ನವದೆಹಲಿ:ಚೀನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ‘ಸುರೇಂದರ್ ಮೋದಿ’ ಹ್ಯಾಷ್ ಟ್ಯಾಗ್ ಟ್ವೀಟ್ ಮೂಲಕ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್​ನ ನಾಯಕರು ಚೀನಾ ಮತ್ತು ಪಾಕ್​ನ ಕೈಗೊಂಬೆಯಂತೆ ವರ್ತಿಸುವ ಕ್ಷುಲ್ಲಕ ರಾಜಕಾರಣವನ್ನು ಬಿಡಬೇಕು. ಚೀನಾ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಸಂಸತ್ತಿನಲ್ಲಿ ರ್ಚಚಿಸಲು ಸಿದ್ಧವಿದೆ ಎಂದಿದ್ದಾರೆ. ಭಾರತ ವಿರೋಧಿ ಪ್ರಚಾರವನ್ನು ಎದುರಿಸುವ ಸಾಮರ್ಥ್ಯ ನಮಗಿದೆ. ಆದರೆ, ದೊಡ್ಡ ಪಕ್ಷದ ಮಾಜಿ ಅಧ್ಯಕ್ಷರೇ ಬಿಕ್ಕಟ್ಟಿನ ಸಮಯದಲ್ಲಿ ವಿರೋಧಿಗಳ ತಾಳಕ್ಕೆ ಕುಣಿದರೆ ಬಹಳ ನೋವಾಗು ತ್ತದೆ ಎಂದಿದ್ದಾರೆ.
ಕಳೆದ ಭಾನುವಾರ ಸರಣಿ ಟ್ವೀಟ್ ಮಾಡಿದ್ದ ರಾಹುಲ್, ಪ್ರಧಾನಿ ಮೋದಿ ವಾಸ್ತವದಲ್ಲಿ ಸುರೇಂದರ್ ಮೋದಿ ಎಂದು ಅಣಕ ಮಾಡಿದ್ದರು. ದೆಹಲಿಯಲ್ಲಿ ಕೋವಿಡ್-19 ಸಾಮುದಾಯಿಕ ಪ್ರಸರಣದ ಹಂತಕ್ಕೆ ತಲುಪಿಲ್ಲ ಎಂದು ಸಚಿವ ಅಮಿತ್ ಷಾ ತಿಳಿಸಿದ್ದಾರೆ. ದೆಹಲಿಯಲ್ಲಿ 24 ತಾಸಿನಲ್ಲಿ ಸುಮಾರು 3 ಸಾವಿರ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಷಾ ಈ ಸ್ಪಷ್ಟನೆ ನೀಡಿದ್ದಾರೆ. ಸೋಂಕು ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಮೂವರು ಹಿರಿಯ ವೈದ್ಯರೊಂದಿಗೆ ರ್ಚಚಿಸಿದ್ದು, ಸೋಂಕು ಸಾಮುದಾಯಿಕ ಹಂತಕ್ಕೆ ತಲುಪಿಲ್ಲವೆಂದು ಅವರು ಹೇಳಿದ್ದಾರೆ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆಗೆ ಒಳಪಟ್ಟ ಸ್ಯಾಂಪಲ್​ಗಳ ಪೈಕಿ ಶೇ. 30 ಪಾಸಿಟಿವ್ ಬರುತ್ತಿದೆ. ಈಗ 20 ಸಾವಿರ ಪರೀಕ್ಷೆಗಳು ನಡೆಸುತ್ತಿವೆ. ಯಾವುದೇ ಮೂಲದಿಂದಲೂ ಸೋಂಕು ತಗುಲಿರುವುದು ಪತ್ತೆಯಾಗದಿದ್ದ ಸಂದರ್ಭದಲ್ಲಿ 3ನೇ ಹಂತದ ಪ್ರಸರಣ ಅಥವಾ ಸಾಮುದಾಯಿಕ ಹರಡುವಿಕೆ ಎಂದು ಹೇಳಬಹುದಾಗಿದೆ. ಈ ಹಂತಕ್ಕೆ ಕೋವಿಡ್-19 ತಲುಪಿಲ್ಲ ಎಂದು ಷಾ ಹೇಳಿದ್ದಾರೆ.
ದೆಹಲಿಯಲ್ಲಿ ಜುಲೈ ಅಂತ್ಯಕ್ಕೆ ಕೋವಿಡ್-19 ಪ್ರಕರಣಗಳ ಸಂಖ್ಯೆ 5.50 ಲಕ್ಷ ತಲುಪುತ್ತದೆ ಎಂದು ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಹೇಳಿಕೆ ಜನರಲ್ಲಿ ಗಾಬರಿ ಉಂಟು ಮಾಡುತ್ತದೆ. ಆದರೆ, ಇಂಥ ಪರಿಸ್ಥಿತಿ ಖಂಡಿತ ಉಂಟಾಗುವುದಿಲ್ಲ.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
