ನವದೆಹಲಿ:ದೆಹಲಿ- ಹರಿಯಾಣ ಗಡಿಯಲ್ಲಿರುವ ಛತ್ತರ್​ಪುರದ ರಾಧಾ ಸ್ವಾಮಿ ಸತ್ಸಂಗ ಬ್ಯಾಸ್​ನಲ್ಲಿರುವ ಜಗತ್ತಿನ ಅತಿದೊಡ್ಡ ಕೊವಿಡ್​-19 ಕೇರ್​ ಸೆಂಟರ್​ಗೆ ಇಂದು ಗೃಹ ಸಚಿವ ಅಮಿತ್​ ಷಾ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು.
10,000 ಕ್ಕೂ ಹೆಚ್ಚು ಬೆಡ್​ಗಳ ವ್ಯವಸ್ಥೆ ಇರುವ ಕೊವಿಡ್​-19 ಕೇರ್​ ಸೆಂಟರ್​ ಪರಿಶೀಲನೆಗೆ ಆಗಮಿಸುವಂತೆ ಅರವಿಂದ್​ ಕೇಜ್ರಿವಾಲ್​ ಅವರು ಅಮಿತ್​ ಷಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಅಷ್ಟೇ ಅಲ್ಲ ಈ ಸೆಂಟರ್​ಗೆ ಇಂಟೋ-ಟಿಬೆಟಿಯನ್​ ಬಾರ್ಡರ್ ಪೊಲಿಸರನ್ನು​​ ಮತ್ತು ಸೇನಾ ಆಸ್ಪತ್ರೆಯ ವೈದ್ಯರು, ದಾದಿಯರನ್ನು ನಿಯೋಜಿಸಿ ಎಂದು ಕೇಳಿಕೊಂಡಿದ್ದರು. ಅದನ್ನು ಕೇಂದ್ರ ಸರ್ಕಾರ ಈಡೇರಿಸಿದೆ.
ಈಗ ಇಲ್ಲಿ 2000ಕ್ಕೂ ಹೆಚ್ಚು ಇಂಡೋ-ಟಿಬೆಟಿಯನ್​ ಬಾರ್ಡರ್​ ಪೋಲಿಸ್​ ಸೇರಿ ಸಿಎಪಿಎಫ್​ ಸಿಬ್ಬಂದಿ, ವೈದ್ಯರು, ನರ್ಸ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಕೊವಿಡ್​-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಛತ್ತರ್​ಪುರದ ರಾಧಾ ಸ್ವಾಮಿ ಸತ್ಸಂಗ ಕೇಂದ್ರವನ್ನು ಕೊವಿಡ್-19 ಸೆಂಟರ್​ ಆಗಿ ಪರಿವರ್ತಿಸಲಾಗಿದೆ. (ಏಜೆನ್ಸೀಸ್)
ಕಾರಿನಲ್ಲಿ ಜೋಡಿಯ ಸೆಕ್ಸ್​; ವಿಡಿಯೋ ನೋಡಿದ ವಿಶ್ವಸಂಸ್ಥೆಗೆ ಶಾಕ್​…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
