ನವದೆಹಲಿ:ಸದ್ಯ ಭಾರತದೊಂದಿಗೆ ನೆರೆ ರಾಷ್ಟ್ರಗಳದ್ದು ಗಡಿ ತಂಟೆ. ಅತ್ತ ಲಡಾಖ್​ನಲ್ಲಿ ಚೀನಾ ಸೇನೆಯನ್ನೇ ಜಮಾಸಿದ್ದರೆ, ಇತ್ತ ನೇಪಾಳ ಸಂಸತ್ತಿನಲ್ಲಿ ಭಾರತದ ಭೂಪ್ರದೇಶವನ್ನು ಒಳಗೊಂಡ ನಕ್ಷೆಯನ್ನು ಮಂಡಿಸಲಾಗಿದೆ.
ಈ ಗಡಿ ವಿವಾದಗಳ ನಡುವೆಯೇ, ನೇಪಾಳ ಹಾಗೂ ಭಾರತದ ನಡುವಿನ ನೋ ಮ್ಯಾನ್ಸ್​ ಲ್ಯಾಂಡ್​ ಅಥವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ವಿಶೇಷವೆಂದರೆ, ಈ ಮಗುವಿಗೆ ದಂಪತಿ ‘ಬಾರ್ಡರ್​’ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ;ಮೋದಿಗೆ ಕೈರುಚಿ ಬಡಿಸೋದು ಮಿಸ್​ ಆಯ್ತಲ್ಲಾ ಎಂದು ಪರಿತಪಿಸಿದ ಪ್ರಧಾನಿ
ದಂಪತಿ ಮೂಲತಃ ಉತ್ತರಪ್ರದೇಶದ ಮಹಾರಾಜಾಗಂಜ್​ ಜಿಲ್ಲೆಯವರು. ನೇಪಾಳದ ನವಾಲ್​ಪಾರಸಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕೆಂದು ತೆರಳಿದ್ದರು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಕೆಲಸ ಸ್ಥಗಿತವಾಗಿತ್ತು. ಈ ಕಾರಣದಿಂದಾಗಿ ತಮ್ಮೂರಿಗೆ ತೆರಳಲು ಗಡಿ ಭಾಗಕ್ಕೆ ಆಗಮಿಸಿದ್ದರು.
ಪರಿಶೀಲನೆಗಾಗಿ ಗಡಿಯಲ್ಲಿ ನಿಂತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿ ಲಾಲಾರಾಮ್​ ಹಾಗೂ ಸರದಿಯಲ್ಲಿ ನಿಂತಿದ್ದ ಮತ್ತೊಬ್ಬ ಮಹಿಳೆ ಆಕೆಗೆ ಹೆರಿಗೆ ಮಾಡಿಸಿದ್ದಾರೆ. ಬಳಿಕ ಆಕೆಯನ್ನು ನೇಪಾಳದ ನೌತಾನ್ವಾ ಸಮುದಾಯಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ;ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ಹಣವಿಲ್ಲ; 5,000 ಕೋಟಿ ರೂ. ನೀಡಿ ಎಂದು ಕೇಂದ್ರದ ಮೊರೆ ಹೋದ ಡಿಸಿಎಂ
ತಾಯಿ ಜಮ್​ತಾರಾ ಹಾಗೂ ಗಂಡು ಮಗು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದಲ್ಲದೇ, ಈ ದಂಪತಿಗೆ ಇನ್ನಿಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರ ಇದ್ದಾನೆ.
ಕರೊನಾ ನಿಗ್ರಹ ಲಸಿಕೆ ಶೇ.99 ಯಶಸ್ವಿ; ಚೀನಿ ಕಂಪನಿ ವಿಶ್ವಾಸ, ಬೀಜಿಂಗ್​ ಹೊರವಲಯದಲ್ಲಿ​ ಬೃಹತ್ ಕಾರ್ಖಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
