ಬಂಕುರಾ:ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್​ ಷಾ ಅವರು ನಿನ್ನೆ ಚತುರ್ದಿಹಿ ಗ್ರಾಮದ ಬುಡಕಟ್ಟು ಜನಾಂಗದ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಬಾಳೆಲೆ ಊಟ ಮಾಡಿದರು.
ಅಮಿತ್​ ಷಾ ಅವರು ಬಿಜೆಪಿ ಕಾರ್ಯಕರ್ತ ಬಿಭೀಷಣ್ ಹನ್ಸ್​ಡಾ ಅವರ ಮನೆಯಲ್ಲಿ ನೆಲದ ಮೇಲೆ ಕುಳಿತು, ಬಂಗಾಳಿ ಖಾದ್ಯಗಳಾದ ಅನ್ನ, ರೊಟ್ಟಿ, ದಾಲ್​, ಪೋತೋಲ್​ ಭಾಜಾ(ಸೋರೆಕಾಯಿ ಫ್ರೈ), ಶುಕ್ತೋ, (ಬಂಗಾಳದ ಪ್ರಸಿದ್ಧ ತರಕಾರಿ ಖಾದ್ಯ), ಆಲೂ ಪೋಸ್ಟೊ (ಗಸಗಸೆ ಬೀಜದ ಪೇಸ್ಟ್​​ನಲ್ಲಿ ಬೇಯಿಸಿದ ಆಲೂ ಖಾದ್ಯ) ಹಾಗೂ ಪಾಪಡ್​ಗಳನ್ನು ಸವಿದಿದ್ದಾರೆ.ಇದರೊಂದಿಗೆ ರಸಗುಲ್ಲಾ, ಸಂಡೇಶ್​ ಮತ್ತು ‘ಮಿಶ್ತಿ ದೋಯಿಯಂತಹ ಸಿಹಿತಿಂಡಿಗಳನ್ನೂ ಅಮಿತ್​ ಷಾ ಅವರಿಗಾಗಿ ತಯಾರಿಸಲಾಗಿತ್ತು. ಆದರೆ ಅವರು ಅದನ್ನು ಸೇವಿಸಲಿಲ್ಲ.ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : 120 ವರ್ಷಗಳಲ್ಲೇ ಅತ್ಯಧಿಕ ಮತದಾನ ಪ್ರಮಾಣ
ಈ ವೇಳೆ ಅಮಿತ್​ ಷಾ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್​ ರಾಯ್​ ಮತ್ತು ಪಕ್ಷದ ರಾಜ್ಯದ ಮುಖ್ಯಸ್ಥ ದಿಲೀಪ್​ ಘೋಷ್​ ಇದ್ದರು.ಊಟದ ನಂತರ ಮನೆಯಲ್ಲಿದ್ದ ಹಗ್ಗದ ಮಂಚದ ಮೇಲೆ ಕುಳಿತ ಅಮಿತ್​ ಷಾ, ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದರು. ಇನ್ನು ಅಮಿತ್​ ಷಾ ಆ ಹಳ್ಳಿಗೆ ಬರುವಾಗ ಅಲ್ಲಿನ ಜನರು, ಡ್ರಮ್​ ಬಾರಿಸಿ, ಶಂಖ ಊದಿ ಮೆರವಣಿಗೆ ಮೂಲಕ ಅವರನ್ನು ಸ್ವಾಗತಿಸಿದ್ದರು.
ನನಗಂತೂ ತುಂಬ ಖುಷಿಯಾಗಿದೆ. ಅಮಿತ್​ ಷಾ ಅವರಿಗೆ ಔತಣಕೂಟ ಏರ್ಪಡಿಸಿದ್ದು ನನಗೆ ಸಂತೋಷ ತಂದಿದೆ. ಇದು ನನ್ನ ಜೀವನದಲ್ಲಿ ನೆನಪಿನಲ್ಲಿ ಉಳಿಯುವ ದಿನ ಎಂದು ಬಿಜೆಪಿ ಕಾರ್ಯಕರ್ತ ಬಿಭೀಷಣ್ ಹನ್ಸ್​ಡಾ ಹೇಳಿದ್ದಾರೆ. (ಏಜೆನ್ಸೀಸ್​)
ಅಫಿಡವಿಟ್​ನಲ್ಲಿ ಆಸ್ತಿ ವಿವರ ಮರೆಮಾಚಿ ಶಾಸಕತ್ವ ಕಳೆದುಕೊಂಡ ಮಾಜಿ ಕಾಂಗ್ರೆಸ್​ ನಾಯಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
