ನವದೆಹಲಿ: ಕರೊನಾ ಬಾಧಿತವಲ್ಲದ ಹಾಗೂ ಸುರಕ್ಷಿತ ಪ್ರದೇಶಗಳಲ್ಲಿ ಲಾಕ್​ಡೌನ್ ನಿರ್ಬಂಧ ಸಡಿಲಿಕೆ ಬಗ್ಗೆ ಕೇಂದ್ರ ಹಾಗೂ ಕೇರಳ ಸರ್ಕಾರದ ನಡುವೆ ಜಟಾಪಟಿ ನಡೆದಿದೆ. ಕೇರಳದಲ್ಲಿ ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆಯಾದರೂ ಪಿಣರಾಯಿ ವಿಜಯನ್ ಸರ್ಕಾರ ಲಾಕ್​ಡೌನ್ ಆದೇಶ ಮೀರಿ ನಿರ್ಬಂಧಗಳನ್ನು ಅಗತ್ಯಕ್ಕಿಂತ ಹೆಚ್ಚು ಸಡಿಲಗೊಳಿಸಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ಕೇರಳ ಸರ್ಕಾರ ರಾಜ್ಯದಲ್ಲಿ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ನೀಡಿದ್ದು, ರೆಸ್ಟೋರೆಂಟ್​ಗಳು, ಪುಸ್ತಕ ಮಳಿಗೆಗಳು, ಕ್ಷೌರಿಕರ ಅಂಗಡಿ ಸೇರಿ ಇನ್ನೂ ಹಲವು ಸೇವೆಗಳಿಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ, ಕರೊನಾ ಪಸರಿಸುವಿಕೆ ತಡೆಗಟ್ಟುವ ಸಲುವಾಗಿ ಕೇಂದ್ರ ವಿಧಿಸಿರುವ ಲಾಕ್​ಡೌನ್ ಮಾರ್ಗಸೂಚಿಗಳನ್ನು ಯಾವುದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ದುರ್ಬಲಗೊಳಿಸಲು ಸಾಧ್ಯವಿಲ್ಲ ಹಾಗೂ ರಾಜ್ಯಗಳು ತಮ್ಮದೇ ಆದ ನಿಯಮಗಳ ಪ್ರಕಾರ ಹೆಚ್ಚುವರಿ ಚಟುವಟಿಕೆಗಳನ್ನು ಅನುಮತಿಸುವುದಕ್ಕೆ ಬರುವುದಿಲ್ಲ. ಆದರೆ ರಾಜ್ಯಗಳು ಬಯಸಿದರೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಕರೊನಾ ಬಾಧಿತವಾಗಿಲ್ಲದ ಹಾಗೂ ಹಸಿರು ವಲಯಗಳಲ್ಲಿ ಗುರುತಿಸಲ್ಪಟ್ಟ ಸ್ಥಳಗಳಲ್ಲಿ ಕೇಂದ್ರ ಸರ್ಕಾರ ಏ.20ರಿಂದ ಅನುಮತಿಸಿರುವ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ತಿಳಿಸಿದ್ದಾರೆ.
