ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ-1860 (ಐಪಿಸಿ) ಬದಲಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್), ಕ್ರಿಮಿನಲ್ ಪೊ›ಸೀಜರ್ ಕೋಡ್-1973 (ಸಿಆರ್​ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್​ಎನ್​ಎಸ್) ಮತ್ತು ಭಾರತೀಯ ಸಾಕ್ಷ್ಯಾಧಾರ ಕಾಯ್ದೆ-1872 (ಇಂಡಿಯನ್ ಎವಿಡೆನ್ಸ್ ಆಕ್ಟ್) ಬದಲಿಗೆ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಹೊಸದಾಗಿ ಮೂರು ಕಾನೂನುಗಳನ್ನು ಜಾರಿ ಮಾಡಲು ಮುಂದಾಗಿದೆ. ಹಳೆಯ ಕಾನೂನುಗಳಿಗೆ ಹೊಸ ಹೆಸರಿನ ಜತೆ ಹೊಸ ರೂಪ, ಆಧುನಿಕತೆಯ ಸ್ಪರ್ಶ ಮತ್ತು ಮುಖ್ಯವಾಗಿ ಭಾರತೀಯತೆಯನ್ನು ಸೇರಿಸಿದ್ದೇವೆ ಎಂದು ಕೇಂದ್ರ ಹೇಳಿದೆ. ‘ಬ್ರಿಟಿಷ್ ಕಾಲದ ಕಾನೂನುಗಳನ್ನು ಕೊನೆಗೊಳಿಸಿ, ಅವುಗಳನ್ನು ನಮ್ಮ ನೆಲದ ಕಾನೂನಾಗಿ ಪರಿವರ್ತಿಸಿ, ಗುಲಾಮಿತನದಿಂದ ಹೊರಬಂದಿದ್ದೇವೆ. ಇವು ಯುಗ ಪರಿವರ್ತಕ ಕಾನೂನುಗಳು’ ಎನ್ನುವುದು ಗೃಹ ಸಚಿವ ಅಮಿತ್ ಶಾ ಸ್ಪಷ್ಟ ಅಭಿಮತ. 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಅಮಿತ್ ಶಾ ಮತ್ತು ತಂಡ, ಕ್ರಿಮಿನಲ್ ನ್ಯಾಯವ್ಯವಸ್ಥೆಯ ಆಮೂಲಾಗ್ರ ಪರಿವರ್ತನೆಯ ಕಾರ್ಯ ಆರಂಭಿಸಿತು. 2024ರ ಆರಂಭದ ವೇಳೆಗೆ ಹೊಸ 3 ಕಾನೂನುಗಳು ಜಾರಿ ಹಂತದಲ್ಲಿದ್ದು, ಭಾರತೀಯ ಕ್ರಿಮಿನಲ್ ನ್ಯಾಯವ್ಯವಸ್ಥೆಯಲ್ಲಿನ ಕ್ರಾಂತಿಕಾರಕ ಬದಲಾವಣೆಗೆ ತೆರೆದು ನಿಂತಿವೆ. ಈ ಕಾನೂನುಗಳ ತಿದ್ದುಪಡಿ, ಕೆಲ ಸೆಕ್ಷನ್​ಗಳ ರದ್ದತಿ, ಹೊಸ ನಿಬಂಧನೆಗಳ ಸೇರ್ಪಡೆ ಸೇರಿ ಹಲವು ವಿಚಾರಗಳ ಬಗ್ಗೆ ಕೇಂದ್ರ ಗೃಹ ಸಚಿವರು ವಿಜಯವಾಣಿ ನವದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ ಜತೆ ಸುದೀರ್ಘವಾಗಿ ರ್ಚಚಿಸಿದ್ದಾರೆ.
– ಈ ಮೂರು ಕಾನೂನುಗಳು ಬ್ರಿಟಿಷ್ ಆಡಳಿತಾಧಿಕಾರಿಗಳ ಅಧಿಕಾರ ರಕ್ಷಣೆಗಾಗಿ ಮಾಡಿಕೊಳ್ಳಲಾಗಿತ್ತೇ ವಿನಃ ಭಾರತೀಯರಿಗೆ ನ್ಯಾಯ ನೀಡಬೇಕೆಂಬ ಪ್ರಾಮಾಣಿಕ ಕಾಳಜಿ ಅವರಲ್ಲಿರಲಿಲ್ಲ. 150 ವರ್ಷಗಳ ಹಿಂದೆ ದೇಶದಲ್ಲಿ ಮಾನವ ಹತ್ಯೆಗಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳನ್ನು ಘೋರ ಅಪರಾಧಗಳೆಂದು ಪರಿಗಣಿಸಲಾಗುತ್ತಿರಲಿಲ್ಲ. ಆದರೆ, ಇಂದಿನ ಕಾಲಘಟ್ಟದಲ್ಲಿ ಮಹಿಳಾ ಅತ್ಯಾಚಾರ, ಮಕ್ಕಳ ಮೇಲಿನ ದೌರ್ಜನ್ಯ-ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಾನೂನುಗಳನ್ನು ರೂಪಿಸಲಾಗಿದೆ. ಸಂವಿಧಾನದ ಆಶಯದಂತೆ ಪ್ರತಿ ವ್ಯಕ್ತಿಗೆ ನ್ಯಾಯ ಒದಗಿಸುವುದು ಮತ್ತು ತನ್ನ ಸಂವಿಧಾನದತ್ತವಾದ ಅಧಿಕಾರವನ್ನು ಬಳಸಿಕೊಳ್ಳಲು ಅವಕಾಶ ನೀಡುವಂತಹ ಅವಕಾಶ ನೀಡುವಂತಹ 3 ಯುಗ ಪರಿವರ್ತಕ ಕಾನೂನುಗಳು ದೇಶದಲ್ಲಿ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿವೆ. ಹಿಂದಿನ ಕಾನೂನುಗಳ ಕೇಂದ್ರಬಿಂದು ದಂಡನೆಯಾಗಿತ್ತು. ಆದರೆ, ಈ ಕಾನೂನುಗಳ ಕೇಂದ್ರಬಿಂದು ನ್ಯಾಯ. ಒಟ್ಟಿನಲ್ಲಿ, ಕಾಶ್ಮೀರದಿಂದ ಕನ್ಯಾಕುಮಾರಿ, ಕಾಮಾಕ್ಯದವರೆಗೆ ಇಡೀ ದೇಶದಲ್ಲಿ ಒಂದೇ ಮಾದರಿಯ ಕಾನೂನು, ನ್ಯಾಯ ವ್ಯವಸ್ಥೆ ಜಾರಿಯಲ್ಲಿರಲಿದೆ. ಸ್ವರಾಜ್ಯ ಸ್ವಂತ ಭಾಷೆ, ಸ್ವಂತ ಸಂಸ್ಕೃತಿ ಮತ್ತು ಸ್ವ-ಆಡಳಿತ ಸ್ಥಾಪಿಸುವುದು. ಅದನ್ನು ನಾವು ಮಾಡಿದ್ದೇವೆ. ಈ ಕಾನೂನುಗಳೂ ಸ್ವರಾಜ್ಯದ ಒಂದುಭಾಗ. ವಿಶ್ವದಲ್ಲಿ ಹೆಚ್ಚುಕಡಿಮೆ 3 ಕ್ರಿಮಿನಲ್ ನ್ಯಾಯವ್ಯವಸ್ಥೆಗಳಿವೆ; ಲ್ಯಾಟಿನ್, ಐರಿಷ್ ಮತ್ತು ಭಾರತೀಯ ನ್ಯಾಯಪರಂಪರೆ. ನಾಲ್ಕನೆಯದಾಗಿ ಷರಿಯತ್ ಕಾನೂನು ಕೂಡ ಇದೆ. ಆದರೆ, ಷರಿಯತ್ ಕಾನೂನನ್ನು ಕಡಿಮೆ ದೇಶಗಳು ಅಳವಡಿಸಿಕೊಂಡಿವೆ. ನಾವು ಇದುವರೆಗೆ ಐರಿಷ್ ನ್ಯಾಯ ಪರಂಪರೆ ಅಳವಡಿಸಿಕೊಂಡು ಆಡಳಿತ ನಡೆಸುತ್ತಿದ್ದೆವು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರ್ಣಗೊಂಡ ನಂತರ ಭಾರತೀಯ ನ್ಯಾಯ ಪರಂಪರೆ ಅಳವಡಿಕೊಳ್ಳುತ್ತಿದ್ದೇವೆ. 2047ರ ಒಳಗಾಗಿ ದೇಶದಲ್ಲಿ ಗುಲಾಮಗಿರಿ ಸಂಕೇತ ಹೊಂದಿರುವ ಎಲ್ಲಾ ವಿಚಾರಗಳಿಂದಲೂ ನಾವು ಮುಕ್ತರಾಗಬೇಕು ಎಂಬ ಧ್ಯೇಯೋದ್ದೇಶ ಪಿಎಂ ನರೇಂದ್ರ ಮೋದಿಯವರದ್ದು. ನಮ್ಮ ಸಂಸ್ಕೃತಿಯ ಆಧಾರದ ಮೇಲೆ ಕಾನೂನುಗಳನ್ನು ರಚಿಸಿ, ನ್ಯಾಯವ್ಯವಸ್ಥೆಯ ಭಾರತೀಕರಣಕ್ಕೆ ನಾಂದಿ ಹಾಡಿದ್ದೇವೆ.
