ಚಂಡೀಗಢ:ರಾಷ್ಟ್ರದಲ್ಲಿ ಮಾರಕ ಕೊರೊನಾ ವೈರಸ್​ ಸೋಂಕು ಸ್ಫೋಟಗೊಂಡ ಬೆನ್ನಲ್ಲೇ ಹರಿಯಾಣದ ಕಾಂಗ್ರೆಸ್​ ಶಾಸಕರು ವಿಧಾನಸಭೆಯಲ್ಲಿ ಚೀನಾ ತಯಾರಿತ ಮೊಬೈಲ್​ ಟ್ಯಾಬ್ಲೆಟ್ಸ್​ ವಿರುದ್ಧ ಧ್ವನಿ ಎತ್ತಿದ್ದಾರೆ.
ಹರಿಯಾಣದ ಬಜೆಟ್​ ಅಧಿವೇಶನಕ್ಕಾಗಿ ವಿತರಿಸಲಾಗಿರುವ ಮೊಬೈಲ್​ ಟ್ಯಾಬ್ಲೆಟ್ಸ್​ಗಳ ವಿರುದ್ಧ ಸದನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ವೈರಸ್​ ಮೊದಲು​ ಸ್ಫೋಟಗೊಂಡ ಚೀನಾದ ಹುಬೇ ಪ್ರಾಂತ್ಯದ ವುಹಾನ್​ನಿಂದ ಮೊಬೈಲ್​ ಟ್ಯಾಬ್ಲೆಟ್ಸ್​ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಅವುಗಳಿಂದ ನಮಗೆ ಸಮಾಧಾನವಿಲ್ಲ ಎಂದಿದ್ದಾರೆ.
ಕಾಂಗ್ರೆಸ್​ ಶಾಸಕರಾದ ಭೂಪೇಂದ್ರ ಸಿಂಗ್​ ಹೂಡ, ಗೀತಾ ಭಕ್ಕುಲ, ವರುಣ್​ ಮುಲಾನಾ, ಚಿರಂಜೀವ್​ ರಾವ್​, ಅಫ್ತಾಬ್​ ಅಹ್ಮದ್​ ಹಾಗೂ ರಾವ್​ ದನ್​ ಸಿಂಗ್​ ಸೇರಿದಂತೆ ಅನೇಕ ನಾಯಕರು ಸದನದಲ್ಲಿ ಚೈನೀಸ್​ ಟ್ಯಾಬ್ಲೆಟ್​​ಗಳ ವಿರುದ್ಧ ಕಿಡಿಕಾರಿದರು.
ಕೊರೊನಾ ವೈರಸ್​ ಚೀನಾ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರಿದ್ದು, ಅಲ್ಲಿನ ವಸ್ತುಗಳು ಭಾರಿ ಅಗ್ಗದಲ್ಲಿ ಸಿಗುತ್ತಿರುವುದರಿಂದ ಟ್ಯಾಬ್ಲೆಟ್​ಗಳನ್ನು ಆಮದು ಮಾಡಿಕೊಂಡಂತೆ ಕಾಣುತ್ತದೆ ಎಂದು ಕಾಂಗ್ರೆಸ್​ ಶಾಸಕರು ಹೇಳಿದರು. ಅಲ್ಲದೆ, ಆರೋಗ್ಯ ಸಚಿವ ಅನಿಲ್​ ವಿಜ್​ ಕಡೆ ತಿರುಗಿ ಟ್ಯಾಬ್ಲೆಟ್​ಗಳ ಸುರಕ್ಷತೆ ಬಗ್ಗೆ ಭರವಸೆ ನೀಡುವಂತೆ ಒತ್ತಾಯಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − nine =
Remember me
