ಜೈಪುರ:ಬಾಲ್ಯವಿವಾಹವೂ ಸೇರಿದಂತೆ ಎಲ್ಲಾ ವಿವಾಹಗಳ ನೋಂದಣಿಯನ್ನು ಕಡ್ಡಾಯಗೊಳಿಸುವ ತಿದ್ದುಪಡಿ ವಿಧೇಯಕವೊಂದನ್ನು ರಾಜಸ್ಥಾನದ ವಿಧಾನಸಭೆ ಇಂದು ಅಂಗೀಕರಿಸಿದೆ. ಬಾಲ್ಯವಿವಾಹಗಳಿಗೆ ಮಾನ್ಯತೆ ನೀಡುವ ಈ ವಿಧೇಯಕ ವಿಧಾನಸಭೆಯ ಇತಿಹಾಸದಲ್ಲಿ ಕರಾಳ ದಿನವಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ರಾಜಸ್ಥಾನದ ಕಾಂಗ್ರೆಸ್​ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ರಾಜಸ್ಥಾನ ಕಂಪಲ್ಸರಿ ರಿಜಿಸ್ಟ್ರೇಷನ್ ಆಫ್ ಮ್ಯಾರೇಜಸ್​(ಅಮೆಂಡ್​ಮೆಂಟ್​) ಬಿಲ್​, 2021 ಅನ್ನು ಮಂಡಿಸಿತು. ತಕ್ಷಣ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ವಿಧೇಯಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸದನದಿಂದ ಹೊರನಡೆದರು.  “ವಿಧಾನಸಭೆಯು ಸರ್ವಾನುಮತದಿಂದ ಬಾಲವಿವಾಹಗಳಿಗೆ ಅವಕಾಶ ಕೊಡಲು ಸಾಧ್ಯವೇ? ಈ ವಿಧೇಯಕವನ್ನು ಅಂಗೀಕರಿಸಿದರೆ ಇದು ವಿಧಾನಸಭಾ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಲಿದೆ” ಎಂದು ಬಿಜೆಪಿ ಶಾಸಕ ಅಶೋಕ್ ಲಹೋಟಿ ಸುದ್ದಿಗಾರರಿಗೆ ಹೇಳಿದರು.
ಇದನ್ನೂ ಓದಿ:ಭಾರತಕ್ಕೆ ಬಂದ ಪತಿ ಮರಳಿ ಬಂದಿಲ್ಲ: ಗಂಡನಿಗಾಗಿ ಕೆನಡಾದಲ್ಲಿ ಕಣ್ಣೀರಿಡುತ್ತಿರುವ ಗರ್ಭಿಣಿ..!
ಆದಾಗ್ಯೂ ನಂತರದಲ್ಲಿ ವಿಧಾನಸಭೆಯಲ್ಲಿ ವಾಯ್ಸ್​ ಓಟ್​ನ ಮೂಲಕ ಮಸೂದೆಯು ಅಂಗೀಕರಿಸಲ್ಪಟ್ಟಿತು. ಈ ಮಸೂದೆಯು ಹೆಚ್ಚುವರಿ ಜಿಲ್ಲಾ ವಿವಾಹ ನೋಂದಣಿ ಅಧಿಕಾರಿ(ಡಿಎಂಆರ್​ಒ)ಗಳನ್ನು ನೇಮಿಸಲು ಅವಕಾಶ ನೀಡುತ್ತದೆ. ಜೊತೆಗೆ, ವಿವಾಹಗಳ ಕಡ್ಡಾಯ ನೋಂದಣಿ ಕಾಯ್ದೆ ಸೆಕ್ಷನ್ 8 ರಲ್ಲಿ ಮದುವೆಯ ಸಮಯದಲ್ಲಿ ಹುಡುಗಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿದ್ದರೆ ಮತ್ತು ಹುಡುಗನ ವಯಸ್ಸು 21 ಕ್ಕಿಂತ ಕಡಿಮೆಯಿದ್ದರೆ, ಅವರ ಪಾಲಕರು ಅಥವಾ ಪೋಷಕರು 30 ದಿನಗಳಲ್ಲಿ ನೋಂದಣಿ ಅಧಿಕಾರಿಗೆ ವಿವಾಹದ ಮಾಹಿತಿ ನೀಡಬೇಕೆಂದು ಹೇಳುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)
ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

ಓಲಾ ಎಲೆಕ್ಟ್ರಿಕ್​ ಸ್ಕೂಟರ್​​ನ ಹೊಸ ದಾಖಲೆ: 2 ದಿನಗಳಲ್ಲಿ 1100 ಕೋಟಿ ರೂ. ಮೊತ್ತದ ಮಾರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − seven =
Remember me
