ನವದೆಹಲಿ:ರಾಜಧಾನಿ ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರುತ್ತಿದ್ದು, ಸೂಕ್ತ ಚಿಕಿತ್ಸಾ ವ್ಯವಸ್ಥೆಯೂ ಇಲ್ಲದಿರುವುದು ಸಾರ್ವಜನಿಕರ ಕಳವಳ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ, ಅಂಡಮಾನ್-ನಿಕೋಬಾರ್ ಮತ್ತು ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿಗಳಾದ ಅವನೀಶ್ ಕುಮಾರ್, ಮೋನಿಕಾ ಪ್ರಿಯದರ್ಶಿನಿ, ವಿಕ್ರಮ್ ಸಿಂಗ್ ಮಲಿಕ್ ಮತ್ತು ಗೌರವ್ ಸಿಂಗ್ ರಜಪೂತ್ ರನ್ನು ಗೃಹ ಸಚಿವ ಅಮಿತ್ ಷಾ ದೆಹಲಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಇಲ್ಲಿ ಕೋವಿಡ್-19 ಬಿಕ್ಕಟ್ಟು ತಾರಕಕ್ಕೇರಿರುವುದರಿಂದ ಈ ಅಧಿಕಾರಿಗಳಿಗೆ ದೆಹಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಪರಿಸ್ಥಿತಿ ನಿರ್ವಹಿಸುವ ಜವಾಬ್ದಾರಿ ವಹಿಸಲಾಗಿದೆ. ಕರೊನಾ ಚಿಕಿತ್ಸೆ ಒದಗಿಸುತ್ತಿರುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಸ್ಥಳೀಯ ಪಾಲಿಕೆಗಳ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ನಂತರ ಈ ತಂಡ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ದೆಹಲಿಯ ಕೇಂದ್ರ ಗೃಹ ಸಚಿವಾಲಯದಲ್ಲಿ ಸಚಿವ ಅಮಿತ್ ಷಾ ನೇತೃತ್ವ ಮತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಸಿಎಂ ಅರವಿಂದ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಉನ್ನತಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮಧ್ಯೆ ರಾಷ್ಟ್ರ ರಾಜಧಾನಿ ಪ್ರದೇಶದ ಕೋವಿಡ್ ಪರಿಸ್ಥಿತಿ ಕುರಿತು ರ್ಚಚಿಸಲು ಅಮಿತ್ ಷಾ ಸೋಮವಾರ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.ಇದನ್ನೂ ಓದಿ:ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!
2 ದಿನದಲ್ಲಿ ಪರೀಕ್ಷೆ ದುಪ್ಪಟ್ಟು:ಮುಂದಿನ 2 ದಿನಗಳಲ್ಲಿ ಕರೊನಾ ಪರೀಕ್ಷೆ ಪ್ರಮಾಣ ದುಪ್ಪಟ್ಟುಗೊಳಿಸಲು ತೀರ್ಮಾ ನಿಸಲಾಗಿದ್ದು, ನಂತರದ ದಿನಗಳಲ್ಲಿ ಈ ಪ್ರಮಾಣ ಮೂರು ಪಟ್ಟು ಹೆಚ್ಚಾಗಬೇಕು ಎಂದು ಅಮಿತ್ ಷಾ ನಿರ್ದೇಶನ ನೀಡಿದ್ದಾರೆ. ಮನೆ ಮನೆಗಳಿಗೆ ತೆರಳಿ ಕರೊನಾ ಶಂಕಿತ ಸೋಂಕಿತರ ಬಗ್ಗೆ ಸಮೀಕ್ಷೆ ನಡೆಸಿ, ಪರೀಕ್ಷೆಗಳನ್ನು ಮಾಡಬೇಕು ಎಂದು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕರೊನಾ ಚಿಕಿತ್ಸೆಗೆ ದುಬಾರಿ ವೆಚ್ಚ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿ ಡಾ. ಪಾಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಶೇ.60ರಷ್ಟು ಕೋವಿಡ್ ಬೆಡ್​ಗಳನ್ನು ಸೋಂಕಿತರಿಗೆ ಕಡಿಮೆ ವೆಚ್ಚದಲ್ಲಿ ನೀಡುವಂತೆ ಕ್ರಮ ಕೈಗೊಳ್ಳಲು ಸಮಿತಿಗೆ ಸೂಚಿಸಲಾಗಿದೆ. ಸಮಿತಿ ತನ್ನ ವರದಿಯನ್ನು ಸೋಮವಾರ ಸಂಜೆಯೊಳಗಾಗಿ ಗೃಹ ಸಚಿವಾಲಯಕ್ಕೆ ಸಲ್ಲಿಸಲಿದೆ.