– ಸಮಯಕ್ಕೆ ಸರಿಯಾಗಿ ಪ್ರಾಪ್ತಿಯಾದರಷ್ಟೇ ಅದು ನ್ಯಾಯ. ವಿಳಂಬವಾದರೆ ಅದು ನ್ಯಾಯದ ನಿರಾಕರಣೆ. ಸಶಕ್ತವಾದ ಮತ್ತು ಸಕಾಲಕ್ಕೆ ನ್ಯಾಯ ಒದಗಿಸುವ ಸಲುವಾಗಿ ಪೊಲೀಸ್ (ತನಿಖಾ ವ್ಯವಸ್ಥೆ), ವಕೀಲರು ಮತ್ತು ನ್ಯಾಯಾಧೀಶರಿಗೂ ಸಮಯದ ಅವಧಿ ನಿಗದಿಪಡಿಸಿದ್ದೇವೆ. ಮೋದಿಯವರ ಸರ್ಕಾರದಲ್ಲಿ ವಿಚಾರಣೆಯನ್ನು ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ ಮುಂದಕ್ಕೆ ಹಾಕಿ, ನ್ಯಾಯದಾನ ನಿಧಾನಗೊಳಿಸುವ ವ್ಯವಸ್ಥೆ ಇರುವುದಿಲ್ಲ. ಹೊಸ ಕಾನೂನುಗಳಿಂದಾಗಿ ಮೂರೇ ವರ್ಷದೊಳಗೆ ನ್ಯಾಯ ಸಿಗುವ ವ್ಯವಸ್ಥೆ ತರುತ್ತಿದ್ದೇವೆ. ಎಫ್​ಐಆರ್​ನಿಂದ ಹಿಡಿದು ನ್ಯಾಯಾಲಯದ ತೀರ್ಪಿನವರೆಗೆ ಎಲ್ಲವೂ ಡಿಜಿಟಲೀಕರಣಗೊಳ್ಳುತ್ತಿದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಅತಿ ಹೆಚ್ಚು ಬಳಸುತ್ತಿರುವ ದೇಶ ಭಾರತವಾಗಲಿದೆ. 2027ರ ವೇಳೆಗೆ ದೇಶಾದ್ಯಂತ ಜೀರೋ ಎಫ್​ಐಆರ್, ಇ-ಎಫ್​ಐಆರ್ ಮತ್ತು ಎಲ್ಲಾ ಪ್ರಕರಣಗಳ ದಾಖಲೆ ಡಿಜಿಟಲೀಕರಣಗೊಳ್ಳಲಿದೆ. ಉದಾಹರಣೆಗೆ; ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ ವರದಿ ಕೈಯಲ್ಲಿಟ್ಟುಕೊಂಡು ಬೆಳಗ್ಗಿನಿಂದ ಸಂಜೆವರೆಗೆ ಕೋರ್ಟಿನಲ್ಲಿ ಕಾಯುವ ಅಗತ್ಯ ಇರುವುದಿಲ್ಲ. ಈ ವರದಿಗಳನ್ನೂ ಆನ್​ಲೈನ್ ಅಪ್​ಲೋಡ್ ಮಾಡಿ, ನ್ಯಾಯಾಧೀಶರು ಅಲ್ಲಿಂದಲೇ ವರದಿ ನೋಡಬಹುದಾಗಿದೆ. ಹಾಗೇ, ಖೈದಿಗಳು ಕೋರ್ಟ್ ಮುಂದೆ ಬರಬೇಕಿಲ್ಲ. ಅವರನ್ನು ಜೈಲಿನಲ್ಲೇ ಕೂರಿಸಿ, ಆನ್​ಲೈನ್​ನಲ್ಲಿ ಕೂಡ ವಿಚಾರಣೆ ನಡೆಸಬಹುದು. ಕೆಲ ಕ್ರಿಮಿನಲ್ ಪ್ರಕರಣಗಳಲ್ಲಿ ಸಾವಿರಾರು ಪುಟಗಳ ಚಾರ್ಜ್​ಶೀಟ್​ಗಳು ಸಲ್ಲಿಕೆಯಾಗುತ್ತಿದ್ದವು. ಈ ಪುಟಗಳ ಜೆರಾಕ್ಸ್ ತೆಗೆಯುವುದೇ ಹರಸಾಹಸ. ಆದರೆ, ಇನ್ನುಮುಂದೆ ಚಾರ್ಜ್ ಶೀಟ್ ಹೆಸರಲ್ಲಿ ಪುಟಗಟ್ಟಲೆಯ ಬುಕ್​ಲೆಟ್ ನೀಡುವ ಅಗತ್ಯವಿಲ್ಲ. ಅವುಗಳನ್ನು ಒಂದು ಪೆನ್​ಡ್ರೖೆವ್ ನಲ್ಲಿ ಹಾಕಿ ನ್ಯಾಯಾಧೀಶರಿಗೆ ಕೊಟ್ಟರೆ ಸಾಕು. ಸಮನ್ಸ್ ನೀಡಲು ಪೊಲೀಸರು ಆರೋಪಿ ಮನೆಗೆ ಹೋಗಬೇಕಿಲ್ಲ. ಆರೋಪಿಗೆ ಮೆಸೇಜ್ ಅಥವಾ ಇಮೇಲ್ ಮಾಡಿದರೂ ಸಾಕು.
