ನವದೆಹಲಿ:‘ಇಂದು ನನಗೆ ತುಂಬಾ ಖುಷಿಯಾಗಿದೆ. ಈ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ಸೇವೆ ಸದಾ ಎಲ್ಲರಿಗೂ ಅಗತ್ಯವಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಟ್ವೀಟ್​ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.ಇವರು ಈ ರೀತಿ ಖುಷಿಯಲ್ಲಿ ಇರಲು ಕಾರಣ ದೆಹಲಿಯ ಪತ್ರಕರ್ತರ ಕರೊನಾ ಪರೀಕ್ಷೆಯ ಫಲಿತಾಂಶ. ಸದಾ ಕರೊನಾ ಸೋಂಕಿತರಿಗೆ ಸಂಬಂಧಿಸಿದ ಸುದ್ದಿಗಳನ್ನು ನೀಡುವಲ್ಲಿ ಎಲ್ಲೆಡೆ ಓಡಾಡುತ್ತಿರುವ ಕೆಲ ವರದಿಗಾರರಿಗೆ ಕರೊನಾ ಸೋಂಕು ತಗುಲಿದ್ದ ಬಗ್ಗೆ ಆತಂಕಗೊಂಡಿದ್ದ ಮುಖ್ಯಮಂತ್ರಿಗಳು, ದೆಹಲಿಯ ಎಲ್ಲಾ ಪತ್ರಕರ್ತರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಮುಂಬೈನಲ್ಲಿ 53 ಮಂದಿ ಪತ್ರಕರ್ತರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ದೆಹಲಿಯ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರನ್ನುಪರೀಕ್ಷೆಗೆ ಒಳಪಡಿಸಲಾಗಿತ್ತು.529 ಪತ್ರಕರ್ತರ ಪೈಕಿ ಕೇವಲ ಮೂವರಿಗೆ ಸೋಂಕು ದೃಢಪಟ್ಟಿದೆ. ಅನೇಕ ಮಂದಿಯಲ್ಲಿ ಸೋಂಕು ಇರಬಹುದು ಎಂಬ ಸುದ್ದಿ ಎಲ್ಲೆಡೆ ಕೇಳಿಬಂದದ್ದರಿಂದ ಈ ಫಲಿತಾಂಶ ತಮಗೆ ತೃಪ್ತಿ ನೀಡಿದೆ. ಮಾಧ್ಯಮದವರ ಸೇವೆ ಸದಾ ಎಲ್ಲರಿಗೂ ಲಭ್ಯವಾಗಬೇಕು, ಅದರಲ್ಲಿಯೂ ಕರೊನಾ ವೈರಸ್​ನಂಥ ವಿಷಮ ಸ್ಥಿತಿಯಲ್ಲಿ, ಮಾಧ್ಯಮದವರ ಪಾತ್ರ ಬಹುಮುಖ್ಯವಾಗಿದೆ. ಅವರಿಗೆ ನನ್ನ ಶುಭಾಶಯಗಳು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕೇಜ್ರಿವಾಲ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.ಕರ್ನಾಟಕದಲ್ಲಿಯೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಕರೊನಾ ಪರೀಕ್ಷೆಗೆ ಒಳಪಡಿಸುವಂತೆ ಕರ್ನಾಟಕ ಸರ್ಕಾರ ಸೂಚಿಸಿದ್ದು, ಕೆಲವು ಮಾಧ್ಯಮ ಸಂಸ್ಥೆಗಳು ಈಗಾಗಲೇ ಪರೀಕ್ಷೆ ನಡೆಸಿವೆ.(ಏಜನ್ಸೀಸ್​)
Am so happy to share only 3 out of 529 media persons tested have been detected positive. My best wishes to all of you. Your work is very important esp during a pandemic. Those who have been detected positive, I am praying for your speedy recovery
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fifteen − 14 =
Remember me
