ಜೈಪುರ:ಅಮೆರಿಕಾ ಮೂಲದ ಮಹಿಳೆಯೊಬ್ಬರು ಭಾರತ ಪ್ರವಾಸ ಕೈಗೊಂಡಾಗ, ಜೈಪುರದಲ್ಲಿ ವ್ಯಾಪಾರಿಯೊಬ್ಬರ ಬಳಿ ಚಿನ್ನಾಭರಣವೊಂದನ್ನು ಬರೋಬ್ಬರಿ 6 ಕೋಟಿ ರೂ. ಕೊಟ್ಟು ಖರೀದಿಸಿದ್ದರು. ಆದರೆ, ತಾನು ಕೊಂಡುಕೊಂಡಿದ್ದು ಅಸಲಿ ಚಿನ್ನವಲ್ಲ, ಬದಲಿಗೆ ಕೃತಕ ಆಭರಣ ಎಂಬ ಶಾಕಿಂಗ್ ಸಂಗತಿ ತಿಳಿದು ಭಾರೀ ಆಘಾತಕ್ಕೊಳಗಾದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ತಪ್ಪಿದ ಫಿಫಾ ವಿಶ್ವಕಪ್​ ಅರ್ಹತೆ ಅವಕಾಶ! ಕಳಪೆ ತೀರ್ಪು ನೀಡಿದ ರೆಫ್ರಿ
ಜೈಪುರ ಮೂಲದ ಅಂಗಡಿಯವರೊಬ್ಬರಿಂದ 300 ರೂ. ಮೌಲ್ಯದ ವಸ್ತುವನ್ನು 6 ಕೋಟಿ ರೂ. ಕೊಟ್ಟು ಖರೀದಿಸಿದ್ದ ಅಮೆರಿಕಾದ ಮಹಿಳೆ, ತಾನು ವ್ಯಾಪಾರಿಯ ಮೋಸದ ಜಾಲಕ್ಕೆ ಸಿಲುಕಿರುವ ವಿಷಯ ತನ್ನ ತಾಯ್ನಾಡಿಗೆ ಮರಳುವವರೆಗೂ ತಿಳಿದುಬಂದಿಲ್ಲ. ಆದ್ರೆ, ಈ ವರ್ಷ ಅಮೆರಿಕಾದಲ್ಲಿ ಏಪ್ರಿಲ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಚೆರಿಶ್ (ಮಹಿಳೆ) ತಮ್ಮ ಬಳಿಯಿದ್ದ ವಸ್ತುಗಳನ್ನು ಪ್ರದರ್ಶಿಸಿದಾಗ ಈ ಹಗರಣ ಬೆಳಕಿಗೆ ಬಂದಿದೆ.
ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ, ಗೌರವ್ ಸೋನಿ ಎಂದು ಪತ್ತೆಹಚ್ಚಲಾದ ಜೈಪುರದ ಅಂಗಡಿಯ ಮಾಲೀಕನನ್ನು ಹುಡುಕಿಕೊಂಡು ಆಕೆ ಭಾರತಕ್ಕೆ ಬಂದಿದ್ದರು ಎಂದುಎನ್​ಡಿಟಿವಿತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಅಂಗಡಿ ಮಾಲೀಕನನ್ನು ಪ್ರಶ್ನಿಸಲು ಬಂದ ವಿದೇಶಿ ಮಹಿಳೆ, ಕೃತಕ ಆಭರಣಗಳಿಗಾಗಿ ನನ್ನಿಂದ 6 ಕೋಟಿ ರೂ. ಪಾವತಿ ಮಾಡಿಕೊಂಡು, ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ದರ್ಶನ್​ ಅರೆಸ್ಟ್​ ಇತ್ತ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!
ಅಮೇರಿಕನ್ ಮಹಿಳೆ ಚೆರಿಶ್​ ನಿಜವಾದ ಚಿನ್ನದ ಆಭರಣಗಳು ಎಂದು ಊಹಿಸಿ, ಖರೀದಿಸಿದ ವಸ್ತುಗಳು ಅಸಲಿಗೆ ಚಿನ್ನದ ಪಾಲಿಶ್ ಹೊಂದಿರುವ ನಕಲಿ ತುಣುಕುಗಳಾಗಿವೆ. ಇದರ ಬೆನ್ನಲ್ಲೇ ಜೈಪುರ ಪೊಲೀಸರಿಗೆ ದೂರು ಸಲ್ಲಿಸಿರುವ ಮಹಿಳೆ, ಈ ವಿಷಯದಲ್ಲಿ ಯುಎಸ್ ರಾಯಭಾರ ಕಚೇರಿಯ ಸಹಾಯವನ್ನು ಸಹ ಕೋರಿದ್ದಾರೆ,(ಏಜೆನ್ಸೀಸ್).
ಜನರನ್ನು ಮೂರ್ಖರನ್ನಾಗಿ ಮಾಡಿದ್ಯಾ.. ಬಾಬರ್​ ಆಜಂ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಅಹ್ಮದ್ ಶೆಹಜಾದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
