ನವದೆಹಲಿ:ಕೆಲ ದಿನಗಳ ಹಿಂದೆ ತಮಿಳುನಾಡಿನ ರಾಜ್ಯ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ನಿರ್ಮಲ್ ಕುಮಾರ್ ಎಐಎಡಿಎಂಕೆ ಸೇರಿದ್ದು, ಅವರನ್ನು ಬೆಂಬಲಿಸಿ ಬುಧವಾರದಂದು 13 ಮಂದಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಪಕ್ಷದ ಮುಖಂಡರಲ್ಲಿ ಅಸಮಾಧಾನ ಹೆಚ್ಚುತ್ತಿರುವ ಜತೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿಯಲ್ಲಿ ಬಿರುಕು ಹೆಚ್ಚಿರುವುದೂ ಸ್ಪಷ್ಟವಾಗಿದೆ.
ಎಐಎಡಿಎಂಕೆ ನಾಯಕ, ಮಾಜಿ ಸಿಎಂ ಪಳನಿಸ್ವಾಮಿ ಸಮ್ಮಿಶ್ರ ಧರ್ಮ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಅವರ ಪೋಸ್ಟರ್​ಗೆ ಬೆಂಕಿ ಹಚ್ಚಿರುವುದು ಕೂಡ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಬಿಜೆಪಿ ನಾಯಕ ಅಣ್ಣಾಮಲೈ ಡಿಎಂಕೆ ಸಚಿವರೊಬ್ಬರೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಕುಮಾರ್ ಬಿಜೆಪಿಯಿಂದ ದೂರವಾಗಿದ್ದಾರೆ. 2019ರ ಲೋಕಸಭಾ ಚುನಾವಣೆ ಬಳಿಕ ಎಐಎಡಿಎಂಕೆ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಮೂಲಕ ಸ್ಪರ್ಧಿಸಿ ಸೋತಿದೆ. ಎಐಎಡಿಎಂಕೆ ಮೈತ್ರಿಕೂಟ ಇತ್ತೀಚಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ-ಎಐಎಡಿಎಂಕೆ ಒಟ್ಟಾಗಿ ಪ್ರಚಾರ ನಡೆಸಲಿಲ್ಲ. ಮೈತ್ರಿಕೂಟದ ಸೋಲಿಗೆ ಬಿಜೆಪಿ ಕಾರಣ ಎನ್ನುವುದು ಎಐಎಡಿಎಂಕೆ ಆರೋಪ. ಕಳೆದ ವರ್ಷ ನವೆಂಬರ್​ನಲ್ಲಿ ಕೇಂದ್ರ ಗೃಹ ಸಚಿವ ತಮಿಳುನಾಡಿಗೆ ಭೇಟಿ ನೀಡಿದ್ದಾಗ, ಗೃಹ ಸಚಿವರ ಖಾಸಗಿ ಭೇಟಿ ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ಪಳನಿಸ್ವಾಮಿ ಹೇಳಿದ್ದರು. ಆಗಲೇ ಎರಡೂ ಪಕ್ಷಗಳ ಮಧ್ಯೆ ಸಂಬಂಧ ಸರಿಯಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು.
ಬಿರುಕಿಗೆ ಕಾರಣವೇನು?:ಬಿಜೆಪಿ ನಾಯಕರನ್ನು ತಮ್ಮಡೆಗೆ ಸೆಳೆದುಕೊಳ್ಳುತ್ತಿರುವ ಎಡಪ್ಪಾಡಿ ಪಳನಿಸ್ವಾಮಿ ತಂತ್ರಗಾರಿಕೆ ಹಿಂದಿನ ಪ್ರಮುಖ ಕಾರಣವೆಂದರೆ ತಾನು ಬಿಜೆಪಿಯ ಸಹಾಯ ಪಡೆದು ರಾಜಕಾರಣ ಮಾಡುತ್ತಿಲ್ಲ ಎಂಬ ರಾಜಕೀಯ ನಿರೂಪಣೆಯನ್ನು ಗಟ್ಟಿಗೊಸುವುದು. ಆಡಳಿತಾರೂಢ ಡಿಎಂಕೆ ರಾಜ್ಯದಲ್ಲಿ ತನ್ನ ದಕ್ಷ ಆಡಳಿತ ಮತ್ತು ಬಿಜೆಪಿ ವಿರೋಧಿ ನಿರೂಪಣೆಯನ್ನು ಜನರ ಮುಂದಿಡುತ್ತಿದ್ದರೆ, ರಾಜ್ಯ ಬಿಜೆಪಿ ಘಟಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಮತ್ತು ಮಹಿಳಾ ಕಲ್ಯಾಣ ನೀತಿಗಳನ್ನು ಜನಾಕರ್ಷಣೆಗೆ ಬಳಸಿಕೊಳ್ಳುತ್ತಿದೆ.
