ಭುವನೇಶ್ವರ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಟೀಕಿಸುವ ಮೂಲಕ ಪ್ರತಿಪಕ್ಷಗಳು ಸುಳ್ಳುಗಳನ್ನಾಡುತ್ತಿವೆ ಎಂದು ಗೃಹಸಚಿವ ಅಮಿತ್​ ಷಾ ಅವರು ದೂರಿದರು.
ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಶುಕ್ರವಾರ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಹೊಸ ಕಾಯ್ದೆಯಿಂದಾಗಿ ದೇಶಾದ್ಯಂತ ಮಾರಣಾಂತಿಕ ಪ್ರತಿಭಟನೆಗಳು ಪ್ರಚೋದನೆಗೊಂಡಿವೆ. ಆದರೆ, ಯಾರೊಬ್ಬರ ಪೌರತ್ವ ಕಸಿದುಕೊಳ್ಳುವ ಉದ್ದೇಶ ಈ ಕಾಯ್ದೆಯಲ್ಲಿಲ್ಲ ಎಂದು ಮರು ಸ್ಪಷ್ಟನೆ ನೀಡಿದರು.
ಬಿಎಸ್​ಪಿ(ಬಹುಜನ ಸಮಾಜ ಪಕ್ಷ), ಎಸ್​ಪಿ(ಸಮಾಜವಾದಿ ಪಕ್ಷ), ಕಮ್ಯೂನಿಸ್ಟ್​, ಕಾಂಗ್ರೆಸ್​ ಮತ್ತು ಮಮತಾ ದೀದಿ ಅವರು ಸಿಎಎ ವಿರುದ್ಧವಾಗಿ ನಿಂತಿದ್ದಾರೆ. ಅಲ್ಪಸಂಖ್ಯಾತರು ಪೌರತ್ವವನ್ನು ಕಳೆದುಕೊಳ್ಳುತ್ತಾರೆಂದು ಹೇಳುತ್ತಿದ್ದಾರೆ. ಅವರೇಕೆ ಸುಳ್ಳನ್ನಾಡುತ್ತಿದ್ದಾರೆ? ಸಿಎಎ ಪೌರತ್ವ ನೀಡುವ ಒಂದು ಕಾನೂನು, ಅದರರ್ಥ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಲ್ಲ ಎಂದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಿಎಎ ಅನ್ನು ಜಾರಿಗೆ ತಂದಿದೆ. ಅದರಲ್ಲೂ ಧಾರ್ಮಿಕವಾಗಿ ಹಿಂಸೆಗೊಳಗಾದವರಿಗೆ ಕಾಯ್ದೆ ನೆರವಾಗಲಿದೆ ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಆದರೆ, ಪ್ರತಿಪಕ್ಷಗಳು ಇದಕ್ಕೆ ವಿರುದ್ಧವಾಗಿವೆ. ಸಿಎಎ ಮತ್ತು ಎನ್​ಆರ್​ಸಿಯಿಂದ ದೇಶದ ಮುಸ್ಲಿಂ ಜನತೆಯನ್ನು ಕೇಂದ್ರ ಸರ್ಕಾರ ಗುರಿಯಾಗಿಸಿದೆ ಎಂದು ಆರೋಪಿಸಿವೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