ಜುಲೈ ಅಂತ್ಯಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ 5.50 ಲಕ್ಷಕ್ಕೇರುವ ಆತಂಕದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಇಲ್ಲಿ 40 ಹೊಟೇಲ್ ಹಾಗೂ 77 ಬಾಂಕ್ವೆಟ್ ಹಾಲ್ ಗಳನ್ನು ಕೋವಿಡ್ ಚಿಕಿತ್ಸಾ ಘಟಕಗಳನ್ನಾಗಿ ಪರಿವರ್ತಿಸಲು ತೀರ್ವನಿಸಿದೆ. 40 ಹೊಟೇಲ್ ಗಳಲ್ಲಿ 4628 ಬೆಡ್​ಗಳು ಹಾಗೂ 77 ಬಾಂಕ್ವೆಟ್ ಹಾಲ್ ಗಳಲ್ಲಿ 11229 ಬೆಡ್​ಗಳನ್ನು ಸಿದ್ಧಪಡಿಸಬಹುದು ಎಂದು ಸರ್ಕಾರ ಅಂದಾಜಿಸಿದೆ.ಇದನ್ನೂ ಓದಿ:ರಾಜ್ಯದಲ್ಲಿ ಸಕ್ರಿಯ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ; ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸೋಂಕು
ಕಳೆದೊಂದು ವಾರದಲ್ಲಿ ಕರೊನಾ ಪರೀಕ್ಷೆ ನಡೆಸಿರುವ ಮೂರು ವ್ಯಕ್ತಿಗಳಲ್ಲಿ ಸರಾಸರಿ ಒಬ್ಬರಿಗೆ ಸೋಂಕಿರುವುದು ದೃಢವಾಗಿದೆ ಎಂದು ಸರ್ಕಾರದ ದಾಖಲೆಗಳೇ ಹೇಳುತ್ತಿವೆ. ಕಳೆದೊಂದು ವಾರದಲ್ಲಿ ಕರೊನಾ ದೃಢವಾದ ಕೇಸುಗಳ ರಾಷ್ಟ್ರೀಯ ಸರಾಸರಿ ಶೇ.7ರಷ್ಟಿದ್ದರೆ, ದೆಹಲಿಯಲ್ಲಿ ಈ ಸರಾಸರಿ ಶೇ.30ಕ್ಕೇರಿದೆ. ಮುಂದಿನ ದಿನಗಳಲ್ಲೂ ಈ ಪ್ರಮಾಣ ಏರಲಿದ್ದು, ಕರೊನಾ ವೈರಾಣು ಸಾಮುದಾಯಿಕವಾಗಿ ಹಬ್ಬುತ್ತಿದೆ ಎಂಬುದಕ್ಕೆ ಈ ದಾಖಲೆಗಳೇ ಸಾಕ್ಷಿ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಇದನ್ನೂ ಓದಿ:ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ​ಕುಮಾರ್​ ಕುಟುಂಬ
ಕೋವಿಡ್ ಬೆಡ್ ಗಳ ವ್ಯಾಪಕ ಕೊರತೆ ನೀಗಿಸಲೂ ಕೇಂದ್ರ ಮುಂದಾಗಿದ್ದು, 500 ರೈಲ್ವೆ ಬೋಗಿಗಳನ್ನು ಪೂರೈಕೆ ಮಾಡಲಿದೆ. ಕೋವಿಡ್ ನಿಂದಾಗಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಗಂಟೆ ಗಟ್ಟಲೆ ಕಾಯುವಂಥ ಸ್ಥಿತಿ ನಿರ್ವಣವಾಗಿದೆ. ಹೀಗಾಗಿ, ಅಂತ್ಯ ಸಂಸ್ಕಾರ ಕೇಂದ್ರಗಳಲ್ಲಿ ಈ ವಿಳಂಬ ತಡೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏತನ್ಮಧ್ಯೆ, ದೆಹಲಿಯ ಎಲ್ಲಾ ಕಂಟೇನ್ಮೆಂಟ್ ವಲಯಗಳ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಪ್ರದೇಶಗಳ ನಿವಾಸಿಗರಿಗೆ ಆರೋಗ್ಯ ಸೇತು ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಕೇಂದ್ರ ಗೃಹ ಸಚಿವರೊಂದಿಗೆ ಅತ್ಯಂತ ಮಹತ್ವದ ಸಭೆಯನ್ನು ನಡೆಸಿದ್ದೇವೆ. ದೆಹಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಒಟ್ಟಾಗಿ ಕರೊನಾ ವಿರುದ್ಧ ಹೋರಾಡುತ್ತೇವೆ.
| ಅರವಿಂದ ಕೇಜ್ರಿವಾಲ್ದೆಹಲಿ ಮುಖ್ಯಮಂತ್ರಿ
ಜುಲೈ 2ಕ್ಕೆ ಡಿಕೆಶಿ ಪದಗ್ರಹಣ ಫಿಕ್ಸ್? …ಈ ಸ್ಥಳದಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