– ನೋಡಿ, ಈ ಕಾನೂನುಗಳು ಕೇಂದ್ರಾಡಳಿತ ಪ್ರದೇಶ ಮಾತ್ರವಲ್ಲ, ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ. 7 ವರ್ಷಕ್ಕಿಂತ ಹೆಚ್ಚು ಅವಧಿಯ ಜೈಲುಶಿಕ್ಷೆ ಪ್ರಕರಣದಲ್ಲಿ ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್​ಎಸ್​ಎಲ್) ಪರಿಶೀಲನೆ ಕಡ್ಡಾಯಗೊಳಿಸಿದ್ದೇವೆ. ತನಿಖಾಧಿಕಾರಿಗಳ ಬೆರಳಚ್ಚು ಸಿಕ್ಕ ಮೇಲೆ ಯಾರೂ ಯಾರ ಮೇಲೂ ಪ್ರಭಾವ ಬೀರಲು ಸಾಧ್ಯವಿಲ್ಲ. ಅಲ್ಲದೆ, ಎಫ್​ಎಸ್​ಎಲ್ ವರದಿಯನ್ನು ನೇರವಾಗಿ ನ್ಯಾಯಾಲಯಕ್ಕೆ ನೀಡಬೇಕು. ಪೊಲೀಸರಿಗೆ ಒಂದು ಪ್ರತಿ ಕೊಟ್ಟರೆ ಸಾಕು. ಇದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನೂ ಬಹಳ ಹಿಂದಿನಿಂದಲೇ ಸಿದ್ಧಪಡಿಸಿಕೊಳ್ಳಲು ಶುರು ಮಾಡಿದ್ದೇವೆ. ಕರ್ನಾಟಕ, ಮಹಾರಾಷ್ಟ್ರ ಸೇರಿ ದೇಶದ ವಿವಿಧೆಡೆ ಫೊರೆನ್ಸಿಕ್ ಲ್ಯಾಬ್ ಯೂನಿವರ್ಸಿಟಿ ಆರಂಭಗೊಂಡಿದೆ. ಅಲ್ಲದೆ, ಪ್ರತಿ ಜಿಲ್ಲೆಯಲ್ಲಿ ಸಂಚಾರಿ ಫೊರೆನ್ಸಿಕ್ ವ್ಯಾನ್ ಆರಂಭಿಸಲಿದ್ದೇವೆ. ಅಪರಾಧ ನಡೆದ ಸ್ಥಳಕ್ಕೆ ತಕ್ಷಣವೇ ಈ ವ್ಯಾನ್ ತಲುಪಲಿದೆ. ಸದ್ಯ ದೇಶದಲ್ಲಿರುವ ಎಲ್ಲಾ ಖೈದಿಗಳ ಬೆರಳಚ್ಚನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಅದು ಎಲ್ಲಾ ಪೊಲೀಸ್ ಸ್ಟೆಷನ್​ಗಳಿಗೆ ಆನ್​ಲೈನ್​ನಲ್ಲಿ ಲಭ್ಯವಿದ್ದು, ಫಿಂಗರ್​ಪ್ರಿಂಟ್ ಮ್ಯಾಚಿಂಗ್ ಕೂಡ ಸುಲಭವಾಗಲಿದೆ. 7 ವರ್ಷಕ್ಕಿಂತ ಹೆಚ್ಚು ಜೈಲುಶಿಕ್ಷೆಯ ಅಪರಾಧಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಒಟ್ಟಿನಲ್ಲಿ, ಅಪರಾಧಿಗಳಿಗೆ ಶಿಕ್ಷೆ ನೀಡಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಶೇ. 90ರಷ್ಟು ಸುಲಭವಾಗಲಿದೆ.
– ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದ ಕಾನೂನಿನಲ್ಲಿ ಭಯೋತ್ಪಾದನೆಯ ವ್ಯಾಖ್ಯಾನವೇ ಇರಲಿಲ್ಲ. ಆದರೆ, ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುವ ಮೂಲಕ ಭಯೋತ್ಪಾದನೆಯ ವ್ಯಾಖ್ಯಾನವನ್ನೂ ಈ ಕಾನೂನಿನಲ್ಲಿ ಸೇರುವಂತೆ ಮಾಡಿದ್ದಾರೆ. ಮೊದಲ ಬಾರಿಗೆ, ನಮ್ಮ ಸರ್ಕಾರ ಭಯೋತ್ಪಾದನೆ ಅಪರಾಧೀಕರಿಸಲು ಮುಂದಾಗಿದೆ. ಇನ್ನುಮುಂದೆ ರಾಕ್ಷಸೀ ಪ್ರವೃತ್ತಿಯ ಯಾರೊಬ್ಬನೂ ಕಾನೂನಿನ ಸಂಕೋಲೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಡೈನಮೈಟ್, ಸ್ಪೋಟಕ ವಸ್ತು, ವಿಷಕಾರಿ ಅನಿಲ ಅಥವಾ ಪರಮಾಣು ಬಳಕೆಯಾದ ಘಟನೆಗಳಲ್ಲಿ ಸಾವು ಸಂಭವಿಸಿದರೆ, ತಪ್ಪಿತಸ್ಥರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿ ಎಂದು ಪರಿಗಣಿಸಲಾಗುವುದು. ಈ ವ್ಯಾಖ್ಯಾನದಿಂದಾಗಿ ಕಾನೂನಿನ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ. ಇದುವರೆಗೆ ಭಯೋತ್ಪಾದನೆಯಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈಗ ಸಾವಿನ ಪ್ರಮಾಣ ಶೇ. 70ರಷ್ಟು ಕಡಿಮೆಯಾಗಿದೆ.
– ಇದು ಪ್ರಜಾಪ್ರಭುತ್ವ. ಸರ್ಕಾರವನ್ನು ಯಾರು ಬೇಕಾದರೂ ಟೀಕಿಸಬಹುದು. ಅದಕ್ಕೆ ಅಡ್ಡಿಯಿಲ್ಲ. ಆದರೆ, ದೇಶದ ವಿರುದ್ಧ ಆಕ್ಷೇಪಾರ್ಹ ಟೀಕೆ, ಧ್ವಜಕ್ಕೆ ಅಪಮಾನ ಮಾಡುವಂಥ ಕೃತ್ಯಗಳಿಗೆ ಕಠಿಣ ಶಿಕ್ಷೆ ಇರಲಿದೆ. ಸಶಸ್ತ್ರ ಕ್ರಾಂತಿ, ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ದೇಶದ್ರೋಹ ಎಂದು ಪರಿಗಣಿಸಲಾಗುವುದು. ಬ್ರಿಟಿಷರು ಮಾಡಿದ ದೇಶದ್ರೋಹದ ಕಾನೂನು ಕೊನೆಗೊಂಡಿದೆ. ನಮಗೆ ದೇಶದ ಭದ್ರತೆಯೇ ಪ್ರಮುಖ. ದೇಶದ ಧ್ವಜ, ಭದ್ರತೆ ಅಥವಾ ಆಸ್ತಿಗೆ ಹಾನಿಮಾಡುವವರು ಜೈಲಿಗೆ ಹೋಗುತ್ತಾರೆ. ಹಿಂದೆ ಮಹಾತ್ಮಾ ಗಾಂಧಿ, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್​ರಂಥವರು ದೇಶದ್ರೋಹದ ಆರೋಪದಲ್ಲಿ ಹಲವು ವರ್ಷ ಜೈಲಿನಲ್ಲಿದ್ದರು. ತುರ್ತು ಪರಿಸ್ಥಿತಿಯ ವೇಳೆ ವಿರೋಧಪಕ್ಷದವರನ್ನು ಜೈಲಿನಲ್ಲಿಡಲು ಬ್ರಿಟಿಷ್ ಕಾಲದ ದೇಶದ್ರೋಹ ಕಾನೂನನ್ನು ಬಳಸಿಕೊಳ್ಳಲಾಗಿತ್ತು. ಈಗ ಮೋದಿ ಸರ್ಕಾರ ಬ್ರಿಟಿಷ್ ಚಿಂತನೆಯ ದೇಶದ್ರೋಹದ ಪರಿಕಲ್ಪನೆಯನ್ನೇ ರದ್ದುಗೊಳಿಸಿದೆ.
– ಈ ವಾದ ನಾನು ಒಪ್ಪಲಾರೆ. ನ್ಯಾಯಾಧೀಶರೊಬ್ಬರು ಪ್ರಕರಣದ ವಿಚಾರಣೆ ಮಾಡಿ, ಕಾಲಮಿತಿಯೊಳಗೆ ತೀರ್ಪು ನೀಡಬೇಕು. 45 ದಿನಗಳ ನಂತರ ತೀರ್ಪು ಬರೆಯಲು ಕುಳಿತರೆ ವಿಚಾರಣೆ ಸಂದರ್ಭದ ವಾದಗಳೆಲ್ಲ ನೆನಪಿನಲ್ಲಿರುತ್ತದೆಯೇ? ವಿಚಾರಣೆ ಪೂರ್ಣಗೊಳ್ಳುತ್ತಿದ್ದಂತೆಯೇ ತೀರ್ಪು ಬರೆಯಬೇಕು. ಯಾವುದೇ ಕಾರಣಕ್ಕೂ ಬಾಕಿ ಉಳಿಸಬಾರದು.
