಕ್ಕೀಡಾಗಿ 9 ತಿಂಗಳ ಗರ್ಭಿಣಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಿಂದ ಗರ್ಭಿಣಿ ಮತ್ತು ಆಕೆಯ ಅತ್ತೆ ಹಾಗೂ ನಾದಿನಿ ಅಸುನೀಗಿದ್ದಾರೆ. ಇಂದು ಮುಂಜಾನೆ ಘಟನೆ ನಡೆದಿದೆ. ಮತ್ತೊಂದು ಜೀವಕ್ಕೆ ಜನ್ಮ ನೀಡಬೇಕಾದ ಗರ್ಭಿಣಿ ಮೃತಪಟ್ಟಿರುವುದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಸೊರಪೊಟ್ಟು ಗ್ರಾಮದ ನಿವಾಸಿ 9 ತಿಂಗಳ ಗರ್ಭಿಣಿ ಜಯಲಕ್ಷ್ಮೀಗೆ ಬುಧವಾರ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯ ಅತ್ತೆ ಸೆಲ್ವಿ ತಕ್ಷಣ ತನ್ನ ಮಗಳು ಅಂಬಿಕಾ ಜತೆಗೂಡಿ ಆಂಬ್ಯುಲೆನ್ಸ್​ ಸಹಾಯದೊಂದಿಗೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ಮಾರ್ಗಮಧ್ಯೆ ಆಂಬ್ಯುಲೆನ್ಸ್​ ಟೈಯರ್​ ಸ್ಫೋಟಗೊಂಡು ಮರಕ್ಕೆ ಡಿಕ್ಕಿ ಹೊಡೆಯುತ್ತದೆ. ಸ್ಥಳದಲ್ಲೇ ಅಂಬಿಕಾ, ಗರ್ಭಿಣಿ ಜಯಲಕ್ಷ್ಮೀ ಹಾಗೂ ಅತ್ತೆ ಸೆಲ್ವಿ ಮೃತರಾಗುತ್ತಾರೆ. ಆಂಬ್ಯುಲೆನ್ಸ್​ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಆಘಾತ ವ್ಯಕ್ತಪಡಿಸಿದ್ದು, ಜಯಲಕ್ಷ್ಮೀ ಕುಟುಂಬಕ್ಕೆ 5 ಲಕ್ಷ ಹಾಗೂ ಸೆಲ್ವಿ ಮತ್ತು ಅಂಬಿಕಾ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೆ, ಜೀವವಿಮೆ ಪರಿಹಾರವನ್ನು ಕುಟುಂಬಗಳಿಗೆ ತಕ್ಷಣ ನೀಡುವಂತೆ ಆದೇಶಿಸಿದ್ದಾರೆ.(ಏಜೆನ್ಸೀಸ್​)
ಅನ್​ಲಾಕ್​ ಪ್ರಕ್ರಿಯೆ ಆರಂಭ: ಈಗಿರುವ ನಿರ್ಬಂಧಗಳಲ್ಲಿ ಕೆಲವು ಮಾರ್ಪಾಡು ಮಾಡಿದ ಸಿಎಂ ಬಿಎಸ್​ವೈ

ಜಾಮೀನಿನ ಮೇಲೆ ಹೊರಬಂದು, ದೆಹಲಿ ಪೊಲೀಸರಿಗೆ ಸವಾಲಾಗಿರುವ ಗ್ಯಾಂಗ್​ಸ್ಟರ್!

ಕೆಲವೊಂದನ್ನು ತೋರಿಸಿ, ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತೆ! ಹಾಟ್​ ಬ್ಯೂಟಿ ಹೆಬ್ಬಾ ಪಟೇಲ್ ಬೋಲ್ಡ್​ ಹೇಳಿಕೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 1 =
Remember me
