ವಾಷಿಂಗ್ಟನ್​:ತಾಂತ್ರಿಕವಾಗಿ ಸದಾ ಮುಂದಿರುವ ಅಮೆರಿಕವು ಸಾಲದ ಬೇಗೆಯಲ್ಲಿ ಬೇಯಲಾರಂಭಿಸಿದೆ. ಅಮೆರಿಕದ ಸಾಲದ ಮೊತ್ತ ದಿನೇದಿನೆ ಹೆಚ್ಚುತ್ತಿರುವುದಾಗಿ ದೇಶದ ಶಾಸನ ಸಭೆಯ ಪ್ರಮುಖ ಸದಸ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಶಾಸನ ಸಭೆಯ ಸದಸ್ಯ ಅಲೆಕ್ಸ್ ಮೂನಿ ಅಮೆರಿಕದ ಸಾಲದ ವಿವರವನ್ನು ಬಿಚ್ಚಿಟ್ಟಿದ್ದಾರೆ. ಅನೇಕ ರಾಷ್ಟ್ರಗಳಿಂದ ಅಮೆರಿಕ ಸುಮಾರು 23.4 ಟ್ರಿಲಿಯನ್ ಡಾಲರ್​ ಸಾಲ ಪಡೆದಿದೆ. ಭಾರತದಿಂದಲೂ ಸುಮಾರು 15 ಲಕ್ಷ ಕೋಟಿ ರೂಪಾಯಿ (216 ಬಿಲಿಯನ್ ಡಾಲರ್) ಸಾಲ ಪಡೆದಿದ್ದು, ತೀರಿಸುವುದು ಬಾಕಿಯಿದೆ. ಚೀನಾದಿಂದಲೇ ಹೆಚ್ಚಿನ ಸಾಲ ಪಡೆದಿರುವುದಾಗಿ ಹೇಳಲಾಗಿದೆ. 2000ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲ 5.6 ಟ್ರಿಲಿಯನ್ ಡಾಲರ್ ಆಗಿತ್ತು. ಆದರೆ ಅದಾದ ನಂತರ ಸಾಲದ ಮೊತ್ತದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ದೇಶದಲ್ಲಿ ಸಾಲದ ನಿಯಂತ್ರಣ ಸಂಪೂರ್ಣವಾಗಿ ಹದಗೆಟ್ಟಿದೆ. ಇದೇ ರೀತಿ ಮುಂದೆ ಸಾಗಿದರೆ 2050ರ ಒಳಗೆ ದೇಶದ ರಾಷ್ಟ್ರೀಯ ಸಾಲ 104 ಟ್ರಿಲಿಯನ್​ ಡಾಲರ್​ಗಿಂತ ಹೆಚ್ಚಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಸದ್ಯದ ದೇಶದ ಪ್ರತಿ ನಾಗರಿಕನ ಮೇಲೆ ಸಾಲ ಹಂಚಿಕೆ ಮಾಡಿದರೆ ಪ್ರತಿಯೊಬ್ಬನ ಮೇಲೂ 53 ಲಕ್ಷ ರೂಪಾಯಿ (72,309 ಡಾಲರ್) ಸಾಲ ಬಿದ್ದಂತಾಗುತ್ತದೆ. ಕಳೆದ ವರ್ಷ ಅಂದರೆ 2020ರಲ್ಲಿ ತೆಗೆದುಕೊಂಡ ಸಾಲವನ್ನೇ ಪ್ರತಿ ನಾಗರಿಕನಿಗೆ ಹಂಚಿಕೆ ಮಾಡಿದರೆ ಪ್ರತಿಯೊಬ್ಬ ನಾಗರಿಕನ ಮೇಲಿನ ಸಾಲ 7.35 ಲಕ್ಷ ರೂಪಾಯಿ(10000 ಡಾಲರ್​)ಯಷ್ಟಾಗುತ್ತದೆ. ದೇಶವು ಈ ಪ್ರಮಾಣದಲ್ಲಿ ಸಾಲ ಪಡೆಯುತ್ತಿದೆ ಆದರೆ ಆ ಎಲ್ಲ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದರ ಬಗ್ಗೆ ಸುಳ್ಳು ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದು ಅಲೆಕ್ಸ್ ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪಿಸ್ತೂಲು ಹೇಗೆ ವರ್ಕ್​ ಆಗುತ್ತದೆಯೆಂದು ನೋಡಲು ಸೋದರಳಿಯನಿಗೇ ಗುಂಡಿಟ್ಟ ಮಾವ! ವಿಡಿಯೋ ವೈರಲ್​

ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​!

ಕೋಳಿಪಡೆ ಆಡಲು ಬಂದವನನ್ನು ಕೊಂದು ಪೊಲೀಸ್​ ಠಾಣೆ ಸೇರಿದ ಕೋಳಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