– ಅದಕ್ಕೆ ಕಡಿವಾಣ ಹಾಕುತ್ತಿದ್ದು, ನಿಬಂಧನೆಗಳನ್ನು ರೂಪಿಸಿ ದ್ದೇವೆ. ಸುಖಾಸುಮ್ಮನೆ ವಿಚಾರಣೆ ಮುಂದಕ್ಕೆ ಹಾಕಿ ಎಂದು ವಕೀಲರು ನ್ಯಾಯಾಧೀಶರಲ್ಲಿ ಕೇಳುವಂತಿಲ್ಲ. ಪೊಲೀಸ್, ವಕೀಲರು ಮತ್ತು ನ್ಯಾಯಾಧೀಶರಿಗೆ ಸಮಯದ ಗಡುವು ವಿಧಿಸುವುದರಿಂದ ಎಲ್ಲರೂ ಸಮಾನವಾಗಿ ಜವಾಬ್ದಾರಿಗಳನ್ನು ಅರಿತು ಕೆಲಸ ಮಾಡಬೇಕಿದೆ.
– ದುಷ್ಕೃತ್ಯ ಎಸಗಿದ ವ್ಯಕ್ತಿ ವಿಚಾರಣೆಗೆ ಗೈರಾದರೂ, ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಅಂದರೆ, ಗೈರುಹಾಜರಿಯಲ್ಲೂ ವಿಚಾರಣೆ ಎಂಬ ನಿಬಂಧನೆ ಅಳವಡಿಸಲಾಗಿದೆ. ಮುಂಬೈ ಬಾಂಬ್ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ವಿಚಾರಣೆ ನಡೆದಿದೆಯೇ? ಅಂಥದ್ದೇ ಮಾದರಿಯ ಹಲವು ಪ್ರಕರಣಗಳ ಅಪರಾಧಿಗಳು ಬೇರೆ ದೇಶಗಳಲ್ಲಿ ಅಡಗಿಕೊಂಡಿದ್ದಾರೆ. ಹೀಗಾಗಿ, ವಿಚಾರಣೆಗಳು ನಡೆಯುತ್ತಿಲ್ಲ. ಆದರೆ, ಮೋದಿಯವರ ಸರ್ಕಾರ ಇದಕ್ಕೆ ಕಡಿವಾಣ ಹಾಕಿದೆ. ಆರೋಪಿ ವಿಚಾರಣೆಗೆ ಬರದಿದ್ದರೂ, ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಲಿದೆ. 90 ದಿನಗಳೊಳಗೆ ನ್ಯಾಯಾಲಯದ ಮುಂದೆ ಆರೋಪಿ ಹಾಜರಾಗಬೇಕು ಎಂಬ ಕಡ್ಡಾಯ ನಿಬಂಧನೆ ಇದೆ. ಒಂದುವೇಳೆ ಗೈರಾದರೆ, ಆತನ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಲು ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಲಾಗುತ್ತದೆ. ನಂತರ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ, ಅಪರಾಧಿ ನೆಲೆಯೂರಿರುವ ದೇಶದ ಸರ್ಕಾರ, ಕಾನೂನು ಏಜೆನ್ಸಿಗೆ ಮನವರಿಕೆ ಮಾಡಲಾಗುತ್ತದೆ. ಇದರಿಂದ ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ವೇಗಪಡೆದುಕೊಳ್ಳುತ್ತದೆ. ಇಲ್ಲಿ ಅಪರಾಧಿಯ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವಿಚಾರಣೆ ಮುಗಿದ ನಂತರ 30 ದಿನಗಳೊಳಗೆ ಅಪರಾಧ ನಿರ್ಣಯ ಅಥವಾ ಖುಲಾಸೆಗೆ ಸಂಬಂಧಿಸಿದ ತೀರ್ಪನ್ನು ಬರವಣಿಗೆಯಲ್ಲಿ ನೀಡಿದ ಕಾರಣಗಳಿಂದಾಗಿ ಅದನ್ನು 45 ದಿನಗಳವರೆಗೆ ವಿಸ್ತರಿಸಬಹುದು.
– ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದ ಕಾನೂನಿನಲ್ಲಿ ಭಯೋತ್ಪಾದನೆಯ ವ್ಯಾಖ್ಯಾನವೇ ಇರಲಿಲ್ಲ. ಆದರೆ, ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುವ ಮೂಲಕ ಭಯೋತ್ಪಾದನೆಯ ವ್ಯಾಖ್ಯಾನವನ್ನೂ ಈ ಕಾನೂನಿನಲ್ಲಿ ಸೇರುವಂತೆ ಮಾಡಿದ್ದಾರೆ. ಮೊದಲ ಬಾರಿಗೆ, ನಮ್ಮ ಸರ್ಕಾರ ಭಯೋತ್ಪಾದನೆ ಅಪರಾಧೀಕರಿಸಲು ಮುಂದಾಗಿದೆ. ಇನ್ನುಮುಂದೆ ರಾಕ್ಷಸೀ ಪ್ರವೃತ್ತಿಯ ಯಾರೊಬ್ಬನೂ ಕಾನೂನಿನ ಸಂಕೋಲೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಡೈನಮೈಟ್, ಸ್ಪೋಟಕ ವಸ್ತು, ವಿಷಕಾರಿ ಅನಿಲ ಅಥವಾ ಪರಮಾಣು ಬಳಕೆಯಾದ ಘಟನೆಗಳಲ್ಲಿ ಸಾವು ಸಂಭವಿಸಿದರೆ, ತಪ್ಪಿತಸ್ಥರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿ ಎಂದು ಪರಿಗಣಿಸಲಾಗುವುದು. ಈ ವ್ಯಾಖ್ಯಾನದಿಂದಾಗಿ ಕಾನೂನಿನ ದುರುಪಯೋಗಕ್ಕೆ ಅವಕಾಶವಿರುವುದಿಲ್ಲ. ಇದುವರೆಗೆ ಭಯೋತ್ಪಾದನೆಯಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈಗ ಸಾವಿನ ಪ್ರಮಾಣ ಶೇ. 70ರಷ್ಟು ಕಡಿಮೆಯಾಗಿದೆ.