ಇದನ್ನೂ ಓದಿ:ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…
ಇವೆರಡರ ಮಧ್ಯೆ ತಾನು ಕಳೆದುಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಬಿಜೆಪಿ ನಾಯಕರನ್ನೇ ಪಳನಿಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆ. ಎಐಎಡಿಎಂಕೆ ವರ್ಚಸ್ವೀ ನಾಯಕಿ ಜೆ ಜಯಲಲಿತಾ ಬದುಕಿದ್ದಾಗ ಹೊಂದಿದ್ದ ವಿಶಿಷ್ಟ ಗುರುತನ್ನು ಈಗ ಹೊಂದಿಲ್ಲ. 5-10 ಪ್ರತಿಶತದಷ್ಟು ಹಿಂದು ಮತಗಳ ಬೆಂಬಲ ಹೊಂದಿರುತ್ತಿದ್ದ ಎಐಎಡಿಎಂಕೆ, 2016ರಲ್ಲಿ ಜಯಾ ನಿಧನದ ನಂತರ ರಾಜ್ಯದಲ್ಲಿ ರಾಷ್ಟ್ರೀಯ ಧ್ವನಿಯಾಗಿ ಉಳಿದುಕೊಂಡಿಲ್ಲ. ಮೇಲಾಗಿ, ಅಲ್ಪಸಂಖ್ಯಾತರ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ. 2017ರಲ್ಲಿ ಓ. ಪನೀರ್ ಸೆಲ್ವಂಗೆ ಅಧಿಕಾರ ಸಿಕ್ಕ ಮೇಲಂತೂ ಪಕ್ಷದಲ್ಲಿನ ಒಡಕು ದ್ವಿಗುಣಗೊಂಡಿತ್ತಲ್ಲದೆ, ಆ ಹಾನಿಯಿಂದ ಪಕ್ಷ ಇನ್ನೂ ಚೇತರಿಸಿಕೊಂಡಿಲ್ಲ.
ಅಣ್ಣಾಮಲೈ ಸಮರ್ಥನೆಬಿಜೆಪಿ ಜತೆಗಿನ ಸಂಬಂಧದಿಂದ ದೂರ ಸರಿಯುವ ಎಐಎಡಿಎಂಕೆ ನಡೆಯಿಂದ ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ ಎನ್ನುವುದು ಸ್ಪಷ್ಟ. ನಾವು ತಮಿಳುನಾಡಿನಲ್ಲಿ ಬೆಳೆಯುತ್ತಿದ್ದೇವೆ ಎನ್ನುವುದರ ಪ್ರತೀಕ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ, ಬಿಜೆಪಿಯು ಪ್ರಸ್ತುತ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿರುವ ಮಾಜಿ ಸಚಿವ ನೈನಾರ್ ನಾಗೇಂದ್ರನ್ ಸೇರಿದಂತೆ ಹಿರಿಯ ಎಐಎಡಿಎಂಕೆ ನಾಯಕರನ್ನು ತನ್ನತ್ತ ಸೆಳೆದುಕೊಂಡಿತ್ತು. 234 ಸದಸ್ಯ ಬಲದ ಸದನದಲ್ಲಿ ಕೇವಲ ನಾಲ್ವರು ಶಾಸಕರನ್ನು ಹೊಂದಿರುವ ಬಿಜೆಪಿ, ಇ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ನಡುವಿನ ತಿಕ್ಕಾಟ ತಾರಕಕ್ಕೇರಿದಾಗ ತನ್ನನ್ನೇ ಪ್ರಮುಖ ಪ್ರತಿಪಕ್ಷವಾಗಿ ಬಿಂಬಿಸಿಕೊಂಡಿತ್ತು. ಅಂದಿನಿಂದಲೇ ಬಿರುಕು ಆರಂಭಗೊಂಡಿತ್ತು.
ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
