ಹೈದರಾಬಾದ್​:ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್​ಗೂ ಮುನ್ನ ಗಮನ ಸೆಳೆಯುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಗಡ್ಕರಿ..
ಈ ಮೊದಲು ರಿಲೀಸ್ ಆದ ‘ಕಲ್ಕಿ’ ಟೀಸರ್​ನಲ್ಲಿ ಪ್ರಭಾಸ್ ರನ್ನು ಹೈಲೈಟ್ ಮಾಡಲಾಗಿತ್ತು. ಅಮಿತಾಭ್ ಬಚ್ಚನ್ ಅವರು ಹೀಗೆ ಬಂದು ಹಾಗೆ ಹೋಗಿದ್ದರು. ಆದರೆ, ಈಗ ಅವರ ಸಂಪೂರ್ಣ ಪಾತ್ರ ಪರಿಚಯ ಮಾಡಲಾಗಿದೆ. ಮಹಾಭಾರತದ ಅಶ್ವಾತ್ಥಾಮನಾಗಿ ಅವರು ಕಾಣಿಸಿಕೊಂಡಿದ್ದಾರೆ. ಮಹಾಭಾರತದಿಂದ ಸಿನಿಮಾದ ಕಥೆ ಆರಂಭವಾಗಲಿದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಮೊದಲು ಹೇಳಿಕೊಂಡಿದ್ದರು.
ಇನ್ನು ಈ ಸಿನಿಮಾದ ಪಾತ್ರವರ್ಗ ದೊಡ್ಡದಿದೆ. ಕಮಲ್ ಹಾಸನ್ ಸೇರಿ ಅನೇಕರು ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ನ ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಪರಿಚಯಿಸೋ ಟೀಸರ್ ನೋಡಿದವರಿಗೆ ಮತ್ತೊಂದು ಕುತೂಹಲವೂ ಮೂಡಿದೆ.
‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿದೆ. ಆದರೆ, ಈಗ ರಿಲೀಸ್ ಆದ ಟೀಸರ್​ನಲ್ಲಿ ಸಿನಿಮಾದ ರಿಲೀಸ್ ದಿನಾಂಕ ಇಲ್ಲ. ಜೊತೆಗೆ ತಂಡ ಯಾವುದೇ ಪ್ರಚಾರದಲ್ಲೂ ಭಾಗಿ ಆಗುತ್ತಿಲ್ಲ. ಹೀಗಾಗಿ, ಸಿನಿಮಾ ಸದ್ಯಕ್ಕೆ ರಿಲೀಸ್ ಆಗುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
‘ನನ್ನ ಹಿಂಭಾಗವನ್ನೇ ಯಾಕೆ ತೋರಿಸ್ತೀರಿ?’: ಖ್ಯಾತ ನಟಿ ಹೀಗೆನ್ನಲು ಕಾರಣವಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