– ಇದು ಪ್ರಜಾಪ್ರಭುತ್ವ. ಸರ್ಕಾರವನ್ನು ಯಾರು ಬೇಕಾದರೂ ಟೀಕಿಸಬಹುದು. ಅದಕ್ಕೆ ಅಡ್ಡಿಯಿಲ್ಲ. ಆದರೆ, ದೇಶದ ವಿರುದ್ಧ ಆಕ್ಷೇಪಾರ್ಹ ಟೀಕೆ, ಧ್ವಜಕ್ಕೆ ಅಪಮಾನ ಮಾಡುವಂಥ ಕೃತ್ಯಗಳಿಗೆ ಕಠಿಣ ಶಿಕ್ಷೆ ಇರಲಿದೆ. ಸಶಸ್ತ್ರ ಕ್ರಾಂತಿ, ವಿಧ್ವಂಸಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ದೇಶದ್ರೋಹ ಎಂದು ಪರಿಗಣಿಸಲಾಗುವುದು. ಬ್ರಿಟಿಷರು ಮಾಡಿದ ದೇಶದ್ರೋಹದ ಕಾನೂನು ಕೊನೆಗೊಂಡಿದೆ. ನಮಗೆ ದೇಶದ ಭದ್ರತೆಯೇ ಪ್ರಮುಖ. ದೇಶದ ಧ್ವಜ, ಭದ್ರತೆ ಅಥವಾ ಆಸ್ತಿಗೆ ಹಾನಿಮಾಡುವವರು ಜೈಲಿಗೆ ಹೋಗುತ್ತಾರೆ. ಹಿಂದೆ ಮಹಾತ್ಮಾ ಗಾಂಧಿ, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್​ರಂಥವರು ದೇಶದ್ರೋಹದ ಆರೋಪದಲ್ಲಿ ಹಲವು ವರ್ಷ ಜೈಲಿನಲ್ಲಿದ್ದರು. ತುರ್ತು ಪರಿಸ್ಥಿತಿಯ ವೇಳೆ ವಿರೋಧಪಕ್ಷದವರನ್ನು ಜೈಲಿನಲ್ಲಿಡಲು ಬ್ರಿಟಿಷ್ ಕಾಲದ ದೇಶದ್ರೋಹ ಕಾನೂನನ್ನು ಬಳಸಿಕೊಳ್ಳಲಾಗಿತ್ತು. ಈಗ ಮೋದಿ ಸರ್ಕಾರ ಬ್ರಿಟಿಷ್ ಚಿಂತನೆಯ ದೇಶದ್ರೋಹದ ಪರಿಕಲ್ಪನೆಯನ್ನೇ ರದ್ದುಗೊಳಿಸಿದೆ.
– ಇದುವರೆಗೆ ಗುಂಪು ಹತ್ಯೆಯ (ಮಾಬ್ ಲಿಂಚಿಂಗ್) ವ್ಯಾಖ್ಯಾನವೇ ಇರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಲ ಸರ್ಕಾರೇತರ ಸಂಸ್ಥೆಗಳು ಈ ಹತ್ಯೆಗಳ ಆರೋಪವನ್ನು ಬಿಜೆಪಿ ಮೇಲೆ ಹಾಕಲು ಶುರು ಮಾಡಿದವು. ಆದರೆ ಗುಂಪು ಹತ್ಯೆಗೆ ಒಳಗಾದವರಲ್ಲಿ ಅತಿ ಹೆಚ್ಚು ಮಂದಿ ಕಳ್ಳತನ ಮಾಡುವವರೇ ಇದ್ದಾರೆನ್ನುವುದು ನಿಮಗೆ ಗೊತ್ತಿರಲಿ. ಸಣ್ಣಸಣ್ಣ ಹಳ್ಳಿಗಳಲ್ಲಿ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಾಗ ಅವರನ್ನು ಹೊಡೆದು ಸಾಯಿಸುತ್ತಾರೆ. ಇಂಥಾ ಪ್ರಕರಣಗಳು ದೇಶದಲ್ಲಿ ಹೆಚ್ಚಿವೆ. ಸಂಘಟಿತ ಅಪರಾಧಕ್ಕೆ ಹೊಸ ವ್ಯಾಖ್ಯಾನ ಸೇರಿಸುವ ಮೂಲಕ ಅದನ್ನೂ ಬಿಗಿಗೊಳಿಸಿದ್ದೇವೆ. 3 ವರ್ಷಗಳವರೆಗೆ ಶಿಕ್ಷೆಯಿರುವ ಪ್ರಕರಣಗಳ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಮಾಡಬಹುದು ಎಂಬ ನಿಯಮ ಪರಿಚಯಿಸಿದ್ದೇವೆ. ಮೋದಿಯವರ ಸರ್ಕಾರದಲ್ಲಿ ದೇಶದ ಬಡವರಿಗೆ ತ್ವರಿತ ನ್ಯಾಯದ ಭರವಸೆಯಿದೆ. ಪ್ರತಿ ಜಿಲ್ಲೆಯಲ್ಲಿ ಪ್ರಾಸಿಕ್ಯೂಷನ್ ನಿರ್ದೇಶಕರು ಇರುತ್ತಾರೆ. ನಿರ್ದಿಷ್ಟ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಬೇಕೇ ಬೇಡವೇ ಎಂಬುದನ್ನು ಸಹ ಅವರೇ ನಿರ್ಧರಿಸುತ್ತಾರೆ. ಇಲ್ಲಿಯವರೆಗೆ ಪೊಲೀಸರೇ ಅದನ್ನು ನಿರ್ಧರಿಸುತ್ತಿದ್ದರು.
– ಕಾನೂನಿನ ಕುರಿತ ತಪ್ಪುಗ್ರಹಿಕೆಯಿಂದ ಹೀಗಾಗಿದೆ. ಹಿಟ್ ಅಂಡ್ ರನ್ ಕೇಸಿನಲ್ಲಿ ಆರೋಪಿ 108ಕ್ಕೆ ಕರೆ ಅಥವಾ ಪೊಲೀಸರಿಗೆ ಮಾಹಿತಿ ನೀಡದೆ ತಪ್ಪಿಸಿಕೊಳ್ಳಲು ಯತ್ನಿಸಿ, ನಂತರ ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿ, ಪೊಲೀಸರು ಬಂಧಿಸಿದಾಗ ದಂಡ ಕಟ್ಟಲೇಬೇಕಲ್ಲವೇ? ಇಂದು ಅಪಘಾತದ ಕೇಸುಗಳಲ್ಲಿ 70% ಮಂದಿ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗದ ಕಾರಣಕ್ಕಾಗಿ ಸಾಯುತ್ತಿದ್ದಾರೆ. ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಹೆದ್ದಾರಿಗಳಲ್ಲಿ ಕೂಡ 108ಕ್ಕೆ ಕರೆ ಮಾಡಿದರೆ ಅವರು ಬರಲಿದ್ದಾರೆ. ಆಕ್ಸಿಡೆಂಟ್ ಬಳಿಕ ಗಾಡಿ ನಿಲ್ಲಿಸಿದರೆ ಗುಂಪು ದಾಳಿಗೆ ಒಳಗಾಗುತ್ತೇವೆ ಎಂಬ ಭಯ ಸಹಜ. ಅಂಥಾ ಸಂದರ್ಭದಲ್ಲಿ ಆ ಸ್ಥಳದಿಂದ ಕೆಲ ಕಿಮೀ ದಾಟಿ ನಂತರ 108ಗೆ ಕರೆ ಮಾಡಬಹುದಲ್ಲವೇ? 30 ನಿಮಿಷದ ನಂತರವೂ ಪೊಲೀಸರಿಗೆ ಮಾಹಿತಿ ನೀಡದಿದ್ದರೆ, ಅಂಥವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ಇವೆಲ್ಲದರ ಹೊರತಾಗಿಯೂ, ಟ್ರಕ್ ಮಾಲೀಕರು, ಡ್ರೖೆವರ್​ಗಳ ಜತೆ ನಾವು ಮಾತುಕತೆ ನಡೆಸಿ, ವಸ್ತು-ಸ್ಥಿತಿಗಳ ಬಗ್ಗೆ ಚರ್ಚೆ ಮಾಡುತ್ತೇವೆ.
