ಗಾಂಧಿನಗರ:ಮುಂದಿನ ಪ್ರಧಾನಿ ಯಾರಾಗ್ತಾರೆ? ಈ ಪ್ರಶ್ನೆಗೆ ನರೇಂದ್ರ ಮೋದಿ, ರಾಹುಲ್​ ಗಾಂಧಿ, ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ್​… ಅವರುಗಳ ಹೆಸರು ಕೇಳಿಬರುತ್ತಿವೆ. ಇದರ ನಡುವೆಯೂ ಬಿಜೆಪಿ ವಲಯದಲ್ಲಿ ತೆರೆಮರೆಯಲ್ಲೇ ಮೋದಿ ಅವರ ವಯಸ್ಸಿನ ಬಗ್ಗೆ ಚರ್ಚೆಯೂ ಆಗ್ತಿದೆ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಬಿಜೆಪಿಯಲ್ಲಿ ಮುಂದಿನ ಪಿಎಂ ಅಭ್ಯರ್ಥಿ ಯಾರು? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದೆ.
ಈ ಪ್ರಶ್ನೆಗೆ ಇಂದು(ಭಾನುವಾರ) ಕೇಂದ್ರ ಗೃಹ ಸಚಿವ ಅಮಿತ್​ ಶಾ ಉತ್ತರಿಸಿದ್ದಾರೆ. ಗಾಂಧಿನಗರದಲ್ಲಿ ವಿವಿಧ ಯೋಜನೆ ಮತ್ತು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, 2024ರಲ್ಲಿ ನಡೆಯಲಿವರು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನಿಯಾಗಿ ಆಯ್ಕೆ ಮಾಡಲು ಇಡೀ ದೇಶವೇ ಕಾತರಿಂದ ಕಾಯುತ್ತಿದೆ. ಗುಜರಾತ್​ ವಿಧಾನಸಭಾ ಚುನಾವಣಾ ಫಲಿತಾಂಶವು ಮುಂದಿನ ಬಾರಿಯೂ ಮೋದಿ ಅವರೇ ಪ್ರಧಾನಿ ಆಗಿ ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟ ಸಂದೇಶ ಸಾರಿದೆ ಎಂದರು.
ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಗುಜರಾತ್​ ಮತ್ತು ಬಿಜೆಪಿಗೆ ಅವಮಾನಿಸಲು ಯತ್ನಿಸಿದವರಿಗೆ ಜನರೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಆಪ್​ ಮತ್ತು ಕಾಂಗ್ರೆಸ್​ಗೆ ಶಾ ಟಾಂಗ್​ ನೀಡಿದರು.
ಇಪ್ಪೀ ನೂಡಲ್ಸ್​​ ತಿನ್ನುವ ಆಸೆಯಲ್ಲಿದ್ದ ಬೆಂಗಳೂರಿನ ಮಹಿಳೆಗೆ ಶಾಕ್​! ಮಸಾಲ ಪ್ಯಾಕೇಟ್​ನಲ್ಲಿ ಬಳಸಿದ ಬ್ಯಾಂಡೇಜ್​ ಪತ್ತೆ!

ಮಟಮಟ ಮಧ್ಯಾಹ್ನ ಮಲಗಿದ ಸ್ಥಿತಿಯಲ್ಲೇ ಹೆಣವಾದ ಕೊಪ್ಪಳದ ಪ್ರೇಮಿಗಳು! ಬೆಚ್ಚಿಬಿದ್ದ ಸ್ಥಳೀಯರು

ಊಟದ ವಿಚಾರಕ್ಕೆ ಜಗಳ: ರಾಮನಗರದಲ್ಲಿ ತಾಯಿ-ಮಗ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 6 =
Remember me
