ನವದೆಹಲಿ:ಬಿಜೆಪಿ ಸೇರ್ಪಡೆಯಾದ ಸಿಂಧಿಯಾ ರಾಜವಂಶಸ್ಥ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಇಂದು ಗೃಹ ಸಚಿವ ಅಮಿತ್ ಷಾ ಬಿಜೆಪಿಗೆಸ್ವಾಗತ ಕೋರಿದ್ದಾರೆ.
ತಾವು ಜ್ಯೋತಿರಾದಿತ್ಯ ಸಿಂಧಿಯಾ ಕೈ ಹಿಡಿದುಕೊಂಡು ಅವರಿಗೆ ಸ್ವಾಗತ ಕೋರುತ್ತಿರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಅಮಿತ್​ ಷಾ, ಇಂದು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದೆ. ಸಿಂಧಿಯಾ ಜೀ ಅವರು ನಮ್ಮ ಪಕ್ಷಕ್ಕೆ ಸೇರಿದ್ದರಿಂದ, ಮಧ್ಯಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಬಿಜೆಪಿಯ ಸಂಕಲ್ಪಕ್ಕೆ ಮತ್ತಷ್ಟು ಬಲಬಂದಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಮೊದಲು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಳಿಕ ಅಮಿತ್ ಷಾ ಅವರ ಭೇಟಿಗೆ ತೆರಳಿದ್ದರು. ರಾಜನಾಥ್​ ಸಿಂಗ್ ಕೂಡ ಟ್ವೀಟ್​ ಮೂಲಕ ಬಿಜೆಪಿಯ ಹೊಸ ನಾಯಕನಿಗೆ ಸ್ವಾಗತ ಕೋರಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಸೇರ್ಪಡೆ ಬಿಜೆಪಿಯ ಬಲ ಹೆಚ್ಚಲು ಸಹಾಯವಾಗುತ್ತದೆ. ಅವರ ಎಲ್ಲ ಆಶಯಗಳೂ ಈಡೇರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದರು.
ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ (ಮಾ.10) ನವದೆಹಲಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಷಾ ಅವರನ್ನು ಭೇಟಿಯಾಗಿದ್ದರು. ಅದಾದ ಕೆಲವೇ ಹೊತ್ತಲ್ಲಿ ಕಾಂಗ್ರೆಸ್​ಗೆ ನೀಡಿದ ರಾಜೀನಾಮೆ ಪತ್ರವನ್ನು ಬಹಿರಂಗಗೊಳಿಸಿದ್ದರು. ನಂತರ ಮಾ.11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.(ಏಜೆನ್ಸೀಸ್​)
Met with Shri Jyotiraditya Scindia today. I welcome him to the BJP. His joining will help in further strengthening the party. I extend my best wishes to him in all his endeavours.@JM_Scindiapic.twitter.com/84nxoX71Ws
— Rajnath Singh (@rajnathsingh)March 12, 2020

ದೆಹಲಿ ಹಿಂಸಾಚಾರಕ್ಕೆ ವಿದೇಶಿ ಮುಸ್ಲಿಂ ಎನ್​ಜಿಒದ ಹಣಕಾಸು ಸಹಾಯ…

ನೀವೇನಾದ್ರೂ ಜಿಮ್​ಗೆ ಹೋಗುತ್ತಿದ್ದೀರಾ? ತುಂಬ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ವೈದ್ಯರು…ಬೆವರು ಡೇಂಜರ್…!

ಒತ್ತುವರಿ ಮಾಡಿದ್ದಾರೆಂದು ರೈತನ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟ ಕಾಫಿ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