– ತಮಿಳುನಾಡಿನಲ್ಲಿ ಆರೋಪಿಯೊಬ್ಬ ನನ್ನು ತನಿಖಾಧಿಕಾರಿಗಳು ಬಂಧಿಸಿದರು ಎಂದಿಟ್ಟುಕೊಳ್ಳೋಣ. ಆ ವ್ಯಕ್ತಿಗೆ ಹಠಾತ್ ಆರೋಗ್ಯ ಸಮಸ್ಯೆ ಉಂಟಾಗಿ, ಆತ ತನ್ನದೇ ಆಸ್ಪತ್ರೆಯಲ್ಲಿ ದಾಖಲಾಗುತ್ತಾನೆ. ಚಿಕಿತ್ಸೆಗಾಗಿ 15 ದಿನ ಆಸ್ಪತ್ರೆಯಲ್ಲಿರಬೇಕು ಎಂಬ ಪ್ರಮಾಣಪತ್ರವೂ ವೈದ್ಯರಿಂದ ಸಿಗುತ್ತದೆ. ಹಾಗಾ ದಾಗ ವಿಚಾರಣೆ ನಡೆಸುವುದೇಗೆ? 15 ದಿನವನ್ನು ವಿಶ್ರಾಂತಿ ಎಂದು ಪರಿಗಣಿಸುತ್ತೇವೆಯೇ ವಿನಃ ಅದನ್ನು ಕಸ್ಟಡಿಯಲ್ಲಿದ್ದ ಅವಧಿ ಎನ್ನಲಾಗದು. ಇಂಥಾ ಸಂದರ್ಭಗಳಿಗೆ ಅನ್ವಯ ಎಂಬಂತೆ 15 ದಿನಗಳ ಪೊಲೀಸ್ ಕಸ್ಟಡಿಯನ್ನು ಈ 60 ದಿನಗಳ ಅವಧಿಯಲ್ಲಿ ಬಳಸಿಕೊಳ್ಳಬಹುದು ಎಂದಷ್ಟೇ ಹೇಳಿರುವುದು. ನ್ಯಾಯ ಪಡೆಯುವ ಉದ್ದೇಶದಿಂದ ಹೀಗೆ ಮಾಡಿದ್ದೇವೆಯೇ ವಿನಃ ಒಬ್ಬರನ್ನು ಹಿಂಸಿಸಬೇಕು ಎಂಬ ಉದ್ದೇಶ ನಮ್ಮಲ್ಲಿಲ್ಲ. ಕಸ್ಟಡಿ ಅವಧಿ 15 ದಿನಕ್ಕಿಂತ ಹೆಚ್ಚಾದರೆ ಮಾತ್ರ ವೈಯಕ್ತಿಕ ಹಕ್ಕಿನ ದಮನ ಎನ್ನಬಹುದು. ಆದರೆ, ಇಲ್ಲಿ ಅವಧಿ ವಿಸ್ತರಣೆಯಾಗಿಲ್ಲ. ಅಂಥಾ ತಪ್ಪು ಕಲ್ಪನೆ ಬೇಡ.
– ದುಷ್ಕೃತ್ಯ ಎಸಗಿದ ವ್ಯಕ್ತಿ ವಿಚಾರಣೆಗೆ ಗೈರಾದರೂ, ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ಅಂದರೆ, ಗೈರುಹಾಜರಿಯಲ್ಲೂ ವಿಚಾರಣೆ ಎಂಬ ನಿಬಂಧನೆ ಅಳವಡಿಸಲಾಗಿದೆ. ಮುಂಬೈ ಬಾಂಬ್ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ವಿಚಾರಣೆ ನಡೆದಿದೆಯೇ? ಅಂಥದ್ದೇ ಮಾದರಿಯ ಹಲವು ಪ್ರಕರಣಗಳ ಅಪರಾಧಿಗಳು ಬೇರೆ ದೇಶಗಳಲ್ಲಿ ಅಡಗಿಕೊಂಡಿದ್ದಾರೆ. ಹೀಗಾಗಿ, ವಿಚಾರಣೆಗಳು ನಡೆಯುತ್ತಿಲ್ಲ. ಆದರೆ, ಮೋದಿಯವರ ಸರ್ಕಾರ ಇದಕ್ಕೆ ಕಡಿವಾಣ ಹಾಕಿದೆ. ಆರೋಪಿ ವಿಚಾರಣೆಗೆ ಬರದಿದ್ದರೂ, ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಲಿದೆ. 90 ದಿನಗಳೊಳಗೆ ನ್ಯಾಯಾಲಯದ ಮುಂದೆ ಆರೋಪಿ ಹಾಜರಾಗಬೇಕು ಎಂಬ ಕಡ್ಡಾಯ ನಿಬಂಧನೆ ಇದೆ. ಒಂದುವೇಳೆ ಗೈರಾದರೆ, ಆತನ ಅನುಪಸ್ಥಿತಿಯಲ್ಲೇ ವಿಚಾರಣೆ ನಡೆಸಲು ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಲಾಗುತ್ತದೆ. ನಂತರ ಕೋರ್ಟ್ ನೀಡುವ ತೀರ್ಪನ್ನು ಆಧರಿಸಿ, ಅಪರಾಧಿ ನೆಲೆಯೂರಿರುವ ದೇಶದ ಸರ್ಕಾರ, ಕಾನೂನು ಏಜೆನ್ಸಿಗೆ ಮನವರಿಕೆ ಮಾಡಲಾಗುತ್ತದೆ. ಇದರಿಂದ ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ವೇಗಪಡೆದುಕೊಳ್ಳುತ್ತದೆ. ಇಲ್ಲಿ ಅಪರಾಧಿಯ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ವಿಚಾರಣೆ ಮುಗಿದ ನಂತರ 30 ದಿನಗಳೊಳಗೆ ಅಪರಾಧ ನಿರ್ಣಯ ಅಥವಾ ಖುಲಾಸೆಗೆ ಸಂಬಂಧಿಸಿದ ತೀರ್ಪನ್ನು ಬರವಣಿಗೆಯಲ್ಲಿ ನೀಡಿದ ಕಾರಣಗಳಿಂದಾಗಿ ಅದನ್ನು 45 ದಿನಗಳವರೆಗೆ ವಿಸ್ತರಿಸಬಹುದು.
– ಹಿಂದೆ ಯುಪಿಎ ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರ ಕಂಡುಬಂದಾಗ ಅವರ ವಿರುದ್ಧ 50ಕ್ಕಿಂತಲೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದೆವು. ಎಫ್​ಐಆರ್ ದಾಖಲಾದವು. ನಾವು ಭ್ರಷ್ಟಾಚಾರ ಮಾಡಿದ್ದೇವೆ ಎನ್ನುವುದಾದರೆ ಕೋರ್ಟಿಗೆ ದೂರು ಸಲ್ಲಿಸಲಿ. ಇದು ಪ್ರಜಾಪ್ರಭುತ್ವ. ಅವರನ್ನು ಯಾರು ತಡೆದಿದ್ದಾರೆ? ಆದರೆ, ಕೇಸುಗಳನ್ನೇ ದಾಖಲಿಸದೆ ನಮ್ಮನ್ನು ದೂರಿದರೆ ಹೇಗೆ? ವಿಪಕ್ಷಗಳ ಕೆಲಸ ಏನು? ಹೇಗಿರುತ್ತದೆ ಎನ್ನುವುದನ್ನು ಅವರು ದಿವಂಗತ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್​ರನ್ನು ನೋಡಿ ಕಲಿಯಲಿ. ಪಾರ್ಲಿಮೆಂಟ್​ನಲ್ಲೂ ಸರಿಯಾಗಿ ಚರ್ಚೆಗೆ ಬರುವುದಿಲ್ಲ. ಏಕೆಂದರೆ, ಮೋದಿಯವರ ಸರ್ಕಾರದ ವಿರುದ್ಧ ಹೋರಾಡಲು ಅವರ ಬಳಿ ಏನೂ ಇಲ್ಲ ಅಷ್ಟೇ.
– ನಾನು ಯಾವುದೇ ನಿರ್ದಿಷ್ಟ ಕೇಸಿನ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ, ಇನ್ನುಮುಂದೆ ಯಾವ ಕೇಸಿನಲ್ಲೂ ಇಷ್ಟೊಂದು ವಿಳಂಬವಾಗೋದಿಲ್ಲ ಎನ್ನುವುದನ್ನಂತೂ ಸ್ಪಷ್ಟವಾಗಿ ಹೇಳಬಲ್ಲೆ. ಪ್ರಕರಣವೊಂದರಲ್ಲಿ ಎಫ್​ಐಆರ್ ದಾಖಲಾದ 3 ವರ್ಷದಲ್ಲಿ ಹೈಕೋರ್ಟ್ ತೀರ್ಪು ಕೂಡ ಬಂದಿರಬೇಕು ಎಂದು ಕಾನೂನು ಹೇಳುತ್ತದೆ.
