ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆರೋಗ್ಯ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ಸುದ್ದಿ ಜತೆಗೆ ಅವರು ಕಿವಿಗೆ ಹ್ಯಾಂಡ್ಸ್​ಫ್ರೀ ಹೆಡ್ ಫೋನ್ ಹಾಕಿರುವ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡಿತ್ತು. ಈ ಸುದ್ದಿ ಅಮಿತ್ ಷಾ ಅವರಿಗೂ ತಲುಪಿದ ಕಾರಣ ಅವರು ಕೂಡಲೇ ಸಾಮಾಜಿಕ ಜಾಲತಾಣದಲ್ಲೇ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​
ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡಿದ ಕಾರಣ ಸ್ವತಃ ಷಾ ಅವರೇ ಪ್ರತಿಕ್ರಿಯಿಸಿದ್ದಾರೆ. ಆಧಾರ ರಹಿತಿ ಸುಳ್ಳು ಸುದ್ದಿಗಳನ್ನು ಹರಡಿದ ಕಾರಣ ಅನೇಕರು ನುಡಿನಮನವನ್ನೂ ಸಲ್ಲಿಸಿದ್ದು ಕಂಡು ಅಮಿತ್ ಷಾ ಅವರು ಟ್ವೀಟ್ ಮಾಡಿದ್ದು ಇಷ್ಟು..
ಹಿಂದಿ ಭಾಷೆಯಲ್ಲಿರುವ ಟ್ವೀಟ್​ನಲ್ಲಿ ಅವರು, ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ. ನಾನು ಯಾವುದೇ ರೋಗದಿಂದ ಬಳಲುತ್ತಿಲ್ಲ. ಇಡೀ ದೇಶ ಪ್ರಸ್ತುತ ಜಾಗತಿಕ ಸೋಂಕಾದ ಕರೊನಾ ವಿರುದ್ಧ ಹೋರಾಟ ನಡೆಸಿದೆ. ಗೃಹ ಸಚಿವ ಎಂಬ ನೆಲೆಯಲ್ಲಿ ನಾನೂ ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಈ ಎಲ್ಲ ಸುಳ್ಳು ಸುದ್ದಿಗಳ ಬಗ್ಗೆ ಗಮನಹರಿಸಲಾಗಿಲ್ಲ. ನಿನ್ನೆ ರಾತ್ರಿ ಈ ವಿಚಾರ ನನ್ನ ಗಮನಕ್ಕೆ ಬಂತು. ಕೆಲವರು ತಮ್ಮ ಕಲ್ಪನೆಗಳನ್ನು, ಊಹೆಗಳನ್ನು ಸುದ್ದಿಯಾಗಿ ಹಬ್ಬಿಸಿ ಖುಷಿ ಪಡುತ್ತಿರಬೇಕು ಎಂದು ನಾನು ಭಾವಿಸಿದೆ. ಹಾಗಾಗಿಯೇ ನಾನು ಸ್ಪಷ್ಟೀಕರಣ ನೀಡಲು ಹೋಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!
ಅಲ್ಲದೆ, ವದಂತಿ ಹರಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ವದಂತಿಯೇ ನನ್ನ ಆರೋಗ್ಯವನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲದು. ನಾನು ನನ್ನ ಕೆಲಸದ ಕಡೆಗೆ ಗಮನಹರಿಸುವುದಕ್ಕೆ ಅವಕಾಶ ಮಾಡಿಕೊಡಿ. ಇಂತಹ ವದಂತಿಗಳನ್ನು ಹರಡಬೇಡಿ. ನೀವೂ ನಿಮ್ಮ ಕೆಲಸ ಮಾಡಿ ಎಂದು ಅವರು ಟ್ವೀಟ್​ ನಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ, ಅಹಮದಾಬಾದ್​ನಲ್ಲಿ ಅಮಿತ್ ಷಾ ಅವರ ಆರೋಗ್ಯದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇರೆಗೆ ಫಿರೋಜ್ ಖಾನ್​, ಸರ್ಫರಾಜ್​, ಸಾಜ್ಜದ್ ಅಲಿ, ಶಿರಾಜ್ ಹುಸೇನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

मेरे स्वास्थ्य की चिंता करने वाले सभी लोगों को मेरा संदेश।pic.twitter.com/F72Xtoqmg9
— Amit Shah (@AmitShah)May 9, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
