ನವದೆಹಲಿ:ಮಹದೇವ ಬೆಟ್ಟಿಂಗ್​ ಆ್ಯಪ್​ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ED) ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ದುಬೈನಲ್ಲಿ ಬಂಧಿಸಿದೆ.
ಬಂಧಿತನನ್ನು ಗುಜರಾತ್​ ಮೂಲದ ಅಮಿತ್ ಮಜಿಥಿಯಾ ಎಂದು ಗುರತಿಸಲಾಗಿದೆ. ಬಂಧಿತ ಅಮಿತ್ ಮಜಿಥಿಯಾ ಸೌರಭ್ ಚಂದ್ರಕರ್​ನ ನಿಕಟ ಸಹವರ್ತಿ ಎಂದು ಹೇಳಲಾಗಿದೆ. ಮಹದೇವ್​ ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ದುಬೈನಿಂದ ಭಾರತಕ್ಕೆ ಗಡಿಪಾರು ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ:ವಿಶ್ವದ ಅತ್ಯಂತ ಹಿರಿಯ ನಾಯಿ ಬೋಬಿ ಇನ್ನಿಲ್ಲ
ಮಹದೇವ್​ ಬೆಟ್ಟಿಂಗ್​ ಆ್ಯಪ್​ ಹಗರಣದಲ್ಲಿ ನಡೆದಿದ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಈತ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ. ಇದಲ್ಲದೆ ಈತನ ವಿರುದ್ಧ ಭಾರತದ ವಿವಿಧ ರಾಜ್ಯಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈತ ದುಬೈನಲ್ಲಿ ತಲೆಮಾರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಅಮಿತ್​ ಮಜಿಥಿಯಾ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಒಡೆತನದ ಹೋಟೆಲ್​ ಉದ್ಯಮದ ಪಾಲುದಾರರಾಗಿದ್ದಾರೆ ಎಂದು ವರದಿಯಾಗಿದೆ. ಕ್ರಿಪ್ಟೋ ಮತ್ತು ಡಿಜಿಟಲ್ ಕರೆನ್ಸಿ ಮೂಲಕ ವಹಿವಾಟು ನಡೆಸುತ್ತಿದ್ದರು. ಇದಲ್ಲದೆ ಮಜಿಥಿಯಾ CBTF ಹಾಗೂ ಶಂಕರ ಸ್ಪೋರ್ಟ್ಸ್​ ನ್ಯೂಸ್​ ಎಂಬ ಬೆಟ್ಟಿಂಗ್​ ಆ್ಯಪ್​ ಸಹ ನಡೆಸುತ್ತಿದ್ದ ಎಂದು ವರದಿಯಾಗಿದೆ. ಇದಕ್ಕೆ ಬಾಲಿವುಡ್​ ಭಾರತ ಕ್ರಿಕೆಟ್​ ತಂಡದ ಆಟಗಾರರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