ನೂರಾರು ಸಭೆಗಳ ಆಯೋಜನೆ..!:ಬಹಳ ಹಿಂದಿನಿಂದಲೇ ನಾವು ಈ ಕಾನೂನುಗಳ ಮೇಲೆ ಕೆಲಸ ಮಾಡಲು ಶುರು ಮಾಡಿದೆವು. ಜಮ್ಮುಕಾಶ್ಮೀರದ 370ನೇ ವಿಧಿ ನಿಷ್ಕ್ರಿಯಗೊಳಿಸುವ ಕೆಲಸ ಪೂರ್ಣಗೊಳ್ಳುತ್ತಿದ್ದಂತೆಯೇ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾದೆವು. 3 ಕಾನೂನುಗಳಿಗೆ ಅಂತಿಮ ರೂಪ ನೀಡುವ ಮುನ್ನ ನಾನು ಸುಪ್ರೀಂಕೋರ್ಟ್, ಹೈಕೋರ್ಟ್​ಗಳ ಹಲವು ನ್ಯಾಯಮೂರ್ತಿಗಳೊಂದಿಗೆ ಮಾತುಕತೆ, ಸಭೆಗಳನ್ನು ನಡೆಸಿದ್ದೇನೆ. ಅದೇ ರೀತಿ, ರಾಜ್ಯಪಾಲರು, ಐಎಎಸ್, ಐಪಿಎಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಂಸದರು, ಮುಖ್ಯಮಂತ್ರಿಗಳು, ಕಲೆಕ್ಟರೇಟ್ ಮತ್ತು ವಿವಿಧ ರಾಜ್ಯಗಳ ಶಾಸಕರ ಸಾವಿರಾರು ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ನೀವು ನಂಬುತ್ತೀರೋ ಇಲ್ಲವೋ, ಈ ಕಾನೂನುಗಳಿಗೆ ಸಂಬಂಧಿಸಿ ನಾನು 158ಕ್ಕಿಂತಲೂ ಹೆಚ್ಚು ಸಭೆಗಳನ್ನು ನಡೆಸಿದ್ದೇನೆ..! ಎಲ್ಲಾ ಸಭೆಗಳ ಮಿನ್ಯೂಟ್ಸ್ ನನ್ನ ಬಳಿ ಇವೆ. ವ್ಯಾಪಕ ಸಮಾಲೋಚನೆ, ಚರ್ಚೆ, ಸಂವಾದ, ಅಭಿಪ್ರಾಯಗಳನ್ನು ಸಂಗ್ರಹಿಸಿ ಕಾನೂನುಗಳನ್ನು ಸಿದ್ಧಪಡಿಸಿದ್ದೇವೆ. ಪ್ರಧಾನಿ ಮೋದಿಯವರೂ ಕಾಲಕಾಲಕ್ಕೆ ತಮ್ಮ ಸಲಹೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಸಂಸತ್​ನಲ್ಲಿ ಕಾನೂನುಗಳನ್ನು ಮಂಡಿಸಿದ ಬಳಿಕ ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಿಕೊಟ್ಟೆವು. ಅಲ್ಲಿ ಕೂಡ ವ್ಯಾಪಕ ಚರ್ಚೆಗಳಾಗಿ ಸಾವಿರಕ್ಕಿಂತಲೂ ಹೆಚ್ಚು ತಿದ್ದುಪಡಿಗಳನ್ನು ಸೂಚಿಸಲಾಗಿದ್ದು, ಬಹುತೇಕ ಎಲ್ಲವನ್ನೂ ಒಪ್ಪಿಕೊಂಡಿದ್ದೇವೆ. ನಂತರ, ಕಾನೂನಿಗೆ ಅಂತಿಮ ಸ್ಪರ್ಶ ನೀಡಲಾಯಿತು. ನನ್ನ ಅಭಿಪ್ರಾಯದಂತೆ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾನೂನೊಂದರ ರಚನೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಚರ್ಚೆ, ಸಮಾಲೋಚನೆಗಳು ನಡೆದಿರಲಿಕ್ಕಿಲ್ಲ.
ಸೆಕ್ಷನ್​ಗಳ ರದ್ದು, ಬದಲು, ಹೊಸ ಸೇರ್ಪಡೆ…:ಸಿಆರ್​ಪಿಸಿ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಕಾನೂನು ಬಂದಿದೆ. ಹಳೆ ಕಾನೂನಿನಲ್ಲಿ 484 ಸೆಕ್ಷನ್​ಗಳಿದ್ದವು. ಹೊಸ ಕಾನೂನಿನಲ್ಲಿ 531 ಸೆಕ್ಷನ್​ಗಳಿರಲಿವೆ. 177 ಸೆಕ್ಷನ್​ಗಳನ್ನು ಬದಲಿಸಲಾಗಿದೆ. 9 ಹೊಸ ಸೆಕ್ಷನ್​ಗಳು ಸೇರ್ಪಡೆಗೊಂಡಿದ್ದು, 14 ಸೆಕ್ಷನ್​ಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಅಪರಾಧ ದಂಡ ಸಂಹಿತೆ ಬದಲಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ ಹಿಂದಿನ 511 ಸೆಕ್ಷನ್​ಗಳ ಬದಲಿಗೆ 358 ಸೆಕ್ಷನ್​ಗಳಿರಲಿವೆ. 20 ಹೊಸ ಅಪರಾಧಗಳನ್ನು ಸೇರಿಸಿದ್ದೇವೆ. 23 ಅಪರಾಧಗಳಲ್ಲಿ ಕನಿಷ್ಠ ಕಡ್ಡಾಯ ಶಿಕ್ಷೆ ನಿಗದಿಪಡಿಸಲಾಗಿದೆ. 6 ಅಪರಾಧಗಳಲ್ಲಿ ಸಮುದಾಯ ಸೇವೆಯ ಶಿಕ್ಷೆ ವಿಧಿಸಲಾಗುತ್ತದೆ. 19 ಸೆಕ್ಷನ್​ಗಳನ್ನು ರದ್ದುಗೊಂಡಿವೆ. ಅದೇ ರೀತಿ ಭಾರತೀಯ ಸಾಕ್ಷ್ಯ ಕಾನೂನು 170 ಸೆಕ್ಷನ್ ಹೊಂದಿರಲಿದೆ. ಇಲ್ಲಿ 24 ಸೆಕ್ಷನ್​ಗಳನ್ನು ಬದಲಿಸಲಾಗಿದೆ. 2 ಹೊಸ ಸೆಕ್ಷನ್​ಗಳಿದ್ದರೆ, 6 ಸೆಕ್ಷನ್​ಗಳು ರದ್ದುಗೊಂಡಿವೆ.