ಕೇರಳ ಸರ್ಕಾರಕ್ಕೇ ಪ್ರತ್ಯೇಕ ಪತ್ರ ಬರೆದು ನಿಯಮ ಸಡಿಲಿಸುವ ಬಗೆಗಿನ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಜಯ್ ಭಲ್ಲಾ, ಇದು ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನು ದುರ್ಬಲಗೊಳಿಸುವ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಹೊರಡಿಸಲಾದ ಏಪ್ರಿಲ್15 ರ ಆದೇಶದ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಕೇರಳದಲ್ಲಿ ಸೋಮವಾರದಿಂದ ಖಾಸಗಿ ವಾಹನಗಳಿಗೆ ಸಮ-ಬೆಸ ಸಂಖ್ಯೆ ಆಧಾರದ ಮೇಲೆ ರಸ್ತೆಗಿಳಿಯಲು ಅವಕಾಶ ನೀಡಲಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಇಬ್ಬರು ಪ್ರಯಾಣಿಸಬಹುದು ಎಂದು ತಿಳಿಸಲಾಗಿದೆ. ಓರ್ವ ಪ್ರಯಾಣಿಕ ದ್ವಿಚಕ್ರವಾಹನದಲ್ಲಿ ಸಂಚರಿಸಬಹುದು. ಅಲ್ಲದೇ ಕೆಲ ಪಟ್ಟಣಗಳಲ್ಲಿ ಬಸ್ ಸೇವೆಗೂ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ನಿಲುವು ಬದಲಿಸಿದ ಕೇರಳ
ನಿರ್ಬಂಧ ಸಡಿಲಿಕೆ ಬಗ್ಗೆ ಕೇಂದ್ರ ಸರ್ಕಾರ ಗರಂ ಆಗಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ನಿಲುವು ಬದಲಿಸಿದೆ. ಕೇಂದ್ರ ಸರ್ಕಾರದ ಮುಂದಿನ ಆದೇಶ ಬರುವವರೆಗೆ ನಿರ್ಬಂಧ ಮುಂದುವರಿಯಲಿದೆ. ಹೋಟೆಲ್​ಗಳಲ್ಲಿ ಆಹಾರ ಪದಾರ್ಥ ಪಾರ್ಸೆಲ್​ಗೆ ಮಾತ್ರ ಅನುಮತಿ ನೀಡಲಾಗಿದೆ.
ನಾಲ್ಕು ವಲಯಗಳಾಗಿ ವಿಂಗಡನೆ
ಕರೊನಾ ಪೀಡಿತ ಹಾಗೂ ಪೀಡಿತವಲ್ಲದ ಜಿಲ್ಲೆಗಳನ್ನು ಕೇರಳ ಸರ್ಕಾರ ಕೆಂಪು, ಹಸಿರು, ಕೇಸರಿ-ಎ ಹಾಗೂ ಕೇಸರಿ-ಬಿ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ಕೆಂಪು ವಲಯದಲ್ಲಿ ಕಾಸರಗೋಡು, ಕಣ್ಣೂರು, ಕೊಂಜಿಕೋಡ್ ಹಾಗೂ ಮಲಪು್ಪರಂ ಜಿಲ್ಲೆಗಳಿದ್ದು, ಇಲ್ಲಿ ಮೇ 3ರವರೆಗೂ ಯಾವುದೇ ನಿರ್ಬಂಧ ಸಡಿಲಿಕೆ ಮಾಡಲಾಗುವುದಿಲ್ಲ. ಇವುಗಳ ಜತೆಗೆ ರಾಜ್ಯಾದ್ಯಂತ ಗುರುತಿಸಲಾಗಿರುವ 88 ಹಾಟ್​ಸ್ಟಾಟ್​ಗಳೂ ಸಹ ಕೆಂಪು ವಲಯದಲ್ಲಿರುತ್ತವೆ. ಕೊಟ್ಟಾಯಂ ಮತ್ತು ಇಡುಕ್ಕಿ ಹಸಿರು ವಲಯದಲ್ಲಿದ್ದು, ಇಲ್ಲಿನ ನಿರ್ಬಂಧಗಳನ್ನು ಕೊಂಚ ಸಡಿಲಿಸಲಾಗುತ್ತದೆ. ಕೇಸರಿ-ಎ ವಲಯದಲ್ಲಿ ಪಥನಮತ್ತಿಟ್ಟ, ಎರ್ನಾಕುಲಂ ಮತ್ತು ಕೊಲ್ಲಂ, ಕೇಸರಿ-ಬಿ ವಲಯದಲ್ಲಿ ಆಲಪ್ಪುಳ, ತಿರುವನಂತಪುರಂ, ಪಾಲಕ್ಕಾಡ್, ತ್ರಿಶೂರ್ ಮತ್ತು ವಯನಾಡು ಜಿಲ್ಲೆಗಳಿವೆ. ಸೋಮವಾರದಿಂದ ಹಸಿರು ಮತ್ತು ಕೇಸರಿ-ಎ ವಲಯದಲ್ಲಿ 7 ಗಂಟೆವರೆಗೆ ಹೋಟೆಲ್​ಗಳು ತೆರೆದಿರಲಿವೆ.
ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
