ನವದೆಹಲಿ/ನ್ಯೂಯಾರ್ಕ್:ಭಾರತದಲ್ಲಿ ಕರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಾಗರೀಕರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳದಂತೆ ಮತ್ತು ಭಾರತದಲ್ಲಿದ್ದರೆ ಆದಷ್ಟು ಬೇಗ ಹಿಂತಿರುಗುವಂತೆ ಹೇಳಿದೆ. ಈ ನಿಟ್ಟಿನಲ್ಲಿ ಅತ್ಯಂತ ವಿಪರೀತ ಸ್ಥಿತಿಯಲ್ಲಿ ಜಾರಿಗೊಳಿಸುವ ಲೆವೆಲ್ 4 ಟ್ರಾವೆಲ್ ಅಡ್ವೈಸರಿಯನ್ನು ಅಮೆರಿಕ ಸರ್ಕಾರ ಜಾರಿಗೊಳಿಸಿದೆ. ಇದರಿಂದ, ಮುಂಬರುವ ದಿನಗಳಲ್ಲಿ ಅಮೆರಿಕ ಭಾರತದಿಂದ ಹೋಗುವ ವಿಮಾನಗಳಿಗೆ ತಡೆ ವಿಧಿಸಬಹುದೇ ಎಂಬ ಪ್ರಶ್ನೆ ಮೂಡಿದೆ.
“ಕೋವಿಡ್ 19 ಪ್ರಕರಣಗಳಿಂದಾಗಿ ಭಾರತದಲ್ಲಿ ವೈದ್ಯಕೀಯ ಆರೈಕೆಯ ಲಭ್ಯತೆ ತುಂಬಾ ನಿಯಮಿತವಾಗಿದೆ. ಭಾರತವನ್ನು ಬಿಟ್ಟು ವಾಪಸಾಗಲು ಇಚ್ಛಿಸುವವರು ಲಭ್ಯ ವಾಣಿಜ್ಯ ವಿಮಾನ ಸೇವೆಗಳನ್ನು ಈಗಲೇ ಬಳಸಬೇಕು” ಎಂದು ಪ್ರಯಾಣ ಸಂಬಂಧಿತ ಸರ್ಕಾರಿ ಟ್ವಿಟರ್ ಖಾತೆಯಲ್ಲಿ ​​ತಿಳಿಸಲಾಗಿದೆ. ಪ್ರತಿನಿತ್ಯ ಭಾರತದಿಂದ ಅಮೆರಿಕಕ್ಕೆ 14 ನೇರ ವಿಮಾನಗಳ ಸೇವೆ ಲಭ್ಯವಿದ್ದು, ಪ್ಯಾರಿಸ್​ ಮತ್ತು ಫ್ರಾಂಕ್​​ಫರ್ಟ್​ ಮೂಲಕ ಮತ್ತಷ್ಟು ವಿಮಾನಗಳು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.
#India: Access to medical care is severely limited due to COVID-19 cases. U.S. citizens wishing to depart should use available commercial options now. Daily direct flights to the US and flights via Paris and Frankfurt are available.https://t.co/p5a3v5ws9ypic.twitter.com/LqHhCiZVEg
— Travel – State Dept (@TravelGov)April 28, 2021

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,60,960 ಹೊಸ ಕರೊನಾ ಸೋಂಕಿನ ಪ್ರಕರಣಗಳು ಮತ್ತು 3,293 ಕರೊನಾ ಸಾವುಗಳು ವರದಿಯಾಗಿವೆ. ರಾಷ್ಟ್ರದ ರಾಜಧಾನಿ ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಮೇಲೆ ಒತ್ತಡ ಹೆಚ್ಚಾಗಿದೆ.(ಏಜೆನ್ಸೀಸ್)
ಭಾರತದ ಅಗತ್ಯ ಪೂರೈಸಲು ಓವರ್​ಟೈಮ್ : ಚೀನಾ ಅಂಬಾಸಿಡರ್ ಭರವಸೆ

ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾಗೆ ವೈ ಕ್ಯಾಟಗರಿ ಭದ್ರತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