ಸಂತ್ರಸ್ತ ಕೇಂದ್ರಿತ ಕಾನೂನು ಹೇಗೆಂದರೆ…:ಸಾಮಾನ್ಯ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾನೆ ಎಂದಿಟ್ಟುಕೊಳ್ಳಿ. ಎಫ್​ಐಆರ್ ಆಗುವುದೇ ಇಲ್ಲವೇ ಎಂಬ ಗೊಂದಲ ಆತನಿಗೆ ಬೇಡ. ಏಕೆಂದರೆ, 7 ದಿನಗಳ ಒಳಗಾಗಿ ಎಫ್​ಐಆರ್ ಮಾಡಬೇಕೋ ಬೇಡವೋ ಪೊಲೀಸರು ತೀರ್ವನಿಸಲೇಬೇಕು ಎನ್ನುವುದನ್ನು ಕಡ್ಡಾಯ ಮಾಡಿದ್ದೇವೆ. ತನಿಖೆ ಮುಂದುವರಿದರೆ 90 ದಿನಗಳಲ್ಲಿ ಪ್ರಕರಣದ ಕುರಿತ ವರದಿ ಸಲ್ಲಿಸಬೇಕು. ತನಿಖೆಯ ಪ್ರಗತಿಯನ್ನು ಆನ್​ಲೈನ್​ನಲ್ಲಿ ದಾಖಲು ಮಾಡಬೇಕು. ನ್ಯಾಯಾಲಯದಲ್ಲಿ ಏನಾಗುತ್ತಿದೆ ಎಂಬುದನ್ನು ದೂರುದಾರನಿಗೆ ಅಪ್ಡೇಟ್ ಮಾಡುತ್ತಿರಬೇಕು. ಕೆಲವೊಮ್ಮೆ ಪೊಲೀಸರು ಯಾರ ಗಮನಕ್ಕೂ ತರದೆ ಕೋರ್ಟ್​ನಲ್ಲಿದ್ದ ಕೇಸ್​ಗಳನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ಆದರೆ, ಸಂತ್ರಸ್ತ/ದೂರುದಾರನ ಅನುಮತಿ ಇಲ್ಲದೆ ನ್ಯಾಯಾಲಯ ಕೂಡ ಪೊಲೀಸರಿಗೆ ಕೇಸ್ ವಾಪಸ್ ತೆಗೆದುಕೊಳ್ಳಲು ಅವಕಾಶ ನೀಡಬಾರದು ಎಂಬ ಹೊಸ ನಿಬಂಧನೆ ಸೇರಿಸಿದ್ದೇವೆ. ಕ್ರಿಮಿನಲ್ ಕೇಸ್ ನಲ್ಲಿ ಭಾಗಿ ಎಂಬ ಕಾರಣಕ್ಕಾಗಿ ಪೊಲೀಸರು ಶಂಕಿತ ವ್ಯಕ್ತಿಗಳನ್ನು ಬಂಧಿಸಿ, ಠಾಣೆಯ ಜೈಲಿನಲ್ಲಿಡುತ್ತಾರೆ. ಈ ಬಗ್ಗೆ ಕುಟುಂಬಸ್ಥರಿಗೂ ಮಾಹಿತಿ ಇರುವುದಿಲ್ಲ. ಆದರೆ, ಇದಕ್ಕೂ ನಾವು ಕಡಿವಾಣ ಹಾಕಿದ್ದೇವೆ. ದೇಶದ ಪ್ರತಿ ಪೊಲೀಸ್ ಠಾಣೆಯೂ ಆನ್​ಲೈನ್ ರಿಜಿಸ್ಟರ್ ಸಿದ್ಧಪಡಿಸಿ, ತಮ್ಮ ಕಸ್ಟಡಿಯಲ್ಲಿರುವ ಆರೋಪಿಗಳ ಬಗ್ಗೆ ಮಾಹಿತಿ ಅಪ್ಡೇಟ್ ಮಾಡುತ್ತಿರಬೇಕು. ಕಸ್ಟಡಿಗೆ ತೆಗೆದುಕೊಂಡ ವ್ಯಕ್ತಿಯನ್ನು 24 ಗಂಟೆ ಒಳಗೆ ಕೋರ್ಟ್ ಮುಂದೆ ಹಾಜರುಪಡಿಸಬೇಕು. ಶಂಕಿತ ವ್ಯಕ್ತಿ ತಮ್ಮ ವಶದಲ್ಲಿರಬೇಕು ಎನ್ನುವುದಾದರೆ ಪೊಲೀಸರು ಕೋರ್ಟ್ ಅನುಮತಿ ಅಗತ್ಯ. ಕೋರ್ಟ್ ಒಪ್ಪಿದ ನಂತರ ಆನ್​ಲೈನ್ ನಲ್ಲಿ ಕೂಡ ರಿಜಿಸ್ಟರ್ ಮಾಡಿ, ಇಂಥಾ ವ್ಯಕ್ತಿಯೊಬ್ಬ ನಮ್ಮ ಕಸ್ಟಡಿಯಲ್ಲಿದ್ದಾನೆ ಎಂದು ಪೊಲೀಸರು ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ, ಏನೇ ಆದರೂ ಪೊಲೀಸರು ಜವಾಬ್ದಾರಿ ಹೊರಬೇಕಾಗುತ್ತದೆ. 3 ವರ್ಷದೊಳಗಿನ ಜೈಲುಶಿಕ್ಷೆ ಪ್ರಕರಣದಲ್ಲಿ 60 ವರ್ಷ ಮೇಲ್ಪಟ್ಟವರ ಬಂಧನಕ್ಕೂ ನಿಯಮ ರೂಪಿಸಲಾಗಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು, ಅವರ ಸ್ವಾಭಿಮಾನ, ಘನತೆ ಮರುಸ್ಥಾಪಿಸುವ ಉದ್ದೇಶ ನಮ್ಮದು. ಹಾಗಾಗಿಯೇ, ಇವು ಪಕ್ಕಾ ಸಂತ್ರಸ್ತ ಕೇಂದ್ರಿತ ಕಾನೂನುಗಳು. ಅಕ್ರಮ ವಸ್ತುಗಳ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಸಂಗ್ರಹಿಸಿದ ಪುರಾವೆಗಳ ವೀಡಿಯೊ ರೆಕಾರ್ಡಿಂಗ್ ಕೂಡ ಕಡ್ಡಾಯವಾಗಿದೆ. ಇದರಿಂದ ಅಪರಾಧದ ಪಟ್ಟವನ್ನು ಬೇರೊಬ್ಬರಿಗೆ ಕಟ್ಟುವ ಸಾಧ್ಯತೆ ಗಣನೀಯವಾಗಿ ತಗ್ಗಲಿದೆ.
ಜವಾಬ್ದಾರಿಯಿಂದ ವರ್ತಿಸಿದರೆ ಕಡಿಮೆ ಶಿಕ್ಷೆ…:18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಗಳ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ, ಮರಣದಂಡನೆ ವಿಧಿಸಲಾಗುವುದು. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಸಾಯುವ ತನಕ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅಪರಾಧ ಎಸಗಿದರೂ, ಅಲ್ಲಿ ಯಾವುದೇ ಹತ್ಯೆಯಾಗದೆ, ಘಟನೆ ಬಗ್ಗೆ ಆರೋಪಿಯು ನೇರವಾಗಿ ಪೊಲೀಸರಿಗೆ ವರದಿ ಮಾಡಿ, ಸಂತ್ರಸ್ತರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೆ, ಆತನ ಶಿಕ್ಷೆ ಪ್ರಮಾಣ ತಗ್ಗಿಸುವ ಅವಕಾಶ ಕಲ್ಪಿಸಲಾಗಿದೆ. ಹಿಟ್ ಅಂಡ್ ರನ್ (ಗುದ್ದೋಡು) ಪ್ರಕರಣಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾಮಾನ್ಯ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಾನೆ ಎಂದಿಟ್ಟುಕೊಳ್ಳಿ. ಎಫ್​ಐಆರ್ ಆಗುತ್ತದೆಯೇ ಇಲ್ಲವೇ ಎಂಬ ಗೊಂದಲ ಆತನಿಗೆ ಬೇಡ. ಏಕೆಂದರೆ, 7 ದಿನಗಳ ಒಳಗಾಗಿ ಎಫ್​ಐಆರ್ ಮಾಡಬೇಕೋ ಬೇಡವೋ ಪೊಲೀಸರು ತೀರ್ವನಿಸಲೇಬೇಕು ಎನ್ನುವುದನ್ನು ಕಡ್ಡಾಯ ಮಾಡಿದ್ದೇವೆ.
-ಅಮಿತ್​ ಷಾ, ಕೇಂದ್ರ ಗೃಹಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
