ಮುಂಬೈ:ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಇಂದು ಸಿನಿಮಾ ಮಾಡಿ ಪರದೆ ಮೇಲೆ ತರುವ ಸಾಹಸಗಳನ್ನು ಇಂದಿನ ಸಿನಿಮಾ ಮಂದಿ ಮಾಡುತ್ತಿದ್ದಾರೆ. ಆದರೆ ಮೂಲಕ ಕಥೆಯನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಹಲವರು ಬೇಸರ ಹೊರಹಾಕುತ್ತಾರೆ. ಇತ್ತೀಚೆಗೆ ತೆರೆ ಮೇಲೆ ಅಪ್ಪಳಿಸಿದ ಆದಿಪುರುಷ್​ ಸಿನಿಮಾದಲ್ಲಿ ರಾಮಾಯಣದ ಕಥೆಯನ್ನು ಸಂಪೂರ್ಣವಾಗಿ ಇರುಚಲಾಗಿದೆ ಎಂಬುದು ಹಲವರ ವಾದವಾಗಿದೆ.

ರಾಮಾಯಣ ಕಥೆಯಾಧಾರಿತ ಸಿನಿಮಾ ಹಾಗೂ ಸೀರಿಯಲ್​​ ಕಥೆಗಳು ಕೂಡಾ ಈ ಹಿಂದೆ ಪ್ರಸಾರವಾಗಿವೆ. ಆದರೆ ಆದಿಪುರುಷ್​ ಸಿನಿಮಾ ಮಾತ್ರ ರಾಮಾಯಣದ ಕಥೆಯನ್ನೇ ತಿರುಚಿದೆ ಎನ್ನುವ ವಾದ-ವಿವಾದಗಳ ಮಧ್ಯೆಯೇ ಇದೀಗ ಆದಿಪುರುಷ್ ಸಿನಿಮಾಗೆ ಟಕ್ಕರ್ ಕೊಡುವ ಹಾಗೆ ಎವರ್‌ಗ್ರೀನ್ ರಾಮಾಯಣ ದೂರದರ್ಶನದಲ್ಲಿ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಜುಲೈ 3ರಿಂದ ಪೈರಾಣಿಕ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಆದಿಪುರುಷ್ ರಿಲೀಸ್ ಆದಾಗಿಂದನೂ ರಮಾನಂದ್ ಸಾಗರ್ ಅವರ ರಾಮಾಯಣ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜನರು ರಾಮಾಯಣ ಧಾರಾವಾಹಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಆದಿಪುರುಷ್ ಸಿನಿಮಾವನ್ನು ತರಾಟೆ ತೆಗೆದುಕೊಂಡಿದ್ದರು.

ರಾಮ ಹಾಗೂ ಸೀತೆ ಹೇಗಿರಬೇಕೆಂದು ರಾಮಾಯಣ ನೋಡಿ ಕಲಿಯಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ನಿರ್ದೇಶಕ ಓಂ ರಾವುತ್ ರಾಮಾಯಣ ನೋಡಿ ಕಲಿಯಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದರು. ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕೆಲವು ಕಲಾವಿದರೂ ಕೂಡ ಆದಿಪುರುಷ್ ಬಗ್ಗೆ ಬೇಸರ ಹೊರಹಾಕಿದ್ದರು.

ಆದಿಪುರುಷ್ ವಿವಾದದ ಬೆನ್ನಲ್ಲೇ ರಾಮಾಯಣ ಮುಂದಿನ ಸೋಮವಾರದಿಂದಲೇ (ಜುಲೈ 3) ಮತ್ತೆ 80ರ ದಶಕದ ಸೂಪರ್ ಹಿಟ್ ಪೌರಾಣಿಕ ಟಿವಿ ಶೋ ಮೂಡಿ ಬರಲಿದೆ. ‘ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ‘ ಎಂದು ಈಗಾಗಲೇ ಪ್ರೋಮೊ ರಿಲೀಸ್ ಮಾಡಲಾಗಿದೆ. ಅಂದಹಾಗೆ ಶೆಮರೂ ಟಿವಿ (Shemaroo TV) ವಾಹಿನಿಯಲ್ಲಿ ಹಿಂದಿ ಭಾಷೆಯಲ್ಲಿ ರಾಮಾಯಣ ಮರುಪ್ರಸಾರವಾಗಲಿದೆ.
ಕನ್ಯೆ ಸಿಗಲಿಲ್ಲ ಅಂತ ಮನನೊಂದು ಸಾವಿಗೆ ಶರಣಾದ ಉತ್ತರ ಕನ್ನಡದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
