ನವದೆಹಲಿ:2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ರಚಿಸಿರುವ I.N.D.I.A ಮೈತ್ರಿಯಿಂದ ಆಮ್ ಆದ್ಮಿ ಪಕ್ಷ (ಎಎಪಿ) ಹಿಂದೆ ಸರಿಯಬಹುದೇ?. ಒಂದು ವೇಳೆ ಹಿಂದೆ ಸರಿದಿದ್ದೇ ಆದಲ್ಲಿ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ ಭವಿಷ್ಯ ನಿಜವಾಗಬಹುದು. ಏಕೆಂದರೆ ದೆಹಲಿಯ ಎಲ್ಲಾ ಲೋಕಸಭಾ ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಅಲ್ಕಾ ಲಾಂಬಾ ಹೇಳಿಕೆ ಕೊಟ್ಟ ನಂತರ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಎಎಪಿ ನಾಯಕರು ಮತ್ತು ವಕ್ತಾರರೂ ಮೈತ್ರಿ ತೊರೆಯುವ ಸುಳಿವು ನೀಡುತ್ತಿದ್ದಾರೆ.
ಅಲ್ಕಾ ಲಂಬಾ ಹೇಳಿದ್ದೇನು?ದೆಹಲಿಯ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಬುಧವಾರ ಹೇಳಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮತ್ತು ದೀಪಕ್ ಬಬಾರಿಯಾ ಅವರ ಸಮ್ಮುಖದಲ್ಲಿ ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಏಳು ತಿಂಗಳು ಉಳಿದಿದ್ದು, ಎಲ್ಲಾ ಏಳು ಸ್ಥಾನಗಳಿಗೆ ತಯಾರಿ ನಡೆಸುವಂತೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
#WATCH| Congress leader Alka Lamba says "In the three-hour long meeting, Rahul Gandhi, Kharge ji, KC Venugopal and Deepak Babaria ji were present. We have been asked to prepare for the upcoming Lok Sabha elections. It has been decided that we will contest on all 7 seats. Seven…pic.twitter.com/TKaHAIl2yW
— ANI (@ANI)August 16, 2023

I.N.D.I.A ಮೈತ್ರಿಕೂಟದಲ್ಲಿ ಯಾವುದೇ ಪ್ರಯೋಜನವಿಲ್ಲಆಮ್ ಆದ್ಮಿ ಪಕ್ಷದ ವಕ್ತಾರೆ ಪ್ರಿಯಾಂಕಾ ಕಕ್ಕರ್ ಅವರು ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ I.N.D.I.A ಮೈತ್ರಿಗೆ ಹೋಗುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಸಮಯ ವ್ಯರ್ಥ. ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಎಎಪಿಯ ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
#WATCH| On attending INDIA alliance meeting, AAP spokesperson Priyanka Kakkar says "…If they (Congress) don't want to form an alliance in Delhi, then it makes no sense to go for INDIA alliance, it is a waste of time. The party's top leadership will decide whether or not to…pic.twitter.com/gLv4mg4dRf
— ANI (@ANI)August 16, 2023

ಯಾವುದೇ ಅರ್ಥವಿಲ್ಲವೆಂದ ದಿಲೀಪ್ ಪಾಂಡೆಎಎಪಿ ನಾಯಕ ದಿಲೀಪ್ ಪಾಂಡೆ ಮಾತನಾಡಿ, 2024 ರ ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಉದ್ದೇಶದಿಂದ ಆ I.N.D.I.A ಮೈತ್ರಿಕೂಟದ ಭಾಗವಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಅಮಿತ್ ಶಾ ಹೇಳಿದ್ದೇನು?ಆಗಸ್ಟ್ 8, 2023 ರಂದು, ರಾಜ್ಯಸಭೆಯಲ್ಲಿ ದೆಹಲಿ ಸೇವಾ ಮಸೂದೆಯನ್ನು ಮಂಡಿಸುವಾಗ, ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಮೂಲಕ AAP ಅಧಿಕಾರಕ್ಕೆ ಬಂದಿತು. ದೆಹಲಿ ಸೇವಾ ಮಸೂದೆ ಅಂಗೀಕಾರವಾದ ಕೂಡಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗಿ ಬೀಳಲಿದ್ದು, ಮೈತ್ರಿ ಮುರಿದು ಬೀಳಲಿದೆ ಎಂದರು.
कांग्रेस पार्टी का विरोध करके ही AAP सत्ता में आई है और अब उसी के समर्थन से अनाधिकृत अधिकार पाना चाहती है।
दिल्ली सेवा बिल पास होते ही केजरीवाल जी पलट जाएंगे और गठबंधन टूट जाएगा।pic.twitter.com/NAyaeD2Dr7
— Amit Shah (@AmitShah)August 7, 2023

ಅಲ್ಕಾ ಲಂಬಾ ಹೇಳಿಕೆ ನಿರಾಕರಿಸಿದ ದೆಹಲಿ ಕಾಂಗ್ರೆಸ್ ಉಸ್ತುವಾರಿಅಲ್ಕಾ ಲಂಬಾ ಹೇಳಿಕೆ ಕುರಿತು ದೆಹಲಿ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಬಾರಿಯಾ ಮಾತನಾಡಿ ‘ಅಲ್ಕಾ ಲಂಬಾ ವಕ್ತಾರರು, ಆದರೆ ಅಂತಹ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಅವರು ಅಧಿಕೃತ ವಕ್ತಾರರಲ್ಲ. ಇಂದಿನ ಸಭೆಯಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಅಲ್ಕಾ ಲಾಂಬಾ ಅವರ ಹೇಳಿಕೆಯನ್ನು ನಾನು ಅಲ್ಲಗಳೆಯುತ್ತೇನೆ’ ಎಂದರು.
#WATCH| On Alka Lamba's statement regarding Delhi Congress asked to prepare to contest on all seven Lok Sabha seats, AICC in-charge Delhi Congress Deepak Babaria says "Alka Lamba is a spokesperson but she is not an authorised spokesperson for talking on such important issues. I…pic.twitter.com/rxCA7WpiqI
— ANI (@ANI)August 16, 2023

ಮುಂದಿನ ಸಭೆಯನ್ನು ಆಯೋಜಿಸಲಿರುವ ಉದ್ಧವ್ ಠಾಕ್ರೆವಾಸ್ತವವಾಗಿ 26 ಪಕ್ಷಗಳ I.N.D.I.A ಮೈತ್ರಿ ಒಕ್ಕೂಟದ ಮುಂದಿನ ಸಭೆಯು ಮುಂಬೈನಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ನಡೆಯಲಿದೆ. ಈ ಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಶಿವಸೇನೆ (ಯುಬಿಟಿ) ಹೊಂದಿದೆ. ಶನಿವಾರ ಮಾಹಿತಿ ನೀಡಿದ ಪಕ್ಷದ ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್, ಮುಂದಿನ ಸಭೆಯನ್ನು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಆಯೋಜಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಣ್ಣನ ಹುಟ್ಟುಹಬ್ಬದ ದಿನವೇ ಶ್ವಾಸನಾಳದಲ್ಲಿ ಕೇಕ್ ಸಿಲುಕಿ ಎಂಟು ವರ್ಷದ ಬಾಲಕ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
